ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈವಾನ್ ವಾಯು ರಕ್ಷಣಾ ವಲಯವನ್ನು ಪ್ರವೇಶಿಸಿದ ಚೀನಾದ 27 ಯುದ್ಧ ವಿಮಾನಗಳು

Last Updated 3 ಆಗಸ್ಟ್ 2022, 16:31 IST
ಅಕ್ಷರ ಗಾತ್ರ

ತೈಪೆ: ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೊಸಿ ಭೇಟಿ ಬೆನ್ನಲ್ಲೇ ತೈವಾನ್ ವಿರುದ್ಧ ಮುಗಿಬಿದ್ದಿರುವ ಚೀನಾದ 27 ಯುದ್ಧ ವಿಮಾನಗಳು ನಮ್ಮ ವಾಯು ರಕ್ಷಣಾ ಪ್ರದೇಶವನ್ನು ಪ್ರವೇಶಿಸಿವೆ ಎಂದು ತೈವಾನ್ ದೃಢಪಡಿಸಿದೆ.

‘ಪಿಎಲ್‌ಎನ(ಪೀಪಲ್ಸ್ ಲಿಬರೇಶನ್ ಆರ್ಮಿ) 27 ಯುದ್ಧ ವಿಮಾನಗಳು, ಆಗಸ್ಟ್ 3, 2022ರಂದು ನಮ್ಮ ಪ್ರದೇಶ(ರಿಪಬ್ಲಿಕ್ ಆಫ್ ಚೀನಾ)ವನ್ನು ಸುತ್ತುವರಿದಿವೆ’ ಎಂದು ತೈವಾನ್ ರಕ್ಷಣಾ ಇಲಾಖೆ ತಿಳಿಸಿದೆ.

ಚೀನಾದ ಭಾರಿ ವಿರೋಧದ ನಡುವೆಯೂ ನ್ಯಾನ್ಸಿ ಪೆಲೊಸಿ ನೇತೃತ್ವದ ಅಮೆರಿಕದ ಕಾಂಗ್ರೆಸ್ ನಿಯೋಗ ನಿನ್ನೆ ರಾತ್ರಿ ತೈವಾನ್‌ ರಾಜಧಾನಿ ತೈಪೆಗೆ ಬಂದಿಳಿದಿತ್ತು. ಇಂದು ಅವರು, ತೈವಾನ್ ಅಧ್ಯಕ್ಷ ಸಾಯ್ ಇಂಗ್ ವೆನ್ ಜೊತೆ ನ್ಯಾನ್ಸಿ ಸಭೆ ನಡೆಸಿ ಬಳಿಕ ಅಮೆರಿಕದ ವಿಶೇಷ ವಿಮಾನದಲ್ಲಿ ದಕ್ಷಿಣ ಕೊರಿಯಾಗೆ ತೆರಳಿದರು. ಇದೇವೇಳೆ, ಅಮೆರಿಕ ಕಾಂಗ್ರೆಸ್ ಸದಸ್ಯರನ್ನು ಒಳಗೊಂಡ ನ್ಯಾನ್ಸಿ ನೇತೃತ್ವದ ನಿಯೋಗವು, ಪ್ರಜಾಪ್ರಭುತ್ವದ ಮೂಲಕ ಸ್ವತಂತ್ರ ಆಡಳಿತ ನಡೆಸುತ್ತಿರುವ ತೈವಾನ್ ಅನ್ನು ಒಂಟಿಯಾಗಿ ಬಿಡುವುದಿಲ್ಲ ಎಂಬ ಸಂದೇಶ ಸಾರಿತು.

‘ಇಂದು ಜಗದ ಮುಂದೆ ಪ್ರಜಾಪ್ರಭುತ್ವ ಮತ್ತು ನಿರಂಕುಶಪ್ರಭುತ್ವದ ಆಯ್ಕೆಗಳಿವೆ. ತೈವಾನ್ ಮತ್ತು ವಿಶ್ವದ ಎಲ್ಲ ಕಡೆ ಪ್ರಜಾಪ್ರಭುತ್ವವನ್ನು ರಕ್ಷಿಸಲು ಅಮೆರಿಕ ಬದ್ಧವಾಗಿದೆ’ಎಂದು ನ್ಯಾನ್ಸಿ ಹೇಳಿದರು.

ತೈವಾನ್ ಅನ್ನು ತನ್ನದೇ ದೇಶದ ಭಾಗವೆಂದು ಪರಿಗಣಿಸುವ ಚೀನಾವು, ತೈವಾನ್ ಸುತ್ತ ಯುದ್ಧ ವಿಮಾನಗಳ ಹಾರಾಟ ನಡೆಸಿದೆ.

ಈ ಮಧ್ಯೆ, ಚೀನಾ ಬೆದರಿಕೆ ತಂತ್ರದ ವಿರುದ್ಧ ಚೀನಾ ಗಟ್ಟಿಯಾಗಿ ನಿಂತಿದೆ. ದೇಶದ 2.3 ಕೋಟಿ ಜನರು ಹೇಡಿಗಳಲ್ಲ ಎಂದು ತೈವಾನ್ ಅಧ್ಯಕ್ಷೆ ಸಾಯ್ ಇಂಗ್ ವೆನ್ ತಿಳಿಸಿದ್ದಾರೆ.

‘ಚೀನಾದ ಮಿಲಿಟರಿ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ಹಿಂದಡಿ ಇಡುವುದಿಲ್ಲ. ಪ್ರಜಾಪ್ರಭುತ್ವಕ್ಕಾಗಿ ನಾವು ನಮ್ಮ ರಕ್ಷಣೆ ಮಾಡಿಕೊಳ್ಳುವುದನ್ನು ಮುಂದುವರಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT