ಗುರುವಾರ , ಜೂನ್ 30, 2022
22 °C

ಕೋವಿಡ್‌ ಪ್ರಕರಣ ಏರಿಕೆ, ಮರಣ ಪ್ರಮಾಣ ಇಳಿಕೆ: ಡಬ್ಲ್ಯೂಎಚ್‌ಒ

ಎಪಿ Updated:

ಅಕ್ಷರ ಗಾತ್ರ : | |

Prajavani

ಜಿನಿವಾ: ಜಗತ್ತಿನಾದ್ಯಂತ ಕಳೆದೊಂದು ವಾರದಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆಯಾಗಿದ್ದು, ಮರಣ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಹೇಳಿದೆ.

ವಾರದ ಅವಧಿಯಲ್ಲಿ 1.20 ಕೋಟಿ ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. 33,000 ಮಂದಿ  ಮೃತಪಟ್ಟಿದ್ದಾರೆ. ಶೇ 23ರಷ್ಟು ಮರಣ ಪ್ರಮಾಣ ಇಳಿಕೆಯಾಗಿದೆ. ‌ಶೇ 7ರಷ್ಟು ಕೋವಿಡ್‌ ಪ್ರಕರಣ ಹೆಚ್ಚಾಗಿದೆ ಎಂದು ಅದು ತಿಳಿಸಿದೆ.

ಜನವರಿಯಲ್ಲಿ ಇಳಿಕೆ ಕಂಡಿದ್ದ ಪ್ರಕರಣಗಳು ಕಳೆದ ವಾರದಿಂದ ಮತ್ತೆ ಏರಿಕೆ ಕಂಡಿವೆ. ಯುರೋಪ್‌, ಉತ್ತರ ಅಮೆರಿಕ ಮತ್ತು ಇತರೆ ದೇಶಗಳಲ್ಲಿ ಓಮೈಕ್ರಾನ್‌ ರೂಪಾಂತರಿ ಸೋಂಕು ಹೆಚ್ಚಾಗಿದೆ. ಪಶ್ಚಿಮ ಫೆಸಿಫಿಕ್‌ ಭಾಗದಲ್ಲಿ ಇದರ ಪ್ರಭಾವ ತೀವ್ರವಾಗಿದೆ. ಲಸಿಕೆ ಹಾಕಿಸುವುದೇ ಇದಕ್ಕಿರುವ ಪರಿಹಾರ ಕ್ರಮವಾಗಿದ್ದು, ಬೂಸ್ಟರ್ ಡೋಸ್‌ ಹಾಕಿಸಿಕೊಳ್ಳುವುದು ಅಗತ್ಯ ಎಂದು ಡಬ್ಲ್ಯುಎಚ್‌ಒ ತನ್ನ ವರದಿಯಲ್ಲಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು