ವಾಷಿಂಗ್ಟನ್: ‘ಅಪೊಲೊ ಬಾಹ್ಯಾಕಾಶ ಕಾರ್ಯಕ್ರಮ’ದ ಗಗನಯಾತ್ರಿಗಳು ಚಂದ್ರನಿಂದ ತಂದಿದ್ದ ಮಣ್ಣಿನಲ್ಲಿ ಅಮೆರಿಕದ ವಿಜ್ಞಾನಿಗಳು ಸಸ್ಯಗಳನ್ನು ಬೆಳೆಸುವ ಪ್ರಯೋಗದಲ್ಲಿ ಯಶಸ್ಸು ಸಾಧಿಸಿದ್ದಾರೆ.

ಈ ಬೆಳವಣಿಗೆ ಭವಿಷ್ಯದಲ್ಲಿ ಕೈಗೊಳ್ಳಲಾಗುವಬಾಹ್ಯಾಕಾಶ ಯೋಜನೆಗಳಿಗೆಅಥವಾ ಚಂದ್ರನಲ್ಲಿ ಆಹಾರ ಮತ್ತುಆಮ್ಲಜನಕ ಉತ್ಪಾದಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಲಾಗುತ್ತಿದೆ.

‘ಚಂದ್ರನ ಮಣ್ಣಿನಲ್ಲಿ ಬೀಜ ಮೊಳಕೆಯೊಡೆದು, ಸಸಿ ಬೆಳೆಯುತ್ತದೆ’ ಎಂಬುದನ್ನುಫ್ಲಾರಿಡಾ ವಿಶ್ವವಿದ್ಯಾಲಯದ ಸಂಶೋಧಕರು ನಿರೂಪಿಸಿದ್ದಾರೆ. ಈ ಅಧ್ಯಯನ ವರದಿಯು ‘ಕಮ್ಯೂನಿಕೇಷನ್ಸ್ ಬಯಾಲಜಿ’ ಎಂಬ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

ಭೂಮಿಯ ಮಣ್ಣಿಗಿಂತ ಭಿನ್ನವಾಗಿರುವ ಚಂದ್ರನ ಮಣ್ಣಿಗೆ ಸಸ್ಯಗಳು ಜೈವಿಕವಾಗಿ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬ ವಿದ್ಯಮಾನದ ಮೇಲೂ ಈ ಅಧ್ಯಯನ ಬೆಳಕು ಚೆಲ್ಲಿದೆ. ನಾಸಾ ಕೈಗೊಂಡಿದ್ದ ಅಪೊಲೊ 11, 12 ಮತ್ತು 17ನೇ ಬಾಹ್ಯಾಕಾಶ ಕಾರ್ಯಕ್ರಮದ ವೇಳೆ ಚಂದ್ರನಿಂದ ಒಟ್ಟು 12 ಗ್ರಾಮ್‌ನಷ್ಟು ಮಣ್ಣು ತರಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.