ಶನಿವಾರ, ಜೂನ್ 25, 2022
28 °C

ವಿಶ್ವಸಂಸ್ಥೆಯ ಮಂಡಳಿಗೆ ಆಯ್ಕೆ: ಸದಸ್ಯ ರಾಷ್ಟ್ರಗಳಿಗೆ ಧನ್ಯವಾದ ಹೇಳಿದ ಭಾರತ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌: ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಗೆ (ಇಸಿಒಎಸ್‌ಒಸಿ) ಭಾರತವು ಸೋಮವಾರ ಆಯ್ಕೆಯಾಗಿದೆ. ಈ ಸಂಬಂಧ ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಟಿ.ಎಸ್‌. ತಿರುಮೂರ್ತಿ ಅವರು ಇತರ ಸದಸ್ಯ ರಾಷ್ಟ್ರಗಳಿಗೆ ಧನ್ಯವಾದ ಹೇಳಿದ್ದಾರೆ.

ತಿರುಮೂರ್ತಿ ಅವರು, ʼಭಾರತದ ಮೇಲೆ ವಿಶ್ವಾಸವಿಟ್ಟು ಇಸಿಒಎಸ್‌ಒಸಿಗೆ ಆಯ್ಕೆ ಮಾಡಿದ ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳಿಗೂ ಧನ್ಯವಾದಗಳುʼ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

 

ಭಾರತ ಸೇರಿದಂತೆ ಒಟ್ಟು 18 ರಾಷ್ಟ್ರಗಳು ಈ ಮಂಡಳಿಗೆ ಸೋಮವಾರ ಆಯ್ಕೆಯಾಗಿವೆ. ವಿಶ್ವಸಂಸ್ಥೆಯ ಅಧಿವೇಶನದಲ್ಲಿ ನಡೆದ ಗೌಪ್ಯ ಮತದಾನದ ಫಲಿತಾಂಶವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ವೊಲ್ಕನ್‌ ಬೋಜ್‌ಕಿರ್‌ ಅವರು ಪ್ರಕಟಿಸಿದರು.

ಏಷಿಯಾ-ಫೆಸಿಫಿಕ್‌ ಪ್ರದೇಶದ ಅಫ್ಗಾನಿಸ್ತಾನ, ಕಜಕಿಸ್ತಾನ, ಒಮನ್‌, ಆಫ್ರಿಕನ್‌ ದೇಶಗಳಾದ ಮಾರಿಷಸ್‌, ತಾಂಜೇನಿಯಾ, ಟುನೀಸಿಯಾ, ಐವರಿ ಕೋಸ್ಟ್‌, ಈಸ್ವತಿನಿ, ಪೂರ್ವ ಯುರೋಪ್‌ನ ಕ್ರೊವೇಷಿಯಾ, ಚೆಕ್‌ ಗಣರಾಜ್ಯ, ಲ್ಯಾಟಿನ್‌ ಅಮೆರಿಕದ ಬ್ರೆಜಿಲ್‌, ಚಿಲಿ, ಪೆರು, ಪೂರ್ವ ಯುರೋಪ್‌ನ ಬೆಲ್ಜಿಯಂ, ಕೆನಡಾ, ಇಟಲಿ ಮತ್ತು ಅಮೆರಿಕ ಹೊಸದಾಗಿ ಆಯ್ಕೆಯಾಗಿರುವ ಇತರ ರಾಷ್ಟ್ರಗಳು.

ಈ ರಾಷ್ಟ್ರಗಳ ಸದಸ್ಯತ್ವ ಅವಧಿಯು 2022ರ ಜನವರಿ 1ರಿಂದ ಆರಂಭವಾಗಲಿದ್ದು, 2024ರವರೆಗೆ ಮುಂದುವರಿಯಲಿದೆ.

ಸುಸ್ಥಿರ ಜಗತ್ತಿಗಾಗಿ ಜನರನ್ನು ಒಗ್ಗೂಡಿಸುವ ಮತ್ತು ಸಾಮೂಹಿಕ ಪ್ರಯತ್ನವನ್ನು ಉತ್ತೇಜಿಸುವ ಇಸಿಒಎಸ್‌ಒಸಿ, ವಿಶ್ವಸಂಸ್ಥೆಯ ಪ್ರಮುಖ ಅಂಗಸಂಸ್ಥೆಯಾಗಿದೆ. ಇದರಲ್ಲಿ ಒಟ್ಟು 54 ಸದಸ್ಯ ರಾಷ್ಟ್ರಗಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು