ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಮತಎಣಿಕೆ 43 ರಾಜ್ಯಗಳಲ್ಲಿ ಪೂರ್ಣಗೊಂಡಿದೆ. ಈ ರಾಜ್ಯಗಳ ಎಲೆಕ್ಟೋರಲ್ ಮತಗಳಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬೈಡನ್ ಅವರು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಮುನ್ನಡೆ ಸಾಧಿಸಿದ್ದಾರೆ. ಆದರೆ, ಇನ್ನೂ ಏಳು ರಾಜ್ಯಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಇಬ್ಬರ ನಡುವೆಯೂ ನಿಕಟ ಸ್ಪರ್ಧೆ ಇದೆ.

ಇದನ್ನು ನೋಡಿ: Infographics| ಅಮೆರಿಕ: ಯಾರಿಗೆ ಎಷ್ಟು ಮತ?

ಬುಧವಾರ ತಡರಾತ್ರಿ ಎಣಿಕೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಅದರೆ, ನೆವಾಡಾ ರಾಜ್ಯದಲ್ಲಿ ಗುರುವಾರದವರೆಗೆ ಮತಎಣಿಕೆ ಪೂರ್ಣವಾಗಲಾರದು ಎಂದು ಅಲ್ಲಿನ ಚುನಾವಣಾ ಮಂಡಳಿ ಹೇಳಿದೆ. ಹೀಗಾಗಿ ಪೂರ್ಣ ಫಲಿತಾಂಶಕ್ಕಾಗಿ ಗುರುವಾರದವರೆಗೆ (ಭಾರತೀಯ ಕಾಲಮಾನ ಶುಕ್ರವಾರ) ಕಾಯಬೇಕಿದೆ.

ಇದನ್ನು ಓದಿ:ಟ್ರಂಪ್ ಗೆಲುವು ಘೋಷಣಾ ಪ್ರಹಸನ

ಈವರೆಗೆ ಎಣಿಕೆ ಆಗಿರುವ ಒಟ್ಟು ಮತಗಳಲ್ಲಿ ಜೊ ಬೈಡನ್ ಅವರು ಶೇ 50ರಷ್ಟು ಮತ್ತು ಟ್ರಂಪ್ ಅವರು ಶೇ 48.3ರಷ್ಟು ಮತಗಳನ್ನು ಪಡೆದಿದ್ದಾರೆ. ಮತ ಎಣಿಕೆ ಪೂರ್ಣವಾದಾಗ, ಈ ಸಂಖ್ಯೆ ಗಳು ಬದಲಾಗುವ ಸಾಧ್ಯತೆ ಹೆಚ್ಚಾಗಿದೆ. ಪ್ರಮುಖ ಬ್ಯಾಟಲ್‌ಗ್ರೌಂಡ್ ರಾಜ್ಯಗಳಾದ ಮಿಷಿಗನ್ ಮತ್ತು ಪನ್ಸಿಲ್ವೇನಿಯಾದಲ್ಲಿ ಟ್ರಂಪ್ ಅವರು ಮುನ್ನಡೆ ಸಾಧಿಸಿದ್ದಾರೆ. ಈಗ ಜನರ ಮತದಾನದ ಆಧಾರದ ಮೇಲೆ ಎಲೆಕ್ಟರ್‌ಗಳು ಆಯ್ಕೆಯಾಗುತ್ತಾರೆ. ಇವರು ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಎಲೆಕ್ಟೋರಲ್ ಮತದಾನವು ಡಿ. 14ರಂದು ನಡೆಯಲಿದೆ. ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ.

‘ನ್ಯಾಯಾಲಯಕ್ಕೆ ಹೋಗುತ್ತೇವೆ’

‘ಚುನಾವಣಾ ಅವಧಿ ಮೀರಿದ ನಂತರ ಬಂದ ಇ-ಮೇಲ್ ಮತ ಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಮತಗಳ ಎಣಿಕೆ ಆರಂಭವಾಗಿದೆ. ಇದನ್ನು ತಡೆ ಯಲು ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ’ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.‘ಮತದಾನದ ಫಲಿತಾಂಶವು ತಮ್ಮ ವಿರುದ್ಧವಾಗಿ ಇದ್ದರೆ, ಅದರ ಬಗ್ಗೆ ಟ್ರಂಪ್ ಅವರು ತಕರಾರು ತೆಗೆಯುವ ಸಾಧ್ಯತೆ ಇದೆ’ ಎಂದು ರಾಜಕೀಯ ವಿಶ್ಲೇಷಕರು ಈ ಹಿಂದೆಯೇ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.