ಲಂಡನ್: ಅಫ್ಗಾನಿಸ್ತಾನದ ತಾಲಿಬಾನ್‌ಗಳು ಬ್ರಿಟನ್ನಿನ ಮೂವರನ್ನು ಬಂಧಿಸಿದ್ದು, ಅವರನ್ನು ಬಿಡಿಸಿಕೊಳ್ಳಲು ಬ್ರಿಟಿಷ್ ಸರ್ಕಾರ ಮಾತುಕತೆಯಲ್ಲಿ ನಿರತವಾಗಿದೆ ಎಂದು ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರೇವರ್‌ಮನ್ ಹೇಳಿದ್ದಾರೆ.
ಬಂಧಿತ ಮೂವರ ಪೈಕಿ ಇಬ್ಬರನ್ನು ಕಳೆದ ಜನವರಿಯಲ್ಲೇ ತಾಲಿಬಾನ್‌ಗಳು ವಶಕ್ಕೆ ಪಡೆದಿದ್ದವು. ಇನ್ನೊಬ್ಬ ವ್ಯಕ್ತಿ ಯಾವಾಗ ಬಂಧನಕ್ಕೆ ಒಳಗಾದ ಎಂಬ ಮಾಹಿತಿ ಲಭಿಸಿಲ್ಲ.
‘ದೇಶದ ನಾಗರಿಕರ ರಕ್ಷಣೆಯೇ ಸರ್ಕಾರದ ಆದ್ಯತೆ. ಇದಕ್ಕಾಗಿ ಮಾತುಕತೆ ನಡೆಸುತ್ತಿದ್ದು, ಬಂಧಿತರಾದವರ ಕುಟುಂಬ ಸದಸ್ಯರ ಜತೆಗೆ ಸಂಪರ್ಕದಲ್ಲಿದ್ದೇವೆ’ ಎಂದು ಬ್ರೇವರ್‌ಮನ್ ಅವರು ‘ಸ್ಕೈ ನ್ಯೂಸ್’ಗೆ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.