ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾದಲ್ಲಿ ಪಾಕ್ ನಡೆಸಿದ ನರಮೇಧವನ್ನು ವಿಶ್ವಸಂಸ್ಥೆ ಗುರುತಿಸಬೇಕು: ಶೌಕತ್ ಅಲಿ

ಅಕ್ಷರ ಗಾತ್ರ

ಜಿನಿವಾ (ಸ್ವಿಟ್ಜರ್‌ಲ್ಯಾಂಡ್): ‌1971ರಲ್ಲಿ ನಡೆದ ಬಾಂಗ್ಲಾದೇಶ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಪಾಕಿಸ್ತಾನವು ನಡೆಸಿದ ನರಮೇಧವನ್ನು ವಿಶ್ವಸಂಸ್ಥೆ ಹಾಗೂ ಇತರ ಅಂತರರಾಷ್ಟ್ರೀಯ ಸಂಘಟನೆಗಳು ಗುರುತಿಸಬೇಕು ಎಂದು ಕಾಶ್ಮೀರದಿಂದ ಗಡಿಪಾರಾಗಿರುವ ನಾಯಕ ಸರ್ದಾರ್‌ ಶೌಕತ್‌ ಅಲಿ ಆಗ್ರಹಿಸಿದ್ದಾರೆ. ಜೊತೆಗೆ ಈ ಅಪರಾಧಕ್ಕಾಗಿ ಪಾಕಿಸ್ತಾನವು ಕ್ಷಮೆಯಾಚಿಸಬೇಕು ಎಂದೂ ಒತ್ತಾಯಿಸಿದ್ದಾರೆ.

ಯುನೈಟೆಡ್‌ ಕಾಶ್ಮೀರ್‌ ಪೀಪಲ್ಸ್‌ ನ್ಯಾಷನಲ್‌ ಪಾರ್ಟಿಯ (ಯುಕೆಪಿಎನ್‌ಪಿ) ಮುಖ್ಯಸ್ಥ ಅಲಿ,ಬಾಂಗ್ಲಾ ಸಮುದಾಯದವರು ಜಿನಿವಾದಲ್ಲಿರುವ ವಿಶ್ವಸಂಸ್ಥೆಯ ಕಚೇರಿ ಎದುರು ನಡೆಸಿದ ಪ್ರತಿಭಟನೆ ವೇಳೆ ಮಾತನಾಡಿದರು. ಬಾಂಗ್ಲಾದಲ್ಲಿ ದಂಗೆಯನ್ನು ಹತ್ತಿಕ್ಕುವ ಸಲುವಾಗಿ ಪಾಕ್‌ ಸೇನೆಯು ನಾಗರಿಕರ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಮೃತಪಟ್ಟವರ ಪರವಾಗಿ ಜಿನಿವಾದಲ್ಲಿ ಒಗ್ಗಟ್ಟು ಪ್ರದರ್ಶಿಸಲಾಯಿತು.

ʼಪಾಕಿಸ್ತಾನ ಸೇನೆಯು ನರಮೇಧದಮೂಲಕ ಸಾಕಷ್ಟು ಜನ ಬಾಂಗ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ಹತ್ಯೆಗೈದಿದೆʼ ಎಂದು ಅಲಿ ಆರೋಪಿಸಿದ್ದಾರೆ.

ʼವಿಶ್ವಸಂಸ್ಥೆ ಮತ್ತು ಎಲ್ಲಾ ಅಂತರರಾಷ್ಟ್ರೀಯ ಸಂಘಟನೆಗಳು ಪಾಕ್‌ ನಡೆಸಿದ1971ರ ಯುದ್ಧಾಪರಾಧ ಮತ್ತು ನರಮೇಧವನ್ನು ಮುಖ್ಯವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿ ನಾವಿಲ್ಲಿ ಸೇರಿದ್ದೇವೆ. ಜೊತೆಗೆ‌ ಈ ಸಂಬಂಧ ಪಾಕಿಸ್ತಾನವು ಕ್ಷಮೆಯಾಚಿಸಬೇಕು ಹಾಗೂ ಸಂತ್ರಸ್ತರ ಕುಟುಂಬದವರಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸುತ್ತೇವೆʼ ಎಂದು ತಿಳಿಸಿದ್ದಾರೆ.

ಪ್ರತಿಭಟನೆಸಂದರ್ಭ ಫಲಕಗಳು ಮತ್ತು ಬ್ಯಾನರ್‌ಗಳನ್ನು ಪ್ರದರ್ಶಿಸಿದ ಪ್ರತಿಭಟನಾಕಾರರು ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದರು. ʼವಿಶ್ವಸಂಸ್ಥೆಯು ನರಮೇಧವನ್ನು ಗುರುತಿಸಬೇಕುʼ, ʼಬಾಂಗ್ಲಾ ನರಮೇಧದ ವೇಳೆ30 ಲಕ್ಷ ಜನರನ್ನು ಹತ್ಯೆಮಾಡಲಾಗಿದೆ.2 ಲಕ್ಷ ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಗಿದೆ.1 ಕೋಟಿ ಜನರು ನಿರಾಶ್ರಿತರಾಗಿದ್ದಾರೆʼ ಎಂಬ ಫಲಕಗಳನ್ನು ಪ್ರದರ್ಶಿಸಲಾಯಿತು.

1971ರ ಮಾರ್ಚ್‌ನಿಂದ ಡಿಸೆಂಬರ್‌ವರೆಗೆ ನಡೆದ ಯುದ್ಧದ ಸಂದರ್ಭದಲ್ಲಿ ಪೂರ್ವ ಪಾಕಿಸ್ತಾನವು (ಬಾಂಗ್ಲಾದೇಶದ ಹಿಂದಿನ ಹೆಸರು) ಮಾನವೀಯತೆಯ ಸಂಪೂರ್ಣ ಕುಸಿತಕ್ಕೆ ಸಾಕ್ಷಿಯಾಯಿತು. ದೌರ್ಜನ್ಯ ಮತ್ತು ಕ್ರೌರ್ಯ ಪ್ರಕರಣಗಳುನಡೆಯುತ್ತಲೇ ಇದ್ದವಾದರೂ, 1971ರ ಮಾರ್ಚ್‌25ರ ಬಳಿಕ ಉತ್ತುಂಗಕ್ಕೇರಿದವು.

ವರದಿಗಳ ಪ್ರಕಾರ ಮೂವತ್ತು ಲಕ್ಷ ಜನರು ಮೃತಪಟ್ಟಿದ್ದರು. ಐದು ಲಕ್ಷ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಅತ್ಯಾಚಾರಕ್ಕೊಳಗಾಗಿದ್ದರು. ಹಳ್ಳಿಗಳು ಪಾಳು ಬಿದ್ದಂತಾದವು. ಬಹುತೇಕ ಗಂಡಸರನ್ನು ಗುರಿಯಾಗಿರಿಸಿ ದಾಳಿ ಮಾಡಲಾಗಿತ್ತು. ಪಾಕ್‌ ಸೈನಿಕರಿಂದ ಮಹಿಳೆಯರ ಅಪಹರಣ ಮತ್ತು ಅತ್ಯಾಚಾರಗಳು ಸೇನಾ ಶಿಬಿರಗಳಲ್ಲಿ ತಿಂಗಳುಗಳವರೆಗೆ ನಿರಂತರವಾಗಿನಡೆದವು.

ಈ ನರಮೇಧದ ಬಗ್ಗೆ ಪ್ರಪಂಚಕ್ಕೆತಿಳಿದಿಲ್ಲ.ಪಾಕ್‌ ಪಡೆಗಳು ನಡೆಸಿದ ಈ ಕೃತ್ಯದ ಬಗ್ಗೆ ವಿಶ್ವಸಂಸ್ಥೆಯು ಬೆಳಕು ಚೆಲ್ಲಬೇಕೆಂದು ಮಾನವ ಹಕ್ಕು ಕಾರ್ಯಕರ್ತರು ಪದೇಪದೆ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT