ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Independence Day: ಭಾರತ ಜೊತೆಗಿನ ಬಾಂಧವ್ಯ ನೆನಪಿಸಿದ ಅಮೆರಿಕ ಅಧ್ಯಕ್ಷ

Last Updated 15 ಆಗಸ್ಟ್ 2022, 1:51 IST
ಅಕ್ಷರ ಗಾತ್ರ

ವಾಷಿಂಗ್ಟನ್: ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಭ ಹಾರೈಸಿದ್ದು, ಉಭಯ ರಾಷ್ಟ್ರಗಳು ಆತ್ಮೀಯ ಪಾಲುದಾರರು ಎಂದು ಉಲ್ಲೇಖಿಸಿದ್ದಾರೆ.

ಆಗಸ್ಟ್ 15ರಂದು ಭಾರತದ 75ನೇ ಸ್ವಾತಂತ್ರ್ಯೋತ್ಸವವನ್ನು ಸುಮಾರು 40 ಲಕ್ಷ ಭಾರತೀಯ ಅಮೆರಿಕನ್ನರು ಸೇರಿದಂತೆ ವಿಶ್ವದಾದ್ಯಂತದ ಜನರು ಆಚರಿಸುತ್ತಿರುವಾಗ, ಮಹಾತ್ಮ ಗಾಂಧಿ ಅವರ ಸತ್ಯ ಹಾಗೂ ಅಹಿಂಸೆಯ ಮಾರ್ಗದರ್ಶನದೊಂದಿಗೆ ಪ್ರಜಾಸತ್ತಾತ್ಮಕ ಪ್ರಯಾಣವನ್ನು ಗೌರವಿಸಲು ಭಾರತದ ಜನರೊಂದಿಗೆ ಅಮೆರಿಕವು ಭಾಗಿಯಾಗುತ್ತದೆ ಎಂದು ಜೋ ಬೈಡನ್ ಹೇಳಿದ್ದಾರೆ.

ಈ ವರ್ಷ, ನಾವು ನಮ್ಮ ಮಹಾನ್ ಪ್ರಜಾಪ್ರಭುತ್ವಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 75ನೇ ವಾರ್ಷಿಕೋತ್ಸವವನ್ನು ಆಚರಿಸುತ್ತೇವೆ. ಭಾರತ ಮತ್ತು ಅಮೆರಿಕ ಆತ್ಮೀಯ ಪಾಲುದಾರರಾಗಿದ್ದು, ಉಭಯ ದೇಶಗಳ ಸಹಭಾಗಿತ್ವವು ಪರಸ್ಪರ ಬದ್ಧತೆಯಿಂದ ಕೂಡಿದೆ ಎಂದು ಹೇಳಿದ್ದಾರೆ.

ನಮ್ಮ ಜನರ ನಡುವಣ ಆಳವಾದ ಬಾಂಧವ್ಯದಿಂದ ಪಾಲುದಾರಿಕೆ ಮತ್ತಷ್ಟು ಬಲಿಷ್ಠಗೊಂಡಿದೆ. ಅಮೆರಿಕದಲ್ಲಿರುವ ಭಾರತ-ಅಮೆರಿಕ ಸಮುದಾಯವು ನಮ್ಮನ್ನು ಮತ್ತಷ್ಟು ನಾವೀನ್ಯ ಹಾಗೂ ಬಲಿಷ್ಠ ರಾಷ್ಟ್ರವನ್ನಾಗಿಸಿದೆ ಎಂದು ತಿಳಿಸಿದರು.

ಮುಂದಿನ ವರ್ಷಗಳಲ್ಲಿ ಎಲ್ಲ ಸವಾಲುಗಳನ್ನು ಎದುರಿಸಲು ಭಾರತ ಹಾಗೂ ಅಮೆರಿಕವು ಒಗ್ಗಟ್ಟಾಗಿ ನಿಲ್ಲುತ್ತವೆ ಎಂದು ಬೈಡನ್ ವಿಶ್ವಾಸ ವ್ಯಕ್ತಪಡಿಸಿದರು.

ಅಮೆರಿಕ ಸೇರಿದಂತೆ ಜಗತ್ತಿನ ಪ್ರಮುಖ ನಾಯಕರು ಭಾರತಕ್ಕೆ ಸ್ವಾತಂತ್ರ್ಯೋತ್ಸವದ ಶುಭ ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT