ಶುಕ್ರವಾರ, ಜುಲೈ 1, 2022
23 °C

ಜಾಗತಿಕ ಆಹಾರ ಸುರಕ್ಷತಾ ದಿನ: ಉತ್ತಮ ನಾಳೆಗಾಗಿ ವಿಶ್ವ ಆರೋಗ್ಯ ಸಂಸ್ಥೆ ಕಾಳಜಿ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

PV Photo

ವಿಶ್ಚಸಂಸ್ಥೆ: ಜೂನ್ 7ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನಾಗಿ ಅಚರಿಸಲಾಗುತ್ತದೆ. ಈ ಬಾರಿ ಉತ್ತಮ ನಾಳೆಗಾಗಿ ಇಂದು ಸುರಕ್ಷಿತ ಆಹಾರ ಎನ್ನುವ ಧ್ಯೇಯವಾಕ್ಯವನ್ನು ನೀಡಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ, ಜಾಗತಿಕ ಆಹಾರ ಸುರಕ್ಷತಾ ದಿನದ ಕುರಿತು ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತದೆ.

ಸುರಕ್ಷಿತವಲ್ಲದ ಆಹಾರದಿಂದ ಬರಬಹುದಾದ ಆಪಾಯಗಳ ಕುರಿತು ತಿಳಿವಳಿಕೆ, ಅವುಗಳನ್ನು ಪತ್ತೆಹಚ್ಚುವುದು, ಆಹಾರ ಸುರಕ್ಷತೆಗೆ ಕೊಡುಗೆ ನೀಡುವುದು, ಆರೋಗ್ಯ, ಆರ್ಥಿಕ ಸುಸ್ಥಿರತೆ, ಕೃಷಿ, ಮಾರುಕಟ್ಟೆ, ಪ್ರವಾಸೋದ್ಯಮ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ ಗಮನ ಸೆಳೆಯುತ್ತದೆ.

ಆರೋಗ್ಯಕರ ನಾಳೆಗಾಗಿ ಇಂದು ಸುರಕ್ಷಿತ ಆಹಾರ ಸೇವಿಸಿ ಎನ್ನುವ ಅಭಿಯಾನವನ್ನು ಈ ವರ್ಷ ಧ್ಯೇಯವಾಕ್ಯವಾಗಿ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ್ದು, ಉತ್ತಮ ಮತ್ತು ಸುರಕ್ಷಿತ ಆಹಾರವನ್ನು ಸೇವಿಸುವುದರಿಂದ ದೀರ್ಘಾವಧಿಗೆ ಆಗುವ ಲಾಭಗಳು ಮತ್ತು ಆರೋಗ್ಯ ಪ್ರಯೋಜನಗಳ ಕುರಿತು ಜನರಿಗೆ ಅರಿವು ಮೂಡಿಸಲಾಗುತ್ತದೆ.

ಅಸುರಕ್ಷಿತ ಮತ್ತು ಕೃತಕ ಆಹಾರ ಬಳಕೆಯಿಂದ ಬರುವ ರೋಗಗಳ ಕುರಿತು ಕೂಡ ಅಧ್ಯಯನ ನಡೆಸುವ ವಿಶ್ವ ಆರೋಗ್ಯ ಸಂಸ್ಥೆ, ವಿವಿಧ‌ ಸರ್ಕಾರಗಳು, ಸಂಘಸಂಸ್ಥೆಗಳು, ಆಹಾರ ಉತ್ಪಾದಕರು ಮತ್ತು ಗ್ರಾಹಕರೊಡನೆ ಅಧ್ಯಯನ ವರದಿಯನ್ನು ಹಂಚಿಕೊಳ್ಳುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು