ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ದಾಳಿ ವಿರುದ್ಧ ರಕ್ಷಣೆಗಾಗಿ ತೈವಾನ್ ಸಮರಾಭ್ಯಾಸ

Last Updated 9 ಆಗಸ್ಟ್ 2022, 12:48 IST
ಅಕ್ಷರ ಗಾತ್ರ

ಪಿಂಗುಟುಂಗ್‌: ಚೀನಾದ ಸಂಭವನೀಯ ದಾಳಿ ಎದುರಿಸುವ ಸಿದ್ಧತೆ ಭಾಗವಾಗಿ ತೈವಾನ್‌ನ ಸೇನೆಯೂ ಸಮರಾಭ್ಯಾಸ ನಡೆಸಿದೆ. ಇನ್ನೊಂದೆಡೆ, ‘ಚೀನಾವು ಸಮುದ್ರ ಭಾಗದ ಮೇಲೆ ನಿಯಂತ್ರಣ ಹೊಂದಲು ಯತ್ನಿಸುತ್ತಿದೆ’ ಎಂದು ತೈವಾನ್‌ ಆರೋಪಿಸಿದೆ.

ತೀವ್ರ ಸಮರಾಭ್ಯಾಸ ನಡೆಸುತ್ತಿರುವ ಚೀನಾದ ಸಂಭವನೀಯ ದಾಳಿಯನ್ನು ಎದುರಿಸಲು ಸಿದ್ಧ ಎಂಬ ಸಂದೇಶವನ್ನು ರವಾನಿಸುವ ಭಾಗವಾಗಿ ತೈವಾನ್‌ ಸೇನೆಯು, ಯುದ್ಧಾಭ್ಯಾಸ ಮಾಡಿತು.

‘ಪ್ರತಿಯಾಗಿ ತೈವಾನ್‌ ಕೂಡಾ ತಾಲೀಮು ನಡೆಸುತ್ತಿದೆ. ಸಂಭವನೀಯ ಬೆದರಿಕೆ ಎದುರಿಸಲು ಸೇನೆ ಸಜ್ಜಾಗಿದೆ’ ಎಂದು ತೈವಾನ್‌ನ 8ನೇ ಸೇನಾ ಕಮಾಂಡರ್‌ನ ವಕ್ತಾರ ಮೇಜರ್ ಜನರಲ್ ಲೌ ವೋ ಜೈ ಅವರು ಹೇಳಿದರು.

ತೈವಾನ್‌ನ ವಿದೇಶಾಂಗ ಸಚಿವ ಜೋಸೆಫ್ ವು, ‘ತೈವಾನ್‌ ಪಶ್ಚಿಮದ ಸಮುದ್ರ ಭಾಗ ಮತ್ತು ಅನೆಕ್ಸ್ ತೈವಾನ್‌ ವ್ಯಾಪ್ತಿಯಲ್ಲಿ ನಿಯಂತ್ರಣ ಹೊಂದಲು ಚೀನಾ ಯತ್ನಿಸುತ್ತಿದೆ. ಈ ಭಾಗ ತನ್ನ ಗಡಿಗೆ ಸೇರಲಿದೆ ಎಂದು ಪ್ರತಿಪಾದಿಸಿದೆ’ ಎಂದು ಆರೋಪಿಸಿದರು.

ತೈವಾನ್‌ ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ತಡೆಯಲು ಅಥವಾ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಚೀನಾಗೆ ಯಾವುದೇ ಹಕ್ಕು ಇಲ್ಲ. ತೈವಾನ್‌ ಮತ್ತು ಮೇನ್‌ಲ್ಯಾಂಡ್‌ ಪ್ರತ್ಯೇಕ ಗಡಿಯನ್ನು ಹೊಂದಿವೆ ಎಂದು ಅವರು ಪ್ರತಿಪಾದಿಸಿದರು.

ಅಮೆರಿಕ ಜನಪ್ರತಿನಿಧಿಗಳ ಸಭೆಯ ಸ್ಫೀಕರ್ ನ್ಯಾನ್ಸಿ ಪೆಲೋಸಿ ಅವರು ತೈಪೆಗೆ ಭೇಟಿ ನೀಡಿದ್ದಕ್ಕೆ ಪ್ರತಿಕಾರವಾಗಿ ಚೀನಾವು ತೈವಾನ್‌ ಆಸುಪಾಸಿನಲ್ಲಿ ಸಮರಾಭ್ಯಾಸವನ್ನು ಚುರುಕುಗೊಳಿಸಿದೆ. ತಾಲೀಮು ನಿರಂತರ ನಡೆಯಲಿದೆ ಎಂದೂ ಸ್ಪಷ್ಟಪಡಿಸಿದೆ.

ಉಭಯ ದೇಶಗಳು ಕೂಡಾ ಸೇನಾ ತಾಲೀಮು ಕುರಿತಂತೆ ಸ್ವಯಂ ನಿಯಂತ್ರಣ ಹೊಂದಬೇಕು. ಯುದ್ಧ ನಡೆಸುವುದು ಸಾಮಾನ್ಯ ಜನರ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಎಂದು ಸ್ಥಳೀಯ ನಿವಾಸಿ ಚೆನ್ ಪ್ರತಿಕ್ರಿಯಿಸಿದರು.

ಚೀನಾದಸಮರಾಭ್ಯಾಸವು ಸಮುದ್ರ ಮಾರ್ಗದಲ್ಲಿ ಹಡಗುಗಳ ಸಂಚಾರದ ಮೇಲೂ ಪರಿಣಾಮ ಬೀರಿದ್ದು, ಪರೋಕ್ಷವಾಗಿ ಜಾಗತಿಕ ವಾಣಿಜ್ಯ ಚಟುವಟಿಕೆಯನ್ನು ಅಸ್ತವ್ಯಸ್ತಗೊಳಿಸಿದೆ. ಮಂಗಳವಾರವೂ ಚೀನಾದ ಸಮರಾಭ್ಯಾಸ ಮುಂದುವರಿಯಿತು.

ಕಂಪ್ಯೂಟರ್ ಚಿಪ್‌ಗಳ ಪೂರೈಕೆಯಲ್ಲಿ ಮುಂಚೂಣಿಯಲ್ಲಿ ಇರುವ ಜಾಗತಿಕ ವಾಣಿಜ್ಯ ವಹಿವಾಟಿನಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ. ತೈವಾನ್‌ನಲ್ಲಿ ಈಗ ತಲೆದೋರಿರುವ ಬಿಕ್ಕಟ್ಟು ಜಗತ್ತಿನ ವಾಣಿಜ್ಯ ಚಟುವಟಿಕೆಯ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT