ಶನಿವಾರ, ಜನವರಿ 23, 2021
26 °C
ಹಿಂಸಾಚಾರ ಪ್ರಚೋದಿಸುವ ಅಪಾಯ ತಪ್ಪಿಸಲು ಈ ಕ್ರಮ

ಟ್ರಂಪ್ ಟ್ವಿಟರ್ ಖಾತೆ ಶಾಶ್ವತವಾಗಿ ಅಮಾನತು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ‘ಮತ್ತಷ್ಟು ಹಿಂಸಾಚಾರವನ್ನು ಪ್ರಚೋದಿಸುವಂತಹ ಅಪಾಯವಿರುವ ಕಾರಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ  ಅಮಾನತುಗೊಳಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮ ಸಂಸ್ಥೆ ಟ್ವಿಟರ್ ತಿಳಿಸಿದೆ.

ಜನವರಿ 20ರಂದು ನಡೆಯುವ ಜೋ ಬೈಡನ್ ಅವರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಹಾಜರಾಗುವುದಿಲ್ಲ ಎಂದು ಶುಕ್ರವಾರ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು. ಇದಾದ ನಂತರ ಕ್ಯಾಲಿಫೋರ್ನಿಯಾ ಮೂಲದ ಸಾಮಾಜಿಕ ಮಾಧ್ಯಮ ವೇದಿಕೆ ಟ್ವೀಟರ್ ಇಂಥದ್ದೊಂದು ಮಹತ್ವದ ತೀರ್ಮಾನ ಕೈಗೊಂಡಿದೆ.‌

ಟ್ರಂಪ್ ಅವರನ್ನು ಶಾಶ್ವತ ಅಮಾನತುಗೊಳಿಸುವ ಸಮಯದಲ್ಲಿ, ಅವರು 8.87 ಕೋಟಿ ಹಿಂಬಾಲಕರನ್ನು ಹೊಂದಿದ್ದರು ಮತ್ತು ಟ್ರಂಪ್ ಅವರು 51 ಜನರನ್ನು ಫಾಲೊ ಮಾಡುತ್ತಿದ್ದರು.

"@RealDonaldTrump ಖಾತೆಯಿಂದ ಇತ್ತೀಚೆಗೆ ವಿನಿಮಯವಾಗುತ್ತಿದ್ದ ಮಾಹಿತಿಗಳನ್ನು ಗಮನಿಸಿ, ವಿಶ್ಲೇಷಿಸಿದ ನಂತರ, ಈ ಮಾಹಿತಿಗಳಿಂದ ಮುಂದೆ ಉಂಟಾಬಹುದಾದ ಹಿಂಸಾಚಾರ ಮತ್ತು ಗದ್ದಲಕ್ಕೆ ಪ್ರಚೋದನೆ ನೀಡುವ ಅಪಾಯಗಳನ್ನು ಮನಗಂಡು ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸುವ ನಿರ್ಧಾರಕ್ಕೆ ಬಂದೆವು ಎಂದು ಟ್ವಿಟರ್ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು