ಹನ್ನೆರಡನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಬಗ್ಗೆ ಅನೇಕ ವಚನಗಳಲ್ಲಿ ಉಲ್ಲೇಖವಿದೆ. ಅನೇಕ ಜನ ಜನಪದರು ಹಾಡಿ ಹೊಗಳಿದ್ದಾರೆ. ಸಾಹಿತಿಗಳು ಸಾಹಿತ್ಯ ರಚಿಸಿದ್ದಾರೆ. ಅಲ್ಲೊಬ್ಬರು, ಇಲ್ಲೊಬ್ಬರು ಬಿಡಿ ಬಿಡಿಯಾದ ಚಿತ್ರಗಳನ್ನೂ ಬಿಡಿಸಿದ್ದಾರೆ. ಆದರೆ, ನಿವೃತ್ತ ಚಿತ್ರಕಲಾ ಶಿಕ್ಷಕ ಸಿ.ಬಿ. ಸೋಮಶೆಟ್ಟಿ ಅವರು ತಮ್ಮ ಕುಂಚದ ಮೂಲಕ ಅವರ ಸಮಗ್ರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ.

ಬಸವಣ್ಣನವರು ಹುಟ್ಟಿನಿಂದ ಐಕ್ಯರಾಗುವ ಕಾಲಾವಧಿಯ ಪ್ರಮುಖ ಘಟನಾವಳಿಗಳನ್ನು 124 ಜಲವರ್ಣದ ಕಲಾಕೃತಿಗಳಲ್ಲಿ ಚಿತ್ರಿಸಿದ್ದಾರೆ. ತೈಲವರ್ಣಕ್ಕೆ ಹೋಲಿಸಿದರೆ ಜಲವರ್ಣ ಸೂಕ್ಷ್ಮವಾದ ಕೆಲಸ. ಸವಾಲಿನ ಕೆಲಸವಾಗಿದ್ದರೂ ಅದನ್ನೇ ಆಯ್ಕೆ ಮಾಡಿಕೊಂಡು ಕಲಾಕೃತಿಗಳಿಗೆ ಜೀವಂತಿಕೆ ಕೊಟ್ಟಿರುವುದು ವಿಶೇಷ.

ಬಸವಣ್ಣನವರ ಜನನ, ಶಿಕ್ಷಣ, ಇಷ್ಟಲಿಂಗ ಆವಿಷ್ಕಾರ, ಕರಣಿಕ ವೃತ್ತಿ, ವಿವಾಹ, ದಲಿತರ ಓಣಿಗೆ ಭೇಟಿ, ಕಳ್ಳ ಮನೆಗೆ ಬಂದ ಸನ್ನಿವೇಶ, ಅನುಭವ ಮಂಟಪದ ಚರ್ಚಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುವುದು, ಅನುಭವ ಮಂಟಪಕ್ಕೆ ಅಕ್ಕಮಹಾದೇವಿಯ ಪ್ರವೇಶ, ಹರಳಯ್ಯನವರ ಮನೆಗೆ ಭೇಟಿ, ತೊಡೆಯ ಚರ್ಮದಿಂದ ತಯಾರಿಸಿದ ಚಮ್ಮಾವುಗೆ ತಲೆಯ ಮೇಲೆ ಹೊತ್ತುಕೊಂಡದ್ದು, ಅಂತರ್ಜಾತಿ ವಿವಾಹ, ಪ್ರಧಾನಿ ಪಟ್ಟ ತ್ಯಾಗ ಮಾಡಿ ಹೊರಡುವುದು, ಗಡಿಪಾರು ಶಿಕ್ಷೆ, ಶರಣರಿಗೆ ಎಳೆಹೂಟೆ ಶಿಕ್ಷೆ, ವಚನಗಳ ಕಟ್ಟುಗಳನ್ನು ಹೊತ್ತುಕೊಂಡು ಹೋಗುವುದು, ಅಂತಿಮವಾಗಿ ಕೂಡಲಸಂಗಮದಲ್ಲಿ ಬಸವಣ್ಣನವರು ಐಕ್ಯರಾಗುವ ಸನ್ನಿವೇಶಗಳು ಕಲಾಕೃತಿಗಳಲ್ಲಿ ಜೀವತಳೆದಿವೆ.

ಎಲ್ಲ ಕಲಾಕೃತಿಗಳು 2.5X2 ಅಡಿ ಇದ್ದು, 2006ರಲ್ಲಿ ಚಿತ್ರಕಲಾ ಶಿಕ್ಷಕ ಹುದ್ದೆಯಿಂದ ನಿವೃತ್ತರಾದ ಸೋಮಶೆಟ್ಟಿ ಅವರು ಈ ಕೆಲಸವನ್ನು ತಪಸ್ಸಿನ ರೀತಿಯಲ್ಲಿ ಮಾಡಿರುವುದು ವಿಶೇಷ. 2007ರಲ್ಲಿ ಕೈಗೆತ್ತಿಕೊಂಡ ಯೋಜನೆ ಪೂರ್ಣಗೊಂಡಿದ್ದು 2022ರಲ್ಲಿ. ಎಲ್ಲ ಕಲಾಕೃತಿಗಳ ರಚನೆಗೆ ಸೋಮಶೆಟ್ಟಿ ಅವರು ಒಟ್ಟು 15 ವರ್ಷಗಳನ್ನು ಸವೆಸಿದ್ದಾರೆ. ಕೆಲಸ ಆರಂಭಿಸುವುದಕ್ಕೂ ಮುನ್ನ ಸತತ ಎರಡು ವರ್ಷ ಬಸವಣ್ಣನವರಿಗೆ ಸಂಬಂಧಿಸಿದಂತೆ ವಚನ ಸಾಹಿತ್ಯ, ಜನಪದ ಸಾಹಿತ್ಯ ಹಾಗೂ ಹಲವು ಪುಸ್ತಕಗಳನ್ನು ಓದಿ ಮನದಟ್ಟು ಮಾಡಿಕೊಂಡಿದ್ದಾರೆ. ಸತ್ಯಕ್ಕೆ ಅಪಚಾರವಾಗದಿರಲಿ ಎಂಬ ಉದ್ದೇಶದಿಂದ ಆಳವಾದ ಅಧ್ಯಯನ ಮಾಡಿ, ಹಲವು ಸಾಹಿತಿಗಳು, ವಿಷಯ ತಜ್ಞರೊಂದಿಗೆ ಚರ್ಚಿಸಿ ಕಲಾಕೃತಿಗಳಿಗೆ ಜೀವ ತುಂಬಿದ್ದಾರೆ.

ಈ ಎಲ್ಲ ಕಲಾಕೃತಿಗಳ ಪ್ರದರ್ಶನಕ್ಕೆ ಬೀದರ್ನ ಬಸವ ನಗರದಲ್ಲಿರುವ ಇವರ ಮನೆಯ ಒಂದು ಭಾಗದಲ್ಲಿ ಅತ್ಯುತ್ತಮವಾದ ಗ್ಯಾಲರಿ ನಿರ್ಮಿಸಿದ್ದಾರೆ. ಇವರ ಮನೆಗೆ ‘ಕಲಾ ಕುಂಜ’ ಎಂದು ಹೆಸರಿಟ್ಟರೆ, ಗ್ಯಾಲರಿಗೆ ‘ಸಿ.ಬಿ. ಸೋಮಶೆಟ್ಟಿ ಆರ್ಟ್ ಗ್ಯಾಲರಿ’ ಎಂದು ನಾಮಕರಣ ಮಾಡಿದ್ದಾರೆ. ಸೂಕ್ತ ಬೆಳಕಿನ ವ್ಯವಸ್ಥೆ ಮಾಡಿ, ಫ್ರೇಮ್ ಹಾಕಿದ ಕಲಾಕೃತಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಇರಿಸಿದ್ದಾರೆ. ಪ್ರತಿಯೊಂದು ಕಲಾಕೃತಿಯ ಅಡಿಯಲ್ಲಿ ಸಣ್ಣ ಟಿಪ್ಪಣಿ ಇದೆ.

ಈ 124 ಕಲಾಕೃತಿಗಳನ್ನು ಒಳಗೊಂಡಿರುವ ‘ಶ್ರೀಗುರು ಬಸವಚಿತ್ರ ಚರಿತ’ ಎಂಬ ಚಿತ್ರ ಸಂಪುಟವನ್ನು ಹೊರತಂದಿದ್ದಾರೆ. 330 ಪುಟಗಳ ಈ ಸಂಪುಟದ ಪ್ರತಿಯೊಂದು ಚಿತ್ರದ ಬದಿಯಲ್ಲಿ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಅದರ ಬಗ್ಗೆ ವಿವರಣೆ ಇದೆ. ಬಸವ ಕಲ್ಯಾಣದ ಗಾಯತ್ರಿ ತಾಯಿ ಮತ್ತು ಗಂಗಾಧರ ದೇವರು ಆ ಕೆಲಸ ಮಾಡಿದ್ದಾರೆ. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಮಲ್ಲಿಕಾರ್ಜುನ ಪಾಟೀಲ ಅವರು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿದ್ದಾರೆ. ಇನ್ನಷ್ಟೇ ಈ ಪುಸ್ತಕ ಬಿಡುಗಡೆಗೊಳ್ಳಬೇಕಿದೆ. ಆದರೆ, ಮೊದಲ ಹಂತದಲ್ಲಿ ಪ್ರಕಟಿಸಿರುವ ಎರಡು ಸಾವಿರ ಪುಸ್ತಕಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಾರಾಟವಾಗಿವೆ.

770 ಅಮರಗಣಂಗಳ ರೇಖಾಚಿತ್ರ

ಹನ್ನೆರಡನೇ ಶತಮಾನದ 770 ಅಮರಗಣಂಗಳ ರೇಖಾಚಿತ್ರಗಳನ್ನು ಒಳಗೊಂಡಿರುವ ‘ಅಮರಗಣಂಗಳ ಕಾಯಕ ಚಿತ್ರ ದರ್ಶನ’ ಹೆಸರಿನ ಪುಸ್ತಕ ಕೂಡ ಹೊರತರುವ ಯೋಜನೆ ಹಾಕಿಕೊಂಡಿದ್ದಾರೆ. ಈಗಾಗಲೇ 400 ಶರಣರ ರೇಖಾಚಿತ್ರವಿರುವ ಪುಸ್ತಕ ಪ್ರಕಟಿಸಿದ್ದು, ಇನ್ನು 370 ಶರಣರ ಪುಸ್ತಕಕ್ಕೆ ಅಂತಿಮ ರೂಪ ಕೊಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

‘ಎಲ್ಲರೂ 770 ಅಮರಗಣಂಗಳು ಎಂದು ಭಾಷಣದಲ್ಲಿ ಹೇಳುತ್ತಿರುತ್ತಾರೆ. ಆದರೆ, ಅವರ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಎಲ್ಲರಿಗೂ ಅವರ ಬಗ್ಗೆ ಗೊತ್ತಾಗಬೇಕು ಎನ್ನುವ ಉದ್ದೇಶದಿಂದ ಈ ಕೆಲಸ ಮಾಡಿದ್ದೇನೆ. ಬಾಲ್ಯದಿಂದಲೂ ನಮ್ಮ ಕುಟುಂಬ ಹಾಗೂ ನನ್ನ ಮೇಲೆ ಬಸವಾದಿ ಶರಣರ ಪ್ರಭಾವ ದಟ್ಟವಾಗಿದೆ. ಜೀವ ಇರುವುದರೊಳಗೆ ಏನಾದರೂ ಮಾಡಬೇಕೆಂಬ ತುಡಿತ ಇತ್ತು.

ಅದರ ಫಲವೇ 124 ಜಲವರ್ಣದ ಕಲಾಕೃತಿಗಳು. ಈ ನನ್ನ ತಪಸ್ಸಿನ ಕೆಲಸಕ್ಕೆ ಮನೆಯವರೆಲ್ಲರೂ ಕೊಟ್ಟ ಸಹಕಾರ ಪದಗಳಲ್ಲಿ ಹೇಳಲು ಆಗುವುದಿಲ್ಲ’ ಎನ್ನುತ್ತಾರೆ ಸೋಮಶೆಟ್ಟಿ. ಅಂದಹಾಗೆ, ಈ ಎಲ್ಲ ಕಾರ್ಯಕ್ಕೆ ಸೋಮಶೆಟ್ಟಿ ಅವರು ಅವರ ದುಡಿಮೆಯಿಂದ ₹35 ಲಕ್ಷ ವ್ಯಯಿಸಿದ್ದಾರೆ. ಶೀಘ್ರದಲ್ಲೇ ಗ್ಯಾಲರಿಯೊಂದಿಗೆ ಪುಸ್ತಕ ಬಿಡುಗಡೆಗೆ ತಯಾರಿ ನಡೆಸಿದ್ದು, ಅದು ಕೂಡ ಬಸವತತ್ವದ ಪ್ರಕಾರವೇ ನೆರವೇರಿಸಲು ಯೋಜನೆ ರೂಪಿಸುತ್ತಿದ್ದಾರೆ.

ಸೋಮಶೆಟ್ಟಿ ಅವರು ಬೀದರ್ ಜಿಲ್ಲೆ ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ್ನಲ್ಲಿ (ಬಿ) ಹುಟ್ಟಿ ಬೆಳೆದವರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಅಂದಿನ ಕರ್ನಾಟಕದ ಭಾಗವಾಗಿದ್ದ ಇಂದಿನ ತೆಲಂಗಾಣದ ಜಹೀರಾಬಾದ್ನಲ್ಲಿ ಪೂರ್ಣಗೊಳಿಸಿದರು. ಬಳಿಕ ಕರ್ನಾಟಕಕ್ಕೆ ಬಂದು ಚಿತ್ರಕಲೆ ಕೋರ್ಸ್ ಆಯ್ಕೆ ಮಾಡಿಕೊಂಡರು. ರಾಜ್ಯಕ್ಕೆ ಎರಡನೇ ರ್ಯಾಂಕ್ ಗಳಿಸುವುದರ ಮೂಲಕ ಗಮನ ಸೆಳೆದರು. ಆನಂತರ ಬೀದರ್ನ ಕರ್ನಾಟಕ ಕಾಲೇಜಿನಲ್ಲಿ ಮೊದಲ ಯತ್ನದಲ್ಲೇ ಚಿತ್ರಕಲಾ ಶಿಕ್ಷಕರಾಗಿ ಸೇರಿ, ಅಲ್ಲಿಯೇ 32 ವರ್ಷ ಸೇವೆ ಸಲ್ಲಿಸಿದರು. ಶಿಕ್ಷಕ ವೃತ್ತಿಯೊಂದಿಗೆ ಬಸವಾದಿ ಶರಣರ ಅಸಂಖ್ಯ ಕಲಾಕೃತಿಗಳನ್ನು ರಚಿಸಿಕೊಟ್ಟಿದ್ದು, ರಾಜ್ಯದ ಹಲವೆಡೆಗಳಲ್ಲಿ ಇರಿಸಲಾಗಿದೆ.

ಬಸವ ಕಲ್ಯಾಣದ ಅನುಭವ ಮಂಟಪದಲ್ಲಿರುವ ಮುಖ್ಯಚಿತ್ರ ಬಿಡಿಸಿದ್ದು ಇವರೇ. ಬೀದರ್ ವಿಮಾನ ನಿಲ್ದಾಣ, ಬೆಂಗಳೂರಿನ ಬಸವ ಸಮಿತಿ ಸೇರಿದಂತೆ ಹಲವೆಡೆ ಇವರು ಬಿಡಿಸಿದ ಕಲಾಕೃತಿಗಳನ್ನು ನೋಡಬಹುದು. ಇಷ್ಟೇ ಅಲ್ಲ, ದೇಶದ ವಿವಿಧೆಡೆಗಳಲ್ಲಿ ಕಲಾ ಶಿಬಿರ, ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿ ಸೇರಿದಂತೆ ವಿವಿಧ ಗೌರವ ಸನ್ಮಾನಗಳಿಗೆ ಪಾತ್ರರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.