ಸೋಮವಾರ, ಸೆಪ್ಟೆಂಬರ್ 27, 2021
21 °C

ಅವಿಶ್ವಾಸ ಮತ: ಸ್ವೀಡನ್‌ ಪ್ರಧಾನಿ ರಾಜೀನಾಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸ್ಟಾಕ್‌ಹೋಮ್ (ಎಎಫ್‌ಪಿ): ಸ್ವೀಡನ್‌ನ ಪ್ರಧಾನಿ ಸ್ಟೀಫನ್ ಲೋಫ್ವೆನ್ ಅವರು ವಿಶ್ವಾಸ ಮತ ಕಳೆದುಕೊಂಡ ಒಂದು ವಾರದ ನಂತರ ಸೋಮವಾರ ‌ರಾಜೀನಾಮೆ ನೀಡಿದರು. ತೆರವಾದ ಸ್ಥಾನಕ್ಕೆ ಪರ್ಯಾಯ ಆಯ್ಕೆ ಮಾಡುವ ಹೊಣೆಯನ್ನು ಸಂಸತ್‌ ಸ್ಪೀಕರ್‌ಗೆ ಬಿಟ್ಟಿದೆ.

ಹೊಸ ಪ್ರಧಾನಿಯನ್ನು ಹುಡುಕಲು ಪಕ್ಷಗಳೊಂದಿಗೆ ಮಾತುಕತೆ ನಡೆಸುವುದು ಈಗ ಸಂಸದೀಯ ಸ್ಪೀಕರ್ ಆಂಡ್ರಿಯಾಸ್ ನಾರ್ಲೆನ್ ಅವರದ್ದಾಗಿದೆ.

ಹೊಸ ಆಡಳಿತ ರಚನೆಯಾಗುವವರೆಗೂ ಲೋಫ್ವೆನ್ ಸರ್ಕಾರವು ದಿನನಿತ್ಯದ ಕಾರ್ಯಗಳನ್ನು ನಿರ್ವಹಿಸಲು ತಾತ್ಕಾಲಿಕವಾಗಿ ಅಸ್ತಿತ್ವದಲ್ಲಿರಲಿದೆ.

ಕೋವಿಡ್ 19 ಸಾಂಕ್ರಾಮಿಕ ರೋಗವು ಕಠಿಣ ಪರಿಸ್ಥಿತಿ ನಿರ್ಮಿಸಿದೆ. ಕ್ಷಿಪ್ರ ಚುನಾವಣೆಯು ‘ಸ್ವೀಡನ್‌ಗೆ ಉತ್ತಮವಾದುದಲ್ಲ’. ಮುಂದಿನ ಸಾರ್ವತ್ರಿಕ ಚುನಾವಣೆಯು ಒಂದು ವರ್ಷದ ನಂತರ ನಡೆಯಲಿದೆ ಎಂದು  ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನನ್ನನ್ನು ಪ್ರಧಾನಿ ಹುದ್ದೆಯಿಂದ ಬಿಡುಗಡೆ ಮಾಡುವಂತೆ ಪ್ರಾರಂಭದಿಂದಲೂ ಸ್ಪೀಕರ್‌ಗೆ ವಿನಂತಿಸಿದ್ದೇನೆ’ ಎಂದು ಲೋಫ್ವೆನ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು