ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌| ಜುಲೈ 30ರಂದು ಬೈಡನ್‌ಗೆ ಮರುಸೋಂಕು: ಪರೀಕ್ಷಾ ವರದಿ ಈಗಲೂ ಪಾಸಿಟಿವ್‌!

Last Updated 6 ಆಗಸ್ಟ್ 2022, 2:05 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಕೆಮ್ಮು ಸಂಪೂರ್ಣವಾಗಿ ವಾಸಿಯಾಗಿದೆ. ಆದರೆ ಅವರ ಕೋವಿಡ್ -19 ಪರೀಕ್ಷೆಯು ಇನ್ನೂ ಪಾಸಿಟಿವ್‌ ಎಂದೇ ಬರುತ್ತಿದೆ ಎಂದು ಅವರ ವೈದ್ಯರು ಶುಕ್ರವಾರ ಹೇಳಿದ್ದಾರೆ.

‘ಬೈಡನ್ ಆರೋಗ್ಯ ಉತ್ತಮವಾಗಿಯೇ ಇದೆ. ಅವರು ಕೂಡ ಕಟ್ಟುನಿಟ್ಟಾದ ಕ್ರಮಗಳನ್ನು ಅನುಸರಿಸುತ್ತಿದ್ದಾರೆ’ ಎಂದು ಶ್ವೇತಭವನದ ವೈದ್ಯ ಡಾ. ಕೆವಿನ್ ಓ'ಕಾನ್ನರ್ ಹೇಳಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ಐಎಎನ್‌ಎಸ್‌ ವರದಿ ಮಾಡಿದೆ.

‘ಬೈಡನ್‌ ಅವರಿಗೆ ಕೋವಿಡ್ ಇರುವುದು ಜುಲೈ 21 ರಂದು ಗೊತ್ತಾಗಿತ್ತು. ಹಲವು ದಿನ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆದಿದ್ದ ಅವರು, ಜುಲೈ 26 ರಂದು ಮತ್ತೆ ಪರೀಕ್ಷೆ ಮಾಡಿಸಿದ್ದರು. ಆಗ ನೆಗೆಟಿವ್ ಎಂದು ಬಂದಿತ್ತು. ಆದರೆ, ಜುಲೈ 30 ರಂದು ಅವರಿಗೆ ಮರುಸೋಂಕು ಕಾಣಿಸಿಕೊಂಡಿತ್ತು. ಆಗಿನಿಂದಲೂ ಬೈಡನ್‌ ವೈದ್ಯಕೀಯ ಆರೈಕೆಯಲ್ಲಿದ್ದಾರಾದರೂ, ಈಗಲೂ ಅವರ ಪರೀಕ್ಷಾ ವರದಿಯಲ್ಲಿ ಪಾಸಿಟಿವ್‌ ಎಂದೇ ಬರುತ್ತಿದೆ’ ಎಂದು ವೈದ್ಯರು ತಿಳಿಸಿದ್ದಾರೆ.

ಈ ಮಧ್ಯೆ ಬೈಡನ್‌ ಶನಿವಾರ ಮಧ್ಯಾಹ್ನ ಎರಡು ಮಸೂದೆಗಳಿಗೆ ಸಹಿ ಹಾಕಲು ನಿರ್ಧರಿಸಿದ್ದಾರೆ.

ಅಮೆರಿಕದಲ್ಲಿ ಈ ವರೆಗೆ 9,38,66,641 ಮಂದಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ. ಈ ಪೈಕಿ, 8,88,23,296 ಮಂದಿ ಗುಣಮುಖರಾಗಿದ್ದಾರೆ. ಅಲ್ಲಿ ಒಟ್ಟು 10,58,637 ಮಂದಿ ಕೋವಿಡ್‌ ಕಾರಣದಿಂದ ಮೃತಪಟ್ಟಿದ್ದಾರೆ.

ಇನ್ನೊಂದೆಡೆ, ದೇಶಕ್ಕೆ ಬರುವ ಅಂತರರಾಷ್ಟ್ರೀಯ ಪ್ರಯಾಣಿಕರು ಕೋವಿಡ್ –19 ಪರೀಕ್ಷೆಗೆ ಕಡ್ಡಾಯವಾಗಿ ಒಳಪಟ್ಟಿರಬೇಕು ಎಂಬ ನಿರ್ಬಂಧವನ್ನು ಅಮೆರಿಕ ಕಳೆದ ತಿಂಗಳು ಕೈಬಿಟ್ಟಿತು.

ಕೋವಿಡ್‌ ಸಂಬಂಧಿತ ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಗೊಳಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದು ಅಮೆರಿಕ ಹೇಳಿಕೊಂಡಿತ್ತು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT