ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ಪೂರ್ವ ಕರಾವಳಿಗೆ ಅಪ್ಪಳಿಸಿದ ಇನ್‌–ಫಾ ಚಂಡಮಾರುತ

ವಿಮಾನಯಾನ, ರೈಲುಗಳು ರದ್ದು: ಹೊರಗೆ ಹೋಗದಂತೆ ಜನರಿಗೆ ಎಚ್ಚರಿಕೆ
Last Updated 25 ಜುಲೈ 2021, 14:59 IST
ಅಕ್ಷರ ಗಾತ್ರ

ಶಾಂಘೈ: ಚೀನಾದ ಪೂರ್ವ ಕರಾವಳಿಯ ಶಾಂಘೈನ ದಕ್ಷಿಣಕ್ಕೆ ಭಾನುವಾರ ‘ಇನ್‌– ಫಾ’ ಚಂಡಮಾಡುತ ಅಪ್ಪಳಿಸಿದ್ದು, ವಿಮಾನಯಾನ ಮತ್ತು ರೈಲುಗಳನ್ನು ರದ್ದುಗೊಳಿಸಲಾಗಿದೆ. ಜನರು ಮನೆಯಿಂದ ಹೊರಗೆ ಬಾರದಂತೆ ಅಲ್ಲಿನ ಸರ್ಕಾರ ಎಚ್ಚರಿಕೆ ನೀಡಿದೆ.

ಚಂಡಮಾರುತದಿಂದಾಗಿ ಜೆಜಿಯಾಂಗ್ ಪ್ರಾಂತ್ಯದ ಜೊಹೊಸಾನ್‌ನಲ್ಲಿ ಭೂಕುಸಿತವಾಗಿದೆ ಎಂದು ಅಲ್ಲಿನ ಸ್ಥಳೀಯ ಟಿವಿ ವಾಹಿನಿಯೊಂದು ವರದಿ ಮಾಡಿದೆ. ಚೀನಾದ ಹವಾಮಾನ ಸಂಸ್ಥೆಯು ನೀಡಿರುವ ಮುನ್ನೆಚ್ಚರಿಕೆ ಪ್ರಕಾರ, ಚಂಡಮಾರುತದ ಕಾರಣ ಅಲ್ಲಿ 250ರಿಂದ 350 ಮಿ.ಲೀ.ಮಳೆಯಾಗುವ ಸಾಧ್ಯತೆ ಇದೆ.

ಗಂಟೆಗೆ 155 ಕಿ.ಮೀ. ವೇಗದಲ್ಲಿ ಚಂಡಮಾರುತ ಬೀಸುತ್ತಿದೆ. ತೈವಾನ್‌ನಲ್ಲಿ ಮಳೆ ಸುರಿವಾಗ ಚಂಡಮಾರುತದ ವೇಗವು ಗಂಟೆಗೆ 191 ಕಿ.ಮೀ. ಇತ್ತು. ಚಂಡಮಾರುತದಿಂದಾಗಿ ಅಲ್ಲಲ್ಲಿ ಮರಗಳು ಧರೆಗುಳಿದಿವೆ. ಆದರೆ, ಯಾವುದೇ ಸಾವು–ನೋವು ಉಂಟಾದ ವರದಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ವಿಮಾಯಾನ, ರೈಲುಸೇವೆ ರದ್ದು: ಶಾಂಘೈ ಪುಡಾಂಗ್ ಮತ್ತು ಶಾಂಘೈ ಹಾಂಗ್‌ಗಿಯಾವೊ ಸೇರಿದಂತೆ ಹ್ಯಾಂಗ್‌ಜುಹೊ ವಿಮಾನನಿಲ್ದಾಣಗಳಲ್ಲಿ ಅಂತರರಾಷ್ಟ್ರೀಯ ವಿಮಾನಯಾನವನ್ನು ರದ್ದುಪಡಿಸಲಾಗಿದೆ. ಸೋಮವಾರವೂ ವಿಮಾನಯಾನ ರದ್ದಾಗುವ ಸಾಧ್ಯತೆ ಇದೆ. ನಿಂಗ್ಬೊದಲ್ಲಿನ ರೈಲು ಸೇವೆಯನ್ನು ರದ್ದುಗೊಳಿಸಲಾಗಿದೆ.

ಶಾಂಘೈನಲ್ಲಿ ಉದ್ಯಾನಗಳನ್ನು ಮುಚ್ಚಲಾಗಿದೆ. ಚಂಡಮಾರುತದ ಪ್ರಭಾವ ಇರುವ ಪ್ರದೆಶಗಳಲ್ಲಿ ಶಾಲೆಗಳು, ಮಾರುಕಟ್ಟೆಗಳು ಮತ್ತು ವಾಣಿಜ್ಯ ಚಟುವಟಿಕೆಗಳನ್ನೂ ಬಂದ್ ಮಾಡಲಾಗಿದೆ. ಚಂಡಮಾರುತ ಮತ್ತು ಮಳೆಯಿಂದಾಗಿ ಚೀನಾದಲ್ಲಿ ಸಾವಿನ ಸಂಖ್ಯೆ 58ಕ್ಕೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT