ಶುಕ್ರವಾರ, ಜೂನ್ 25, 2021
20 °C

ಪಯೋನಿರ್ ಬಿಳಿ ಚಿಟ್ಟೆಯ ಪ್ರಣಯ ಪ್ರಸಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಚೇರಿಯ ಎದುರು ಇದ್ದ ಪುಟ್ಟ ಪುಟ್ಟ ಎಲೆಗಳ್ಳುಳ್ಳ ಗಿಡದ ಮೇಲೆ ಗಂಡು ಮತ್ತು ಹೆಣ್ಣು ಪಯೋನಿರ್ ಬಿಳಿ ಚಿಟ್ಟೆಗಳು ಸಮಾಗಮದಲ್ಲಿ ತೊಡಗಿದ್ದವು. ಅವುಗಳನ್ನು ತಕ್ಷಣ ನನ್ನ ಕ್ಯಾಮೆರ ಕಣ್ಣಿನಲ್ಲಿ ಸೆರೆಹಿಡಿಯಲಾಂಭಿಸಿದೆ. 

ಬಹಳಷ್ಟು ಸಮಪಯೋನಿರ್ ಬಿಳಿ ಚಿಟ್ಟೆಯ ಪ್ರಣಯ ಪ್ರಸಂಗಯ ರೆಂಬೆಗಳ ಮೇಲೆ, ಎಲೆಗಳ ಮೇಲೆ ಎಲೆಯ ತುದಿಯಲ್ಲಿ ಬೀಳುತ್ತ ಮತ್ತೆ ಸಂಬಾಳಿಸಿಕೊಂಡು ಕೊಂಬೆ ಏರುತ್ತಿದ್ದವು. ನಾನು ಕ್ಯಾಮೆರಾವನ್ನು ಕ್ಲಿಕ್ ಎನಿಸುತ್ತಿದ್ದರೆ, ಅವುಗಳಿಗೆ ತೊಂದರೆಯಾಗುವುದೆಂದು ದೂರ ಸರಿದೆ. ಅಪರೂಪದ ಈ ಚಿಟ್ಟೆಯ ಬಗ್ಗೆ ಇಂದಿನ ಕೀಟ ಪ್ರಪಂಚದಲ್ಲಿ ತಿಳಿಯೋಣ.

ಇತರೆ ಚಿಟ್ಟೆ ಪ್ರಭೇದಗಳಿಗೆ ಹೋಲಿಸಿದರೆ, ಇದರ ಸಂತತಿ ಚಿಕ್ಕದು. ಈ ವರೆಗೆ ಇವುಗಳಲ್ಲಿ ಕೇವಲ 30 ತಳಿಗಳನ್ನು ಮಾತ್ರ ಪತ್ತೆ ಮಾಡಲಾಗಿದೆ. ಇದನ್ನು ಇಂಗ್ಲಿಷ್‌ನಲ್ಲಿ ಪಯೋನಿರ್ ವೈಟ್ ಬಟರ್ ಫ್ಲೈ (Pioneer white butterfly) ಎಂದು ಕರೆಯುತ್ತಾರೆ. ಬೆಲೆನಾಯ್ಸ್ ಆರೋಟ (Belenois aurota) ಎಂಬುದು ಇದರ ವೈಜ್ಞಾನಿಕ ಹೆಸರು. ಇದು ಪೈರಿಡೆ(Pieridae) ಕುಟುಂಬಕ್ಕೆ ಸೇರಿದ ಚಿಟ್ಟೆಯಾಗಿದೆ.

ಹೇಗಿರುತ್ತದೆ?

ಇವು ಕುಳಿತಿದ್ದಾಗ, ರೆಕ್ಕೆಯ ಮೇಲ್ಭಾಗದ ಚಿತ್ರಗಳನ್ನು ನೋಡುವುದು ಕಷ್ಟ. ಅಲ್ಲದೇ ಮಡಚಿಕೊಂಡಾಗ ರೆಕ್ಕೆಯ ತಳದ ಮುಂಭಾಗದ ಜೋಡಿ ರೆಕ್ಕೆಗಳು ಕಪ್ಪು ಮತ್ತು ಬಿಳಿ ಬಣ್ಣದಲ್ಲಿದ್ದು, ತುದಿಯಲ್ಲಿ ತಿಳಿಹಳದಿ ಬಣ್ಣವಿರುತ್ತದೆ. ಹಿಂಭಾಗದ ರೆಕ್ಕೆಗಳು ಕಿತ್ತಳೆ ಅರಿಶಿಣ ವರ್ಣದಲ್ಲಿದ್ದು, ಆಕರ್ಷಕವೆನಿಸುತ್ತವೆ. ರೆಕ್ಕೆಗಳ ನಡುವೆ ಇರುವ ಸುಂದರ ಗೆರೆಗಳ ತೋರಣವು ಗಮನ ಸೆಳೆಯುತ್ತದೆ.

ಎಲ್ಲಿವೆ?

ಇವು ಭಾರತದಲ್ಲಷ್ಟೇ ಅಲ್ಲದೆ, ದಕ್ಷಿಣ ಏಷ್ಯಾದ ಹಲವು ಭೂಪ್ರದೇಶಗಳು, ಆಫ್ರಿಕಾ ಖಂಡದ ಕೆಲವು ಪ್ರದೇಶಗಳಲ್ಲೂ ಕಾಣಸಿಗುತ್ತವೆ. ಕಾಡಿನ ಪ್ರದೇಶಗಳಿಗಷ್ಟೇ ಅಲ್ಲದೇ, ತೀವ್ರ ಬಿಸಿಲು ಇರುವಂತಹ ಮರುಭೂಮಿ ಪ್ರದೇಶಗಳಿಗೂ ಹೊಂದಿಕೊಳ್ಳುವ ಸಾಮರ್ಥ್ಯ ಇವಕ್ಕೆ ಇದೆ.

ಜೀವನಕ್ರಮ ಮತ್ತು ವರ್ತನೆ

ಇದು ಗುಂಪಿನಲ್ಲಿ ವಾಸಿಸಲು ಇಷ್ಟಪಡುವ ಚಿಟ್ಟೆ. ಬೇಸಿಗೆ ಮತ್ತು ಚಳಿಗಾಲದಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಾಮೂಹಿಕವಾಗಿ ವಲಸೆ ಹೊಗುತ್ತವೆ. ಸಮಾಗಮವಾದ ಕೆಲ ಸಮಯದಲ್ಲೇ 15ರಿಂದ 20 ಮೊಟ್ಟೆಗಳನ್ನು ಗುಂಪಾಗಿ ಇಡುತ್ತದೆ. ಮೊಟ್ಟೆಯೊಡೆದು ಹೊರಬಂದ ಲಾರ್ವಾಗಳು, ಕೋಶಾವಸ್ಥೆ ಮುಗಿಸಿ, ಚಿಟ್ಟೆಯಾಗಿ ಹೊರಹೊಮ್ಮುವುದಕ್ಕೆ ಸುಮಾರು 30 ದಿನ ಬೇಕಾಗುತ್ತದೆ. 

ಈ ಚಿಟ್ಟೆಯು ಸಾಮಾನ್ಯವಾಗಿ, ಮುಳ್ಳುಗಳ್ಳುಳ್ಳ ಚಿಕ್ಕ ಪುಟ್ಟ ಪೊದೆಗಳಲ್ಲಿ ಕೂರುತ್ತವೆ. ಬಿಸಿಲಿನ ತೀವ್ರತೆ ಹೆಚ್ಚಾದಾಗ ಮಾತ್ರ ಎಲೆಗಳ ಮರೆಯಲ್ಲಿ ರಕ್ಷಣೆ ಪಡೆಯುತ್ತವೆ. ಇವು ಕುಳಿತಿದ್ದಾಗ, ತಮ್ಮ ಎರಡು ಜೊತೆ ರೆಕ್ಕೆಗಳನ್ನು ಬೆನ್ನಿನ ಮೇಲೆ ಗೋಡೆಗಳಂತೆ ಎತ್ತಿಕೊಂಡಿರುತ್ತವೆ. ಬೇಕಾದಾಗ ಮಾತ್ರ ರೆಕ್ಕೆಗಳನ್ನು ಒಂದೆರಡು ಸೆಕೆಂಡುಗಳ ಕಾಲ ಬಿಸಿಲಿಗೆ ಬಿಚ್ಚಿ ಪುನಃ ಮುಚ್ಚುತ್ತವೆ.

 ಈ ಚಿಟ್ಟೆಗಳು ಬೆಳೆಗಳ ಮೇಲೆ ಹಾನಿಯನ್ನುಂಟು ಮಾಡುವುದಿಲ್ಲ. ಇದೇ ಕುಟುಂಬದ ಮತ್ತೋರ್ವ ಸದಸ್ಯ ಕ್ಯಾಬೆಜ್ ಬಟರ್ ಫ್ಲೈ (Cabbage butterfly) ಲಾರ್ವಹಂತದ ಮರಿಗಳು ಮಾತ್ರ ಎಲೆಕೋಸಿನ ಮೇಲೆ ಪೀಡೆಗಳಾಗಿ ಪರಿಣಮಿಸಿದರೇ, ಇತರೆ ಕೀಟಗಳು, ವಿವಿಧ ಬೆಳೆಗಳನ್ನು ಅವಲಂಬಿಸಿ ಬದುಕುತ್ತಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು