ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ. ಕೊರಿಯಾ: ಕೋವಿಡ್‌ ಚಿಕಿತ್ಸೆಗೆ ಸಣ್ಣ ಆಸ್ಪತ್ರೆಗಳನ್ನು ಸಜ್ಜುಗೊಳಿಸಲು ಚಿಂತನೆ

Last Updated 28 ಜನವರಿ 2022, 11:45 IST
ಅಕ್ಷರ ಗಾತ್ರ

ಸಿಯೋಲ್‌: ದಕ್ಷಿಣ ಆಫ್ರಿಕಾದಲ್ಲಿ ಓಮೈಕ್ರಾನ್‌ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚಳವಾಗಿರುವುದರಿಂದ ಸೋಂಕಿಗೆ ತುತ್ತಾಗಲಿರುವ ಜನರ ಚಿಕಿತ್ಸೆಗೆ ಮುಂದಿನ ತಿಂಗಳ ಹೊತ್ತಿಗೆ ಸಣ್ಣ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳನ್ನು ಸಜ್ಜುಗೊಳಿಸಲು ದಕ್ಷಿಣ ಕೊರಿಯಾ ಸರ್ಕಾರ ಚಿಂತನೆ ನಡೆಸಿದೆ.

ದೇಶದಲ್ಲಿ ಕೋವಿಡ್‌ ದೈನಂದಿನ ಪ್ರಕರಣಗಳುಸತತ ನಾಲ್ಕನೇ ದಿನ ಗರಿಷ್ಠ ಮಟ್ಟ ತಲುಪಿದ್ದರಿಂದ ಆರೋಗ್ಯ ಅಧಿಕಾರಿಗಳು ಶುಕ್ರವಾರ ಈ ಯೋಜನೆ ಘೋಷಿಸಿದ್ದಾರೆ. ಓಮೈಕ್ರಾನ್‌ ತಳಿಯಿಂದ ಮುಂದಿನ ಐದರಿಂದ ಎಂಟು ತಿಂಗಳು ಕೋವಿಡ್‌ ಪ್ರಕರಣಗಳಲ್ಲಿ ಹೆಚ್ಚಳವಾಗಲಿದೆ. ದೈನಂದಿನ ಪ್ರಕರಣಗಳು 1 ಲಕ್ಷ ತಲುಪಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರದ‌ಲ್ಲಿ ಸೋಂಕಿನ ವೇಗವನ್ನು ತಡೆಯಲು ಅಧಿಕಾರಿಗಳು ಪರದಾಡುತ್ತಿದ್ದಾರೆ. ಮನೆಯಲ್ಲಿ ಚಿಕಿತ್ಸೆ ನೀಡುವುದನ್ನು ಹೆಚ್ಚಿಸಿದ್ದಾರೆ. ಕ್ವಾರಂಟೈನ್‌ ಅವಧಿಯನ್ನು ಕಡಿತಗೊಳಿಸಿ ಕೋವಿಡ್‌ ಪರೀಕ್ಷೆಯನ್ನು ಹೆಚ್ಚಿಸಿದ್ದಾರೆ.

ಕೋವಿಡ್‌ ನಿರ್ವಹಿಸಲು ದೇಶವು ಪ್ರಮುಖವಾಗಿ ದೊಡ್ಡ ಆಸ್ಪತ್ರೆಗಳ ವೈದ್ಯಕೀಯ ವ್ಯವಸ್ಥೆಯನ್ನು ಅವಲಂಭಿಸಿದೆ. ಮುಂಬರುವ ವಾರಗಳಲ್ಲಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಲಕ್ಷಣಗಳಿರುವ ಜನರ ಚಿಕಿತ್ಸೆಗೆ ಸಣ್ಣ ಪ್ರಮಾಣದ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳನ್ನು ಅಧಿಕಾರಿಗಳು ಸಜ್ಜುಗೊಳಿಸುತ್ತಿದ್ದಾರೆ.

ಓಮೈಕ್ರಾನ್‌ ಸೋಂಕಿನ ವೇಗ ಹೆಚ್ಚಿರುವುದರಿಂದ 60 ವರ್ಷ ಮೇಲ್ಪಟ್ಟವರು ಮತ್ತು ಹೆಚ್ಚಿನ ತೊಂದರೆ ಉಂಟಾಗುವ ಜನರಿಗೆ ಚಿಕಿತ್ಸೆಗೆ ವೈದ್ಯಕೀಯ ಸಂಪನ್ಮೂಲಗಳನ್ನು ಕೇಂದ್ರೀಕರಿಸುವುದು, ಹೊರರೋಗಿ ಚಿಕಿತ್ಸೆಯ ವಿಸ್ತರಣೆ ದೇಶಕ್ಕೆ ಅನಿವಾರ್ಯವಾಗಿದೆ ಎಂದುಆರೋಗ್ಯ ಸಚಿವ ಕ್ವಾನ್ ಡಿಯೋಕ್-ಚಿಯೋಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT