ಶನಿವಾರ, ಮೇ 15, 2021
26 °C

12 ವರ್ಷ ಮೇಲ್ಪಟ್ಟವರಿಗೂ ಫೈಜರ್ ಲಸಿಕೆ: ಅಮೆರಿಕದಿಂದ ಶೀಘ್ರ ಅನುಮತಿ ನಿರೀಕ್ಷೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: 12 ವರ್ಷ ಮೇಲ್ಪಟ್ಟ ಎಲ್ಲರಿಗೂ ಫೈಜರ್–ಬಯೊಎನ್‌ಟೆಕ್ ಲಸಿಕೆ ನೀಡಲು ಅಮೆರಿಕವು ಮುಂದಿನ ವಾರ ಅನುಮತಿ ನೀಡುವ ನಿರೀಕ್ಷೆ ಇದೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ.

12–15 ವರ್ಷ ವಯಸ್ಸಿನವರಿಗೂ ಕೋವಿಡ್ ಲಸಿಕೆ ನೀಡಲು ಅನುಮತಿ ನೀಡುವಂತೆ ಫೈಜರ್–ಬಯೊಎನ್‌ಟೆಕ್ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು ಎಂದು ಸರ್ಕಾರಿ ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ‘ಸಿಎನ್‌ಎನ್‌’ ವರದಿ ಮಾಡಿದೆ.

‘ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವುದಕ್ಕೆ ಸಂಬಂಧಿಸಿ ಎಫ್‌ಡಿಎ (ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರ) ತಿದ್ದುಪಡಿ ಮಾಡಬೇಕಾಗುತ್ತದೆ. ಆದರೆ, ಈ ಪ್ರಕ್ರಿಯೆಯು ನೇರವಾಗಿರಬೇಕು’ ಎಂದು ವರದಿ ಉಲ್ಲೇಖಿಸಿದೆ.

ಓದಿ: 

ಎಫ್‌ಡಿಎ ಮುಂದಿನ ವಾರ ಅನುಮತಿ ನೀಡುವ ನಿರೀಕ್ಷೆ ಇದೆ. ಆ ಬಳಿಕ ಲಸಿಕೆಯನ್ನು ಹೇಗೆ ಬಳಸಬೇಕು ಎಂಬುದನ್ನು ಶಿಫಾರಸು ಮಾಡಲು ಅಮೆರಿಕದ ಕಾಯಿಲೆ ನಿಯಂತ್ರಣ ಮತ್ತು ತಡೆ ಸಲಹಾ ಸಮಿತಿ ಸಭೆ ಸೇರಲಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಸದ್ಯ ಫೈಜರ್–ಬಯೊಎನ್‌ಟೆಕ್ ಕೋವಿಡ್‌ ಲಸಿಕೆಯನ್ನು 16 ವರ್ಷ ಮೇಲ್ಪಟ್ಟವರಿಗೆ ನೀಡಲು ಅಮೆರಿಕದಲ್ಲಿ ಅನುಮತಿ ಇದೆ.

12–15 ವರ್ಷ ವಯಸ್ಸಿನವರಿಗೂ ಲಸಿಕೆ ನೀಡಲು ಅನುಮತಿ ಕೋರಿ ಯುರೋಪ್‌ ಒಕ್ಕೂಟದ ಔಷಧ ನಿಯಂತ್ರಕರಿಗೂ ಕಂಪನಿಯು ಈಚೆಗೆ ಮನವಿ ಮಾಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು