ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಾ ಮೇಲಿನ ಇಸ್ರೇಲ್‌ ದಾಳಿ ಬಗ್ಗೆ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ತೀವ್ರ ಕಳವಳ

ನಾಗರಿಕರು ಹಾಗೂ ಮಾಧ್ಯಮಗಳ ಮೇಲಿನ ದಾಳಿ ಅಂತರರಾಷ್ಟ್ರೀಯ ಕಾಯ್ದೆಗಳ ಉಲ್ಲಂಘನೆ ಎಂದು ಎಚ್ಚರಿಕೆ
Last Updated 16 ಮೇ 2021, 5:45 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ‘ಗಾಜಾ ನಗರದಲ್ಲಿ ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳ ಕಚೇರಿಗಳಿರುವ ಬೃಹತ್‌ ಕಟ್ಟಡ, ಜನವಸತಿಯುಳ್ಳ ಅಪಾರ್ಟ್‌ಮೆಂಟ್‌ಗಳು ಇಸ್ರೇಲ್‌ ನಡೆಸಿರುವ ವೈಮಾನಿಕ ದಾಳಿಯಲ್ಲಿ ಧ್ವಂಸಗೊಂಡಿದ್ದು, ಇದರಿಂದ ಬಹಳ ವ್ಯಾಕುಲಗೊಂಡಿದ್ದೇನೆ’ ಎಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಹೇಳಿದ್ದಾರೆ.

‘ನಾಗರಿಕರು ಹಾಗೂ ಮಾಧ್ಯಮಗಳ ಕಚೇರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದು ಅಂತರರಾಷ್ಟ್ರೀಯ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಇಂಥ ಕ್ರಮಗಳಿಗೆ ಮುಂದಾಗಬಾರದು ಎಂದು ಗುಟೆರಸ್‌ ಅವರು ಎರಡೂ ರಾಷ್ಟ್ರಗಳಿಗೆ ಎಚ್ಚರಿಸಿದ್ದಾರೆ’ ಎಂದು ಗುಟೆರಸ್‌ ಅವರ ವಕ್ತಾರ ಸ್ಟೀಫನ್‌ ದುಜಾರಿಕ್‌ ಹೇಳಿದರು.

ಇಸ್ರೇಲ್‌ ವಾಯುಪಡೆ ಶನಿವಾರ ನಡೆಸಿದ ದಾಳಿಯಲ್ಲಿ ಗಗನಚುಂಬಿ ಕಟ್ಟಡವೊಂದು ನೆಲಸಮಗೊಂಡಿದೆ. ಈ ಕಟ್ಟಡದಲ್ಲಿ ದಿ ಅಸೋಸಿಯೇಟೆಡ್‌ ಪ್ರೆಸ್, ಅಲ್‌ ಜಝೀರಾ ಸೇರಿದಂತೆ ಹಲವು ಮಾಧ್ಯಮ ಸಂಸ್ತೆಗಳ ಕಚೇರಿಗಳಿದ್ದವು.

ಗಾಜಾದಲ್ಲಿರುವ ಅಲ್‌–ಶತಿ ನಿರಾಶ್ರಿತರ ಶಿಬಿರದಲ್ಲಿದ್ದ ಒಂದೇ ಕುಟುಂಬದ 10 ಜನರು ಮೃತಪಟ್ಟ ಘಟನೆ ಬಗ್ಗೆಯೂ ಗುಟೆರಸ್‌ ಕಳವಳ ವ್ಯಕ್ತಪಡಿಸಿದ್ದಾಗಿ ದುಜಾರಿಕ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT