ಮತ್ತೆ ಬೀದಿ ನಾಯಿ ಹಾವಳಿ

ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮತ್ತೆ ಮುಂದುವರಿದಿದೆ. ಪದ್ಮನಾಭನಗರದ ಕನಕ ಬಡಾವಣೆ ಬಳಿ ನಾಯಿಗಳು ಮಕ್ಕಳ ಮೇಲೆ ಎರಗಿವೆ.

ಸೋಮವಾರ ಸಂಜೆ ಮನೆಯ ಮುಂದೆ ಆಟವಾಡುತ್ತಿದ್ದ ಮಹಾದೇವಿ, ಕೋಟೇಶ್ವರಿ ಮತ್ತು ತನ್ಮಯ ಗೌಡ ಎಂಬ ಮೂವರು ಮಕ್ಕಳ ಮೇಲೆ ಮೂರು ನಾಲ್ಕು ನಾಯಿಗಳು ಏಕಾಏಕಿ ಎರಗಿ ಕಚ್ಚಿ ಎಳೆದಾಡಿವೆ. ಸ್ಥಳೀಯರು ಧಾವಿಸಿ ಮಕ್ಕಳನ್ನು ರಕ್ಷಿಸಿದ್ದಾರೆ. ಈ ಭಯಾನಕ ದೃಶ್ಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.  

 ‘ನಗರದಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದೆ ನಿಜ. ಪಾಲಿಕೆ ಅವುಗಳ ಹಾವಳಿ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದೆ’ ಎಂದು ಮೇಯರ್‌ ಆರ್‌.ಸಂಪತ್‌ರಾಜ್‌ ತಿಳಿಸಿದರು.

ಕಳೆದ ವಾರ ವಿಭೂತಿಪುರದಲ್ಲಿ ಪ್ರವೀಣ್‌ ಎಂಬ ಬಾಲಕ ನಾಯಿ ದಾಳಿಗೊಳಗಾಗಿ ಮೃತಪಟ್ಟಿದ್ದ. 

ಪ್ರಮುಖ ಸುದ್ದಿಗಳು