ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ತಾಲಿಬಾನ್‌ನ್ನು ಅನುಕರಿಸುವ ಕನಸು ಕಾಣುತ್ತಿದೆ: ತೈವಾನ್

Last Updated 21 ಆಗಸ್ಟ್ 2021, 8:20 IST
ಅಕ್ಷರ ಗಾತ್ರ

ತೈಫೆ:‘ಚೀನಾ ತಾಲಿಬಾನ್‌ನ್ನು ಅನುಕರಿಸುವ ಕನಸು ಕಾಣುತ್ತಿದೆ‘ ಎಂದು ತೈವಾನ್ ವಿದೇಶಾಂಗ ಸಚಿವ ಜೋಸೆಫ್ ವು ಆರೋಪಿಸಿದ್ದಾರೆ.

ಅಮೆರಿಕದ ಬೆಂಬಲದಿಂದ ತೈವಾನ್ ಚೀನಾದ ವಿರೋಧವನ್ನು ಕಟ್ಟಿಕೊಂಡಿದ್ದು, ‘ಅಮೆರಿಕದಿಂದ ಅಫ್ಗಾನಿಸ್ತಾನಕ್ಕೆ ಆದ ಗತಿಯೇ ನಮಗೂ ಆಗಬಹುದೇ?‘ ಎಂಬ ಬಿಸಿಬಿಸಿ ಚರ್ಚೆ ತೈವಾನ್‌ಲ್ಲಿ ಶುರುವಾಗಿದೆ.

‘ತೈವಾನ್ ಚೀನಾದ ಸಾರ್ವಭೌಮ ಪ್ರದೇಶವೆಂದು ಹೇಳಿಕೊಳ್ಳಲು ಅದು ಪ್ರಯತ್ನಿಸುತ್ತದೆ. ಆದರೆ, ನಾವು ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಒಳಪಟ್ಟಿಲ್ಲ. ಚೀನಾ ತಾಲಿಬಾನ್‌ಗಳನ್ನು ಅನುಕರಿಸುವ ಕನಸು ಕಾಣುತ್ತಿದೆ‘ ಎಂದು ಜೋಸೆಫ್ ವು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತೈವಾನ್ ಮೇಲೆ ಚೀನಾದ ಒತ್ತಡವನ್ನು ನಿಲ್ಲಿಸುವಂತೆ ಅಮೆರಿಕ ವಿದೇಶಾಂಗ ಸಚಿವಾಲಯದ ಕರೆಯನ್ನು ಪುನರುಚ್ಚಿಸಿರುವ ಜೋಸೆಫ್ ವು,ತೈವಾನ್‌ನ ಜನರ ಹಿತಾಸಕ್ತಿಗಳನ್ನು ಎತ್ತಿ ಹಿಡಿದಿರುವುದಕ್ಕೆ ಅಮೆರಿಕಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಚೀನಾ ತನ್ನದೇ ಕ್ಸಿನ್ ಜಿಯಾಂಗ್‌ನಲ್ಲಿ ಇಸ್ಲಾಮಿಕ್ ಉಗ್ರರ ಮೇಲೆ ಒಂದು ಕಣ್ಣಿಟ್ಟಿದೆ. ಅದಾಗ್ಯೂ ಸಹ ಅದು ತಾಲಿಬಾನ್‌ನೊಂದಿಗೆ ಸಂಪರ್ಕ ಬೆಳೆಸಲು ಪ್ರಯತ್ನಿಸುತ್ತಿದೆ ಎಂದು ವು ಹೇಳಿದ್ದಾರೆ.

ಇತ್ತೀಚಿನ ತಿಂಗಳುಗಳಲ್ಲಿ ಚೀನಾ ರಾಜತಾಂತ್ರಿಕ ಮತ್ತು ಮಿಲಿಟರಿ ಒತ್ತಡವನ್ನು ತೈವಾನ್ ಮೇಲೆ ಹೆಚ್ಚಿಸಿದೆ ಎಂದು ತೈವಾನ್ ದೂರಿದೆ. ತೈವಾನ್ ಗಡಿಯಲ್ಲಿ ಚೀನಾದ ವಾಯುಪಡೆ ಮತ್ತು ನೌಕಾಪಡೆಯ ಅಭ್ಯಾಸಗಳು ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ದೇಶಗಳಲ್ಲಿ ಆತಂಕವನ್ನು ಉಂಟುಮಾಡಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT