ಮಂಗಳವಾರ, ಆಗಸ್ಟ್ 9, 2022
23 °C

ಅಲ್–ಶಬಾಬ್ ಸಂಘಟನೆಯ 40 ಉಗ್ರರ ಹತ್ಯೆಗೈದ ಸೋಮಾಲಿಯಾ ಸೇನೆ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಮೊಗದಿಶು: ಅಲ್–ಶಬಾಬ್ ಸಂಘಟನೆಗೆ ಸೇರಿದ 40 ಉಗ್ರರನ್ನು ಹತ್ಯೆಗೈದಿರುವುದಾಗಿ ಸೋಮಾಲಿಯಾ ರಾಷ್ಟ್ರೀಯ ಸೇನೆ ಭಾನುವಾರ ತಿಳಿಸಿದೆ.

ದೇಶದ ಕೇಂದ್ರ ಭಾಗದಲ್ಲಿರುವ ಮಧ್ಯ ಷಬೆಲ್ಲೆ ಪ್ರಾಂತ್ಯದಲ್ಲಿ ಸೇನೆಯ 'ದನಬ್‌' ಪಡೆ ಶನಿವಾರ ನಡೆಸಿದ ರಕ್ಷಣಾ ಕಾರ್ಯಾಚರಣೆ ವೇಳೆ ಉಗ್ರರು ಹತ್ಯೆಯಾಗಿದ್ದಾರೆ ಎಂದು ಹೇಳಿದೆ.

'ಕಾರ್ಯಾಚರಣೆ ಸಂದರ್ಭ ಸಂಘಟನೆಯ ನಾಯಕರೂ ಸೇರಿದಂತೆ 40 ಉಗ್ರರು ಮೃತಪಟ್ಟಿದ್ದಾರೆ. ಹಲವು ವಾಹನಗಳನ್ನು ಧ್ವಂಸಗೊಳಿಸಲಾಗಿದೆ' ಎಂದು ಸೇನೆ ಮಾಹಿತಿ ನೀಡಿರುವುದಾಗಿ 'ಕ್ಸಿನುವಾ' ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಧ್ಯ ಮತ್ತು ದಕ್ಷಿಣ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಉಗ್ರರು ಅಡಗಿಕೊಂಡಿದ್ದು, ಈಗಲೂ ಸಂಚಿನ ದಾಳಿ ನಡೆಸುತ್ತಿದ್ದಾರೆ ಎಂದೂ ವರದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು