ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂತು ಚಂಡಮಾರುತ: ಪೂರ್ವ ತೈವಾನ್‌ನಲ್ಲಿ ಬಿರುಸಿನ ಗಾಳಿ–ಮಳೆ

Last Updated 12 ಸೆಪ್ಟೆಂಬರ್ 2021, 6:09 IST
ಅಕ್ಷರ ಗಾತ್ರ

ತೈಪೆ: ಪೂರ್ವ ತೈವಾನ್‌ನಲ್ಲಿ ‘ಚಂತು’ ಚಂಡಮಾರುತ ಪ್ರಭಾವದಿಂದಾಗಿ ಭಾನುವಾರ ಬಿರುಸಿನ ಗಾಳಿ ಮತ್ತು ಮಳೆ ಸುರಿದಿದೆ. ಇದರಿಂದಾಗಿ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿದ್ದು, ಹಲವೆಡೆ ವಿದ್ಯುತ್‌ ಕಡಿತವೂ ಉಂಟಾಗಿದೆ.

‘ಚಂತು ಚಂಡಮಾರುತವು ತೈವಾನ್‌ನ ಪೂರ್ವ ಕರಾವಳಿಯನ್ನು ಅಪ್ಪಳಿಸಿತು. ಸದ್ಯ ಚಂಡಮಾರುತ ಉತ್ತರಕ್ಕೆ ಚಲಿಸುತ್ತಿದೆ’ ಎಂದು ಅಲ್ಲಿನ ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.

‘ಚಂಡಮಾರುತದ ಪ್ರಭಾವದಿಂದಾಗಿ ಹುಯ್ಲೆನ್ ಮತ್ತು ಟೈಟುಂಗ್‌ನ ಪೂರ್ವ ಭಾಗದಲ್ಲಿರುವ ಪ್ರದೇಶಗಳಲ್ಲಿ ಈವರೆಗೆ 200 ಮಿ.ಮೀ ಮಳೆಯಾಗಿದೆ. ಪೂರ್ವ ಕರಾವಳಿಯ ಆರ್ಕಿಡ್ ದ್ವೀಪದಲ್ಲಿ 7 ಮೀಟರ್‌ ಎತ್ತರದ ಅಲೆಗಳು ಎದ್ದಿದ್ದವು’ ಎಂದು ಇಲಾಖೆ ಹೇಳಿದೆ.

‘ಚಂಡಮಾರುತದಿಂದಾಗಿ ಈವರೆಗೆ ಒಟ್ಟು 159 ದೇಶಿಯ ಮತ್ತು ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಕೆಲ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.26,000 ಮನೆಗಳಿಗೆ ವಿದ್ಯುತ್‌ ಪೂರೈಕೆಯಲ್ಲಿ ತೊಡಕು ಉಂಟಾಗಿದೆ’ ಎಂದು ಕೇಂದ್ರೀಯ ತುರ್ತು ಕಾರ್ಯಾಚರಣೆ ಕೇಂದ್ರವು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT