ಶುಕ್ರವಾರ, ಮಾರ್ಚ್ 24, 2023
31 °C

ಇದೇ 17ಕ್ಕೆ ಬ್ರಿಟನ್ ಬಜೆಟ್‌; ಕಠಿಣ ನಿರ್ಧಾರ ಕೈಗೊಳ್ಳುವ ಸಾಧ್ಯತೆ

ರಾಯಿಟರ್ಸ್‌‌‌ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಹಣಕಾಸು ಸಚಿವ ಜೆರೆಮಿ ಹಂಟ್ ಅವರು ಇದೇ 17ರಂದು ಬಜೆಟ್‌ ಮಂಡಿಸಲಿದ್ದು, ಕನಿಷ್ಠ 40 ಬಿಲಿಯನ್ ಪೌಂಡ್ (45.50 ಬಿಲಿಯನ್ ಡಾಲರ್) ಕೊರತೆ ಸರಿದೂಗಿಸಲು ಕೆಲವು ಕಠಿಣ ಯೋಜನೆಗಳನ್ನು ರೂಪಿಸಲಿದ್ದಾರೆ. 

ಬಜೆಟ್ ಕೊರತೆ ನೀಗಿಸುವ ಪ್ರಯತ್ನವಾಗಿ ಬ್ರಿಟನ್ ಸರ್ಕಾರ ತೆರಿಗೆ ಮತ್ತು ವೆಚ್ಚದ ಬಗ್ಗೆ ಮಹತ್ವದ ಮತ್ತು ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾದ ಪರಿಸ್ಥಿತಿಯಲ್ಲಿದೆ ಎಂದು ಕ್ಯಾಬಿನೆಟ್ ಕಚೇರಿ ಸಚಿವ ಆಲಿವರ್ ಡೌಡೆನ್ ಭಾನುವಾರ ಹೇಳಿದ್ದಾರೆ.

ಆದರೆ, ಸಂಭವನೀಯ ಕ್ರಮಗಳ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.  

ಇಂಧನ ಕಂಪನಿಗಳ ಮೇಲಿನ ತೆರಿಗೆ ವಿಸ್ತರಣೆ ಮತ್ತು ಲಾಭಾಂಶದ ಆದಾಯದ ತೆರಿಗೆ ಮುಕ್ತ ಭತ್ಯೆ ಕಡಿತದಂತಹ ಕ್ರಮಗಳನ್ನು ಪರಿಗಣಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು