ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶ ನಿಲ್ದಾಣಕ್ಕೆ ಸ್ಪೇಸ್‌ಎಕ್ಸ್‌ ರಾಕೆಟ್‌ ಉಡಾವಣೆ

Last Updated 29 ಆಗಸ್ಟ್ 2021, 12:49 IST
ಅಕ್ಷರ ಗಾತ್ರ

ಕೇಪ್‌ ಕ್ಯಾನವೆರಲ್‌: ಸ್ಪೇಸ್‌ಎಕ್ಸ್‌ ಈ ಬಾರಿ ಮತ್ತೊಂದು ಹೊಸ ಸಾಹಸ ಕೈಗೊಂಡಿದೆ. ಇರುವೆಗಳು, ಬೆಣ್ಣೆ ಹಣ್ಣು ಮತ್ತು ಮಾನವ ಗಾತ್ರದಷ್ಟು ರೊಬೊಟಿಕ್‌ ಕೈ ಇರುವ ರಾಕೆಟ್‌ ಅನ್ನು ಬಾಹ್ಯಾಕಾಶಕ್ಕೆ ಭಾನುವಾರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಉಡಾವಣೆ ಮಾಡಿದೆ.

ದಶಕದಲ್ಲೇ ಇದು ನಾಸಾಗಾಗಿ ಸ್ಪೇಸ್ಎಕ್ಸ್‌ ಕಂಪನಿ ಕೈಗೊಂಡಿರುವ 23ನೇ ಕಾರ್ಯಾಚರಣೆಯಾಗಿದೆ. ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಭಾನುವಾರ ಬೆಳಿಗ್ಗೆ ಫಾಲ್ಕನ್‌ 9 ರಾಕೆಟ್‌ ಅನ್ನು ಉಡಾವಣೆ ಮಾಡಲಾಗಿದೆ. ಇದು ಸಾಮಗ್ರಿಗಳ ಮರುಪೂರೈಕೆಯ ಕಾರ್ಯಾಚರಣೆಯಾಗಿದೆ ಎಂದು ಸ್ಪೇಸ್‌ಎಕ್ಸ್‌ ಹೇಳಿದೆ.

ಸ್ಪೇಸ್‌ಎಕ್ಸ್‌ ಸಂಸ್ಥಾಪಕ ಎಲಾನ್‌ ಮಸ್ಕ್‌ ಅವರು ಈ ರಾಕೆಟ್‌ಗೆ ವಿಜ್ಞಾನ ಕಥೆಗಾರ ಇಯನ್‌ ಬ್ಯಾಂಕ್ಸ್‌ ಅವರ ಹೆಸರನ್ನು ನಾಮಕರಣ ಮಾಡಿದ್ದಾರೆ.

ಈ ರಾಕೆಟ್‌ ಒಟ್ಟಾರೆಯಾಗಿ 21.70 ಕ್ವಿಂಟಲ್‌ ತೂಕ ಹೊಂದಿದೆ. ಬಾಹ್ಯಾಕಾಶ ನಿಲ್ದಾಣದಲ್ಲಿರುವ ಏಳು ಗಗನಯಾತ್ರಿಗಳಿಗೆ ಬೆಣ್ಣೆ ಹಣ್ಣು, ಲಿಂಬೆ ಹಣ್ಣು, ಐಸ್‌ಕ್ರೀಂ ಸೇರಿದಂತೆ ವಿವಿಧ ಉಪಕರಣಗಳು ಮತ್ತು ಆಹಾರವನ್ನು ಕೊಂಡೊಯ್ಯಲಾಗಿದೆ.

ಶನಿವಾರವೇ ಈ ರಾಕೆಟ್‌ ಉಡಾವಣೆಗೆ ಪ್ರಯತ್ನಿಸಲಾಗಿತ್ತು. ಆದರೆ, ಹವಾಮಾನ ವೈಪರೀತ್ಯದಿಂದ ಕೈಬಿಡಲಾಗಿತ್ತು. ಪರೀಕ್ಷೆಯ ಉದ್ದೇಶಕ್ಕಾಗಿ ಇರುವೆಗಳನ್ನು ಸಹ ಕಳುಹಿಸಲಾಗಿದೆ. ಜಪಾನ್‌ನ ನವೋದ್ಯಮ ಕಂಪನಿಯೊಂದು ಪ್ರಾಯೋಗಿಕವಾಗಿ ರೊಬೊಟಿಕ್‌ ಕೈ ಅನ್ನು ಕಳುಹಿಸಿದೆ. ಗಗನಯಾತ್ರಿಗಳು ಕೈಗೊಳ್ಳುವ ವಿವಿಧ ಕಾರ್ಯಗಳನ್ನು ಈ ರೊಬೊಟ್‌ ಮೂಲಕ ಕೈಗೊಳ್ಳುವ ಕುರಿತು ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT