ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗನ್‌ ವಿಶ್ವವಿದ್ಯಾಲಯ: ಪುರುಷರಿಲ್ಲದ ಕೊಠಡಿಗಳಲ್ಲಿ ಮಹಿಳೆಯರಿಗೆ ಅವಕಾಶ

ಹಿಜಾಬ್‌ ಕಡ್ಡಾಯ
Last Updated 12 ಸೆಪ್ಟೆಂಬರ್ 2021, 9:20 IST
ಅಕ್ಷರ ಗಾತ್ರ

ಕಾಬೂಲ್‌: ಮಹಿಳೆಯರು ಸ್ನಾತಕೋತ್ತರ ಪದವಿಗಳನ್ನು ಒಳಗೊಂಡಂತೆ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಬಹುದು. ಆದರೆ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ತರಗತಿ ಕೊಠಡಿಗಳು ಇರಬೇಕು ಹಾಗೂ ಮಹಿಳೆಯರು ಇಸ್ಲಾಮಿಕ್ ಉಡುಗೆಯನ್ನು ಕಡ್ಡಾಯವಾಗಿ ಧರಿಸಿರಬೇಕು ಎಂದು ತಾಲಿಬಾನ್‌ ಸರ್ಕಾರದ ಉನ್ನತ ಶಿಕ್ಷಣ ಸಚಿವ ಅಬ್ದುಲ್‌ ಬಾಖಿ ಹಖ್ಖಾನಿ ತಿಳಿಸಿದ್ದಾನೆ.

ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈತ ಈ ಹೊಸ ನಿಯಮದಬಗ್ಗೆ ಮಾಹಿತಿ ನೀಡಿದ್ದಾನೆ.

ವಿಶ್ವವಿದ್ಯಾಲಯದಲ್ಲಿ ಮಹಿಳೆಯರು ಕಡ್ಡಾಯವಾಗಿ ಹಿಜಾಬ್‌ ಧರಿಸಬೇಕು ಎಂಬುದಾಗಿ ಹಖ್ಖಾನಿ ಹೇಳಿದ್ದಾನೆ. ಆದರೆ ಕೇವಲ ತಲೆಗೆ ಸ್ಕಾರ್ಫ್ (ಬಟ್ಟೆ) ಕಡ್ಡಾಯವೇ ಅಥವಾ ಮುಖವನ್ನು ಮುಚ್ಚಬೇಕೇ ಎಂಬುದರ ಬಗ್ಗೆ ನಿಖರ ಮಾಹಿತಿ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT