ಸೋಮವಾರ, ಅಕ್ಟೋಬರ್ 26, 2020
28 °C

Covid-19 World Update: 3.08 ಕೋಟಿ ಸೋಂಕಿತರು, 9.5 ಲಕ್ಷಕ್ಕೂ ಅಧಿಕ ಜನರು ಸಾವು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Covid-19

ಲಂಡನ್: ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯ ಹಿನ್ನೆಲೆಯಲ್ಲಿ ಬ್ರಿಟನ್‌ನಲ್ಲಿ ಶೀಘ್ರದಲ್ಲೇ ಮತ್ತೆ ದೇಶವ್ಯಾಪಿ ಲಾಕ್‌ಡೌನ್ ಜಾರಿ ಮಾಡುವ ಸಾಧ್ಯತೆ ಇದೆ. ಸೋಂಕು ಹರಡುವಿಕೆ ತಡೆ ನಿಯಮಗಳನ್ನು ಉಲ್ಲಂಘಿಸುವವರಿಗೆ ಹೆಚ್ಚಿನ ದಂಡ ವಿಧಿಸಲು ಅಲ್ಲಿನ ಸರ್ಕಾರ ಮುಂದಾಗಿದೆ ಎಂದೂ ಮೂಲಗಳು ತಿಳಿಸಿದೆ.

ದೇಶವ್ಯಾಪಿ ಲಾಕ್‌ಡೌನ್ ಆಗಬಾರದೆಂದು ನಾವು ಬಯಸುತ್ತೇವೆ. ಆದರೆ, ಅಗತ್ಯಬಿದ್ದಲ್ಲಿ ಅದಕ್ಕೂ ಸಿದ್ಧರಾಗಿರಬೇಕಿದೆ ಎಂದು ಆರೋಗ್ಯ ಸಚಿವ ಮ್ಯಾಟ್‌ ಹಾನ್‌ಕಾಕ್ ಹೇಳಿರುವುದಾಗಿ ಬಿಬಿಸಿ ಸುದ್ದಿವಾಹಿನಿ ವರದಿ ಮಾಡಿದೆ. ಬ್ರಿಟನ್‌ನಲ್ಲಿ ಈವರೆಗೆ 3,92,845 ಮಂದಿ ಸೋಂಕಿತರಾಗಿದ್ದು, 41,848 ಸಾವು ಸಂಭವಿಸಿದೆ.

ಜಾನ್ಸ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಕೊರೊನಾ ವೈರಸ್ ರಿಸೋರ್ಸ್‌ ಸೆಂಟರ್ ಮಾಹಿತಿ ಪ್ರಕಾರ, ವಿಶ್ವದಾದ್ಯಂತ ಸೋಂಕಿತರಾದವರ ಸಂಖ್ಯೆ ಭಾನುವಾರ ರಾತ್ರಿ ವೇಳೆಗೆ 3 ಕೋಟಿ ದಾಟಿದೆ. 9.57 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: 

ಇಂಡೊನೇಷ್ಯಾದಲ್ಲಿಯೂ ದಿನದ ಗರಿಷ್ಠ ಸೋಂಕು ಪ್ರಕರಣಗಳು ವರದಿಯಾಗಿದ್ದು, ಒಂದೇ ದಿನ 4,168 ಜನರಲ್ಲಿ ಸೋಂಕು ದೃಢಪಟ್ಟಿದೆ. ಅಲ್ಲಿ ಈವರೆಗೆ 2.44 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿತರಾಗಿದ್ದಾರೆ.

ಫ್ರಾನ್ಸ್‌ನಲ್ಲಿಯೂ ಒಂದೇ ದಿನ ಗರಿಷ್ಠ ಪ್ರಕರಣಗಳು ಪತ್ತೆಯಾಗಿದ್ದು, 13,000 ಮಂದಿ ಸೋಂಕಿತರಾಗಿದ್ದಾರೆ. ಅಲ್ಲಿ ಈವರೆಗೆ 4,67,614 ಮಂದಿಗೆ ಸೋಂಕು ತಗುಲಿದ್ದು, 30,495 ಜನ ಅಸುನೀಗಿದ್ದಾರೆ.

ಸ್ಪೇನ್‌ ರಾಜಧಾನಿ ಮ್ಯಾಡ್ರಿಡ್‌ನಲ್ಲಿ ಹಾಗೂ ಸುತ್ತಲಿನ ನಗರಗಳಲ್ಲಿ ಭಾಗಶಃ ಲಾಕ್‌ಡೌನ್ ಘೋಷಿಸಲಾಗಿದೆ. ಸ್ಪೇನ್‌ನಲ್ಲಿ ಈವರೆಗೆ 6,40,040 ಮಂದಿಗೆ ಸೋಂಕು ತಗುಲಿದ್ದು, 30,495 ಮಂದಿ ಮೃತಪಟ್ಟಿದ್ದಾರೆ.

ಸೋಂಕಿನಿಂದ ಅತಿಹೆಚ್ಚು ಮಂದಿ ಚೇತರಿಸಿಕೊಳ್ಳುತ್ತಿರುವ ದೇಶಗಳ ಸಾಲಿನಲ್ಲಿ ಭಾರತವು ನಿನ್ನೆ ಅಗ್ರ ಸ್ಥಾನಕ್ಕೇರಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು