ಹೊಸ ಸಾಂಕ್ರಾಮಿಕಕ್ಕೆ 100 ದಿನದೊಳಗೆ ಲಸಿಕೆ: ಎರಿಕ್ ಲ್ಯಾಂಡರ್

ವಾಷಿಂಗ್ಟನ್: ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಹೊಸ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು, ಹೊಸ ವೈರಸ್ ಗುರುತಿಸಿದ ನೂರು ದಿನದೊಳಗೆಯೇ ಲಸಿಕೆ ತಯಾರಿಸುವ ಗುರಿಯನ್ನು ಶ್ವೇತಭವನದ ಹೊಸ ವೈಜ್ಞಾನಿಕ ಸಲಹೆಗಾರ ಎರಿಕ್ ಲ್ಯಾಂಡರ್ ಇಟ್ಟುಕೊಂಡಿದ್ದಾರೆ.
ವೈಜ್ಞಾನಿಕ ಸಲಹೆಗಾರರಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದ ನಂತರ ನೀಡಿದ ಮೊದಲ ಸಂದರ್ಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಭವಿಷ್ಯದಲ್ಲಿ ಸಂಭವಿಸಬಹುದಾದ ಬೆಳವಣಿಗೆಗಳ ಬಗ್ಗೆಯೂ ಮಾತನಾಡಿದ್ದಾರೆ.
‘ಮುಂದಿನ ದಿನಗಳಲ್ಲಿ ಅಮೆರಿಕ ವಿಜ್ಞಾನಕ್ಕೆ ಹೆಚ್ಚು ಒತ್ತು ನೀಡಲಿದೆ. ಪ್ಲಗ್ ಆ್ಯಂಡ್ ಪ್ಲೇ ಲಸಿಕೆಗಳೊಂದಿಗೆ ಸಾಂಕ್ರಾಮಿಕ ರೋಗವನ್ನು ಎದುರಿಸಲು ಜಗತ್ತನ್ನು ಅಣಿಗೊಳಿಸಲಾಗುತ್ತದೆ. ಜತೆಗೆ, ಸಾಂಕ್ರಾಮಿಕ ರೋಗದ ವಿರುದ್ಧ ಔಷಧಗಳು ಹೇಗೆ ಕೆಲಸ ಮಾಡುತ್ತವೆ ಮತ್ತು ರೋಗಿಗಳಿಗೆ ಚಿಕಿತ್ಸೆ ನೀಡುವ ವಿಧಾನ, ಹವಾಮಾನ ಬದಲಾವಣೆ ನಿಯಂತ್ರಣ ಕುರಿತು ಸಂಶೋಧನೆಗಳನ್ನು ನಡೆಸಲಿದೆ‘ ಎಂದು ತಿಳಿಸಿದ್ದಾರೆ.
‘ಈ ಹಂತದಲ್ಲಿ ಆರೋಗ್ಯ ಮಾತ್ರವಲ್ಲದೆ, ಹವಾಮಾನ ಬದಲಾವಣೆ ಮತ್ತು ಇಂಧನ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಾಗುವ ಸಂಭವನೀಯ ಸಮಸ್ಯೆಗಳ ಬಗ್ಗೆ ಮರು ಚಿಂತನೆ ಮಾಡಬೇಕಾಗಿದೆ‘ ಎಂದು ಲ್ಯಾಂಡರ್ ತಿಳಿಸಿದರು.
ಇದನ್ನೂ ಓದಿ... ದಕ್ಷಿಣ ಚೀನಾದಲ್ಲಿ ಕೊರೊನಾ ಸೋಂಕು ನಿಧಾನವಾಗಿ ಹೆಚ್ಚಳ: ಕಠಿಣ ಲಾಕ್ಡೌನ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.