ಸೋಮವಾರ, ಏಪ್ರಿಲ್ 19, 2021
32 °C

ಅಮೆರಿಕದಲ್ಲಿ ವಾಸವಿರುವ ಮ್ಯಾನ್ಮಾರ್‌ನ ಪ್ರಜೆಗಳಿಗೆ ತಾತ್ಕಾಲಿಕ ರಕ್ಷಣೆ

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಜೋ ಬೈಡನ್‌ ನೇತೃತ್ವದ ಅಮೆರಿಕ ಸರ್ಕಾರವು ಮ್ಯಾನ್ಮಾರ್‌ ಪ್ರಜೆಗಳಿಗೆ ಅಮೆರಿಕದಲ್ಲಿ ಕಾನೂನಾತ್ಮಕ ರೀತಿಯಲ್ಲಿ ತಾತ್ಕಾಲಿಕವಾಗಿ ನೆಲೆಸಲು ಅನುಮತಿ ನೀಡಿದೆ. ಈಗಾಗಲೇ ಅಮೆರಿಕದಲ್ಲಿ ನೆಲೆಸಿರುವ ಮ್ಯಾನ್ಮಾರ್‌ನ ‍ಪ್ರಜೆಗಳಿಗೆ ಮಾತ್ರ ಈ ಅವಕಾಶವನ್ನು ಕಲ್ಪಿಸಲಾಗಿದೆ.

‘ಅಮೆರಿಕದಲ್ಲಿ ವಾಸವಿರುವ ಮ್ಯಾನ್ಮಾರ್‌ನ ಜನರಿಗೆ ತಾತ್ಕಾಲಿಕ ರಕ್ಷಣೆ ನೀಡಲಾಗಿದೆ. ಇದು 18 ತಿಂಗಳವರೆಗೂ ಇರುತ್ತದೆ’ ಎಂದು ಹೋಂಲ್ಯಾಂಡ್‌ ಸೆಕ್ಯುರಿಟಿ ಇಲಾಖೆಯ ಕಾರ್ಯದರ್ಶಿ ಅಲೆಜಾಂಡ್ರೊ ಮಯೋಕಾರ್ಸ್‌ ಅವರು ತಿಳಿಸಿದ್ದಾರೆ.

‘ಮ್ಯಾನ್ಮಾರ್‌ನಲ್ಲಿ ಮಿಲಿಟರಿ ದಂಗೆಯಿಂದಾಗಿ ಮಾನವೀಯತೆ ನಾಶವಾಗುತ್ತಿದೆ. ಅಲ್ಲದೆ ಆರ್ಥಿಕ ಬಿಕ್ಕಟ್ಟು ಕೂಡ ಹೆಚ್ಚಿದೆ. ಇದರಿಂದಾಗಿ ಬೇರೆ ದೇಶಗಳಲ್ಲಿ ನೆಲೆಸಿರುವ ಮ್ಯಾನ್ಮಾರ್‌ ಪ್ರಜೆಗಳಿಗೆ ತನ್ನ ರಾಷ್ಟ್ರಕ್ಕೆ ಮರಳಲು ಬಹಳ ಕಷ್ಟವಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

ಫೆಬ್ರುವರಿ 1ರಂದು ನಾಯಕಿ ಆಂಗ್ ಸಾನ್ ಸೂಕಿ ನೇತೃತ್ವದ ಚುನಾಯಿತ ಸರ್ಕಾರದ ವಿರುದ್ಧ ದಂಗೆ ಎದ್ದು, ಮಿಲಿಟರಿ ಆಡಳಿತ ಚುಕ್ಕಾಣಿ ಹಿಡಿಯಿತು. ಇದನ್ನು ವಿರೋಧಿಸಿ ಮ್ಯಾನ್ಮಾರ್‌ನಲ್ಲಿ ಹಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಭದ್ರತಾ ಪಡೆಗಳು ಪ್ರತಿಭಟನಕಾರರನ್ನು ಚದುರಿಸಲು ಹಿಂಸಾಚಾರವನ್ನು ನಡೆಸುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು