ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಚುನಾವಣೆ: ಟ್ರಂಪ್‌ ರಷ್ಯಾದ ಪುಟಿನ್‌ನ 'ಪಪ್ಪಿ' ಆಗಿದ್ದಾರೆ–ಬೈಡನ್

Last Updated 30 ಸೆಪ್ಟೆಂಬರ್ 2020, 2:51 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಸ್ಥಾನದ ಚುನಾವಣೆಗೆ ಇನ್ನು 35 ದಿನಗಳಷ್ಟೇ ಬಾಕಿ ಇದ್ದು, ಬುಧವಾರ ಹಾಲಿ ಅಧ್ಯಕ್ಷ, ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಮತ್ತು ಪ್ರತಿಸ್ಪರ್ಧಿ ಡೆಮಾಕ್ರಟಿಕ್‌‌ ಪಕ್ಷದ ಜೋ ಬೈಡನ್‌ ಅವರ ನಡುವೆ ವಾಕ್ಸಮರ ನಡೆದಿದೆ.

ಇಬ್ಬರೂ ಮುಖಂಡರು ವೇದಿಕೆಗೆ ಬರುತ್ತಿದ್ದಂತೆ ಪರಸ್ಪರ ಹಸ್ತಲಾಗವ ಮಾಡಲಿಲ್ಲ. ಕೋವಿಡ್‌–19 ನಿರ್ಬಂಧಗಳಿಂದಾಗಿ ಅಂತರ ಕಾಯ್ದುಕೊಳ್ಳಲಾಗಿದ್ದು, ಕ್ಲೀವ್‌ಲ್ಯಾಂಡ್‌ನ ವೇದಿಕೆಯಲ್ಲಿ ಉಭಯ ನಾಯಕರು ಮೊದಲ ಬಾರಿಗೆ 90 ನಿಮಿಷಗಳ ಬಹಿರಂಗ ಚರ್ಚೆಯಲ್ಲಿ (ಟಿವಿ ನೇರ ಪ್ರಸಾರ) ಮುಖಾಮುಖಿಯಾಗಿದ್ದಾರೆ. ನವೆಂಬರ್‌ 3ರಂದು ಚುನಾವಣೆ ನಿಗದಿಯಾಗಿದೆ.

'ಸತ್ಯವೆಂದರೆ ಇವರು ಈವರೆಗೂ ಹೇಳಿರುವುದೆಲ್ಲವೂ ಸುಳ್ಳೇ ಆಗಿದೆ. ಇವರ ಸುಳ್ಳುಗಳನ್ನು ಮೇಲೆತ್ತಿ ತೋರಲು ನಾನಿಲ್ಲಿ ಬಂದಿಲ್ಲ. ಪ್ರತಿಯೊಬ್ಬರಿಗೂ ತಿಳಿದಿದೆ, ಈತ ಸುಳ್ಳುಗಾರನೆಂದು' ಎಂದು ಬೈಡನ್‌ ಹೇಳಿದರು.

ಆರಂಭದಿಂದಲೇ ಚರ್ಚೆ ಕಾವೇರಿದ್ದು, ಒಬ್ಬರ ಮಾತಿನ ನಡುವೆ ಮತ್ತೊಬ್ಬರು ಅಡ್ಡಿಪಡಿಸಿ ಮಾತನಾಡುವುದು ನಡೆದೇ ಇದೆ. ಒಂದು ಹಂತದಲ್ಲಿ ಬೈಡನ್‌, 'ವಿಲ್‌ ಯು ಶಟ್‌ ಅಪ್‌, ಮ್ಯಾನ್‌!' (ಸ್ವಲ್ಪ ಬಾಯಿ ಮುಚ್ಚುವಿರೇ!) ಎಂದು ಗುಡುಗಿದರು.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಎದುರಿಸಲು ಡೊನಾಲ್ಡ್‌ ಟ್ರಂಪ್‌ಗೆ ಸಾಧ್ಯವಾಗಿಲ್ಲ ಎಂದು ಬೈಡನ್‌ ಆರೋಪಿಸಿದ್ದು, ಪುಟಿನ್‌ನ 'ಪಪ್ಪಿ' (ನಾಯಿ ಮರಿ) ಆಗಿದ್ದಾರೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT