ಮಂಗಳವಾರ, ಸೆಪ್ಟೆಂಬರ್ 28, 2021
24 °C

ಜರ್ಮನಿಯಲ್ಲಿ ಗುಡುಗು ಸಹಿತ ಮಳೆ: ಹಲವೆಡೆ ಪ್ರವಾಹ, ಅಪಘಾತ

ಎಪಿ Updated:

ಅಕ್ಷರ ಗಾತ್ರ : | |

Prajavani

ಬರ್ಲಿನ್‌: ಜರ್ಮನಿಯ ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಸೋಮವಾರ ತಡರಾತ್ರಿ ಗುಡುಗು ಸಹಿತ ಮಳೆಯಾಗಿದ್ದು, ಇದರಿಂದಾಗಿ ಹಲವೆಡೆ ಅವಘಡಗಳು ಸಂಭವಿಸಿದೆ. ನೂರಾರು ಅಗ್ನಿ ಶಾಮಕ ಸಿಬ್ಬಂದಿ ರಾತ್ರಿಯಿಡೀ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

‘ಫ್ರಾಂಕ್‌ಫರ್ಟ್ ಬಳಿಯ ಮೊಯೆಮ್ಲಿಂಗೆನ್ ಸೇರಿದಂತೆ ಬವೇರಿಯಾದ ಹಲವು ಹಳ್ಳಿಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಸಂಭವಿಸಿದೆ. ಅಲ್ಲಿನ ಹಲವು ರಸ್ತೆಗಳು ಜಲಾವೃತವಾಗಿವೆ. ನೆಲಮಾಳಿಗೆಗಳಿಗೆ ನೀರು ಮತ್ತು ಮಣ್ಣು ನುಗ್ಗಿದೆ’ ಎಂದು ಜರ್ಮನ್‌ ಸುದ್ದಿ ಸಂಸ್ಥೆ ಡಿಪಿಎ ಮಂಗಳವಾರ ವರದಿ ಮಾಡಿದೆ.

‘ಸ್ಟಡ್ಗಾರ್ಟ್‌ನಲ್ಲಿ ಸುರಿದ ಧಾರಾಕಾರ ಮಳೆ ಮತ್ತು ಗಾಳಿಯಿಂದಾಗಿ ಒಪೆರಾ ಹೌಸ್‌ನ ಮೇಲ್ಪಾವಣಿಗಳು ಹಾರಿ ಹೋಗಿದ್ದು, ಭಾರಿ ಹಾನಿ ಸಂಭವಿಸಿದೆ. ಈ ವೇಳೆ ಸುಮಾರು 250 ಜನರು ಸಭಾಂಗಣದಲ್ಲಿ ಉಪಸ್ಥಿತರಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ’ ಎಂದು ಒಪೆರಾದ ವ್ಯವಸ್ಥಾಪಕ ವಿಕ್ಟರ್ ಸ್ಕೋನರ್ ಸೋಮವಾರ ತಡರಾತ್ರಿ ಡಿಪಿಎಗೆ ತಿಳಿಸಿದರು. 

ಮಂಗಳವಾರ ಮುಂಜಾನೆ ಹಲವಾರು ರಸ್ತೆ ಅಪಘಾತಗಳು ವರದಿಯಾಗಿವೆ. ಇದರಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಿಲ್ಲ.

‘ಮೊಂಟಬೌರ್ ಪಟ್ಟಣದ ಬಳಿಯ ಎ3 ಮತ್ತು ಎ48 ಹೆದ್ದಾರಿಗಳಲ್ಲಿ ಏಳು ಅಪಘಾತಗಳು ಸಂಭವಿಸಿದೆ. ಇದರಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಇನ್ನೂ ಮೂವರಿಗೆ ಸಣ್ಣ–ಪುಟ್ಟ ಗಾಯಗಳಾಗಿವೆ’ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು