ಗುರುವಾರ , ಮಾರ್ಚ್ 30, 2023
32 °C

ಪತ್ರಕರ್ತರ ಮೇಲಿನ ದಾಳಿಗೆ ಖಂಡನೆ: ವಿಶ್ವಸಂಸ್ಥೆಯ ಕರಡು ನಿರ್ಣಯ

ಎಪಿ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ: ಪತ್ರಕರ್ತರು ಮತ್ತು ಮಾಧ್ಯಮ ಸಿಬ್ಬಂದಿ ಮೇಲೆ ನಡೆದಿರುವ ಎಲ್ಲ ದಾಳಿಗಳು ಹಾಗೂ ಹಿಂಸಾ ಕೃತ್ಯಗಳನ್ನು ವಿಶ್ವಸಂಸ್ಥೆಯ ಪ್ರಸ್ತಾವಿತ ನಿರ್ಣಯವು ಖಂಡಿಸಿದೆ. ಜೊತೆಗೆ, ಇಂಥ ದುಷ್ಕೃತ್ಯ ಎಸಗಿದವರನ್ನು ಶಿಕ್ಷಿಸಿ, ಈಗಿರುವ ಭೀತಿಯ ವಾತಾವರಣವನ್ನು ಕೊನೆಗಾಣಿಸುವಂತೆ ವಿಶ್ವದ ಎಲ್ಲ ರಾಷ್ಟ್ರಗಳನ್ನು ಒತ್ತಾಯಿಸುತ್ತದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಈ ಕರಡು ನಿರ್ಣಯವನ್ನು ಶುಕ್ರವಾರ ಅಂಗೀಕರಿಸಲಾಗಿದೆ. ‘ದಬ್ಬಾಳಿಕೆಯಿಂದ ಬಂಧಿಸಿರುವ ಅಥವಾ ಒತ್ತೆಯಾಳಾಗಿಸಿಕೊಂಡಿರುವ ಅಥವಾ ಅಪಹರಣಕ್ಕೊಳಗಿರುವ ಪತ್ರಕರ್ತರು ಮತ್ತು ಮಾಧ್ಯಮ ಸಿಬ್ಬಂದಿಯನ್ನು ತಕ್ಷಣ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡುವಂತೆ’ ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.

193 ಸದಸ್ಯ ರಾಷ್ಟ್ರಗಳು ಈ ನಿರ್ಣಯಕ್ಕೆ ಅಂಕಿತ ಹಾಕಬೇಕಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು