ಮಂಗಳವಾರ, ಮಾರ್ಚ್ 21, 2023
27 °C

ಉಕ್ರೇನ್‌ ಸೊಲೆದಾರ್ ಪಟ್ಟಣ ಸುತ್ತುವರಿದ ರಷ್ಯಾ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಮಾಸ್ಕೊ: ರಷ್ಯಾದ ಯುದ್ಧ ವಿಮಾನಗಳು ಪೂರ್ವ ಉಕ್ರೇನ್‌ನ ಸೊಲೆದಾರ್ ಪಟ್ಟಣವನ್ನು ಸುತ್ತುವರಿದಿರುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯ ಬುಧವಾರ ತಿಳಿಸಿದೆ. ರಷ್ಯಾದ ಯುದ್ಧ ವಿಮಾನಗಳು ಉಕ್ರೇನ್‌ನ ಈ ಪಟ್ಟಣದ ಮೇಲೆ ದಾಳಿ ನಡೆಸಿ, ಹಾನಿ ಮಾಡಿದೆ ಎಂದು ರಷ್ಯಾದ ಏಜೆನ್ಸಿಗಳು ವರದಿ ಮಾಡಿವೆ.

ಉಕ್ರೇನ್‌ನ ಸಣ್ಣ ಪಟ್ಟಣಗಳಲ್ಲಿ ಒಂದಾದ ಸೊಲೆದಾರ್ ಅನ್ನು ವಶಪಡಿಸಿಕೊಳ್ಳಲು ರಷ್ಯಾದ ಸೇನೆ ಹೋರಾಡುತ್ತಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.

ಆದರೆ ಸೊಲೆದಾರ್‌ನ ವಿಜಯವನ್ನು ಘೋಷಿಸಲು ಆತುರ ಪಡಬೇಡಿ ಎಂದು ಕ್ರೆಮ್ಲಿನ್ ಬುಧವಾರ ತನ್ನ ರಕ್ಷಣಾ ಪಡೆಗಳಿಗೆ ಸೂಚಿಸಿದೆ. ‘ಈ ಸಂಬಂಧ ಯಾವುದೇ ಆತುರ ಮಾಡಬೇಡಿ. ಅಧಿಕೃತ ಹೇಳಿಕೆಯನ್ನು ನಿರೀಕ್ಷಿಸಿ’ ಎಂದು ಕ್ರೆಮ್ಲಿನ್‌ನ ವಕ್ತಾರ ಡಮಿಟ್ರಿ ಪೆಸ್ಕೊವ್‌ ತಿಳಿಸಿದ್ದಾರೆ.

ರಷ್ಯಾದ ಈ ಹೇಳಿಕೆ ‘ಸುಳ್ಳು’ ಎಂದು ಉಕ್ರೇನ್‌ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು