ಬಮಕೊ: ಮಾಲಿ ದೇಶದ ಮಹಿಳೆಯೊಬ್ಬರು ಮೊರಾಕೊ ರಾಜ್ಯದ ಕ್ಲಿನಿಕ್ನಲ್ಲಿ 9 ಶಿಶುಗಳಿಗೆ ಜನ್ಮ ನೀಡುವ ಮೂಲಕ ಗಿನ್ನೆಸ್ ಬುಕ್ ಅಫ್ ವರ್ಲ್ಡ್ ರೆಕಾರ್ಡ್ಸ್ಗೆ ಸೇರಿದ್ದಾರೆ.

ಹೆರಿಗೆ ಸಂದರ್ಭ 7 ಶಿಶುಗಳು ಜನಿಸಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಮಹಿಳೆ 9 ಶಿಶುಗಳಿಗೆ ಜನ್ಮ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಒಬ್ಬ ಮಹಿಳೆ ಏಕಕಾಲದಲ್ಲಿ ಒಂಬತ್ತು ಜೀವಂತಶಿಶುಗಳಿಗೆ ಜನ್ಮ ನೀಡಿರುವುದು ಇದೇ ಮೊದಲು ಎನ್ನಲಾಗಿದೆ. ಎಂಟು ಜೀವಂತ ಶಿಶುಗಳಿಗೆ ಜನ್ಮ ನೀಡಿದ್ದು ಇದುವರೆಗಿನ ದಾಖಲೆಯಾಗಿತ್ತು.

2009ರಲ್ಲಿ ಎಂಟು ಅಕಾಲಿಕ ಆರೋಗ್ಯವಂತ ಶಿಶುಗಳಿಗೆ ಜನ್ಮ ನೀಡಿದ್ದ ಅಮೆರಿಕದ ನಾಡಿಯಾ ಸುಲೇಮಾನ್ ಅವರ ಹೆಸರು ಇದುವರೆಗೆ ಗಿನ್ನೆಸ್ ದಾಖಲೆಯಲ್ಲಿತ್ತು.

ಮಾಲಿ ಮಹಿಳೆಗೆ ಜನಿಸಿರುವ ಶಿಶುಗಳಲ್ಲಿ ಐದು ಹೆಣ್ಣು ಮತ್ತು ನಾಲ್ಕು ಗಂಡಾಗಿದ್ದು, ತಾಯಿ ಮತ್ತು ಶಿಶುಗಳು ಆರೋಗ್ಯವಾಗಿದ್ದಾರೆ ಎಂದು ಮಾಲಿಯ ಆರೋಗ್ಯ ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

25 ವರ್ಷದ ಹಲಿಮಾ ಸಿಸ್ಸೆ 9 ಶಿಶುಗಳಿಗೆ ಸಿಸೇರಿಯನ್ ಮೂಲಕ ಜನ್ಮ ನೀಡಿದ್ದಾರೆ ಎಂದು ಮಾಲಿಯ ಉನ್ನತ ಆರೋಗ್ಯ ಅಧಿಕಾರಿ ಪ್ರಕಟಿಸಿದ್ದಾರೆ.

ಕಾಸಾಬ್ಲಾಂಕಾದ ಖಾಸಗಿ ಐನ್ ಬೊರ್ಜಾ ಕ್ಲಿನಿಕ್ನ ಇನ್ಕ್ಯುಬೇಟರ್ ಒಳಗೆ ಇರಿಸಲಾಗಿರುವ ಶಿಶುಗಳು ಕೈ–ಕಾಲುಗಳನ್ನು ಆಡಿಸುತ್ತಿವೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.