ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್‌ ದಾಳಿ: ಸಿರಿಯಾ ವಿಮಾನ ನಿಲ್ದಾಣಕ್ಕೆ ಹಾನಿ

Last Updated 9 ಮಾರ್ಚ್ 2023, 14:49 IST
ಅಕ್ಷರ ಗಾತ್ರ

ದುಬೈ: ಸಿರಿಯಾದ ಅಲೆಪ್ಪೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಗುರಿಯಾಗಿಸಿ ಇಸ್ರೇಲ್‌ ವೈಮಾನಿಕ ದಾಳಿ ನಡೆಸಿರುವ ಶಂಕೆ ಇದ್ದು, ಗುರುವಾರ ಬಿಡುಗಡೆಯಾಗಿರುವ ಉಪಗ್ರಹ ಸೆರೆ ಹಿಡಿದ ಚಿತ್ರಗಳಲ್ಲಿ ವಿಮಾನ ನಿಲ್ದಾಣ ತೀವ್ರ ಹಾನಿಗೊಳಗಾಗಿರುವುದು ಕಂಡುಬಂದಿದೆ.

ಯುದ್ಧಪೀಡಿತ ಮತ್ತು ಭೂಕಂಪದಿಂದ ಹಾನಿಗೊಳಗಾಗಿರುವ ಸಿರಿಯಾ ದೇಶಕ್ಕೆ ಪರಿಹಾರ ಸಾಮಗ್ರಿ ತಲುಪಿಸಲು ತೊಡಕು ಉಂಟು ಮಾಡಿರುವ ವಿಮಾನ ನಿಲ್ದಾಣದ ಮೇಲಿನ ದಾಳಿಯನ್ನು ವಿಶ್ವಸಂಸ್ಥೆಯ ಅಧಿಕಾರಿಗಳು ಟೀಕಿಸಿದ್ದಾರೆ.

ಮಂಗಳವಾರ ನಡೆದಿರುವ ಈ ದಾಳಿಯಿಂದ ಅಲೆಪ್ಪೊ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಇದು ನಾಗರಿಕ ವಿಮಾನ ನಿಲ್ದಾಣವಾಗಿದ್ದು, ಇದನ್ನು ಕಳೆದ ತಿಂಗಳು ಭೂಕಂಪದಿಂದ ಹಾನಿಗೊಳಗಾದ ಪ್ರದೇಶಗಳಿಗೆ ನೆರವು ನೀಡಲು ಪ್ರಮುಖ ಮಾರ್ಗವಾಗಿ ಬಳಸಲಾಗುತ್ತಿತ್ತು ಎಂದು ಸಿರಿಯಾದ ವಿದೇಶಾಂಗ ಸಚಿವರು ಹೇಳಿದ್ದಾರೆ.

ವಿವಿಧ ದೇಶಗಳಿಂದ ಪರಿಹಾರ ಸಾಮಗ್ರಿಗಳನ್ನು ಹೊತ್ತ ಹಲವಾರು ವಿಮಾನಗಳು ಅಲೆಪ್ಪೊ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದವು. ಈಗ ಆ ವಿಮಾನಗಳ ಮಾರ್ಗಗಳನ್ನು ಡಮಾಸ್ಕಸ್ ಮತ್ತು ಲಟಾಕಿಯಾ ವಿಮಾನ ನಿಲ್ದಾಣಗಳತ್ತ ಬದಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಲು ಇಸ್ರೇಲ್ ಪ್ರಧಾನಿ ಕಚೇರಿ ಗುರುವಾರ ನಿರಾಕರಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT