ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘರ್ಷದಲ್ಲಿ ಝೆಲೆನ್‌ಸ್ಕಿ ಮೃತಪಟ್ಟರೂ ಉಕ್ರೇನ್ ಸರ್ಕಾರ ನಡೆಯುತ್ತದೆ: ಬ್ಲಿಂಕೆನ್

Last Updated 7 ಮಾರ್ಚ್ 2022, 8:01 IST
ಅಕ್ಷರ ಗಾತ್ರ

ವಾಷಿಂಗ್ಟನ್: ರಷ್ಯಾ ವಿರುದ್ಧದ ಸಂಘರ್ಷದಲ್ಲಿ ಒಂದು ವೇಳೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮೃತಪಟ್ಟರೂ, ಉಕ್ರೇನ್‌ ಸರ್ಕಾರ ಮುಂದುವರಿಯುವುದಕ್ಕೆ ಬೇಕಾದ ಯೋಜನೆಗಳು ಸಿದ್ಧವಾಗಿವೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟೊನಿ ಬ್ಲಿಂಕೆನ್‌ ಹೇಳಿದ್ದಾರೆ.

ಫೆಬ್ರುವರಿ 24ರಂದು ಆರಂಭವಾದ ರಷ್ಯಾ, ಉಕ್ರೇನ್ ಸಂಘರ್ಷವು 11ನೇ ದಿನಕ್ಕೆ ಕಾಲಿಟ್ಟಿದೆ.

ತಮ್ಮ ಮೇಲೆ ದಾಳಿ ನಡೆಸುವಂತೆ ರಷ್ಯಾ ತನ್ನ ಸೈನಿಕರಿಗೆ ಆದೇಶಿಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಪದೇಪದೆ ಹೇಳುತ್ತಿದ್ದಾರೆ. ಝೆಲೆನ್‌ಸ್ಕಿ ಅವರನ್ನು ಹತ್ಯೆ ಮಾಡುವ ಆದೇಶದ ಮೇರೆಗೆರಷ್ಯಾದ ನೂರಾರು ಸೈನಿಕರು ಕೀವ್‌ನಲ್ಲಿ ಕಾರ್ಯಾಚರಿಸುತ್ತಿದ್ದಾರೆ ಎಂದು ಉಕ್ರೇನ್ ಆರೋಪಿಸಿದೆ.

ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಆರಂಭಿಸುವುದಕ್ಕಿಂತ ಕೆಲವೇ ದಿನಗಳ ಮೊದಲು, ರಷ್ಯಾದ ಬೇಹುಗಾರಿಕೆ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿರುವ ಹಲವು ಸೈನಿಕರು ಉಕ್ರೇನ್‌ಗೆ ಕಾಲಿಟ್ಟಿದ್ದರು ಎಂದು ಉಕ್ರೇನ್‌ನ ಪಶ್ಚಿಮ ಭಾಗದ ರಕ್ಷಣಾ ಪಡೆಗಳೂ ಹೇಳಿವೆ.

ಝೆಲೆನ್‌ಸ್ಕಿ ಅವರು ಹತ್ಯೆ ಯತ್ನದಿಂದ ಅಲ್ಪದರಲ್ಲೇ ಪಾರಾಗಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಕಳೆದವಾರ ಹೇಳಿದ್ದರು.

ಝೆಲೆನ್‌ಸ್ಕಿ ಹತ್ಯೆ ಭೀತಿಯ ಕುರಿತು ಮಾತನಾಡಿರುವ ಬ್ಲಿಂಕೆನ್, 'ಉಕ್ರೇನ್ ಸರ್ಕಾರದ ನಾಯಕತ್ವವು ಅಸಾಮಾನ್ಯವಾದದ್ದು. ನಾನು ಉಕ್ರೇನ್ ವಿದೇಶಾಂಗ ಸಚಿವರೊಂದಿಗೆ ಮಾತನಾಡಿದ್ದೇನೆ. ಸರ್ಕಾರವನ್ನು ಮುನ್ನಡೆಸುವುದಕ್ಕೆ ಅಗತ್ಯವಿರುವ ಎಲ್ಲ ಯೋಜನೆಗಳು ಸಿದ್ಧವಾಗಿರುವುದಾಗಿ ಅವರು ಹೇಳಿದ್ದಾರೆ' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT