ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುವೆಂಪು ಪದ ಸೃಷ್ಟಿ | ತರುಪಿಶಾಚಿ

Published 19 ಮೇ 2024, 0:30 IST
Last Updated 19 ಮೇ 2024, 0:30 IST
ಅಕ್ಷರ ಗಾತ್ರ

ತರುಪಿಶಾಚಿ

‘ಪ್ರೇತವೃಕ್ಷ’ ಕವನದಲ್ಲಿ ಆ ಮರವನ್ನು ‘ವಿರಕ್ತ ತರುಪಿಶಾಚಿ’ ಎಂದು ಕರೆದಿದ್ದಾರೆ. ಆ ‘ಪ್ರೇತವೃಕ್ಷ’ ನಭಕ್ಕೆ ಮುಖಮಾಡಿ ‘ಪ್ರೀತಿಯ ರಸಸುಖ’ವನ್ನು ಅನಂತಶಕ್ತನಲ್ಲಿ ಪ್ರಾರ್ಥಿಸುತ್ತಿರುವಂತೆ ಬಣ್ಣಿಸಿದ್ದಾರೆ.

‘ಪ್ರೇತಹಸ್ತಗಳನು ಚಾಚಿ

ನಿನ್ನ ನಖ ಪ್ರಾರ್ಥನೆ,

ಓ ವಿರಕ್ತ ತರುಪಿಶಾಚಿ,

ಪರಚಿ ನಭೋಮುಖವನೆ

ಪರವನೇಕೆ ಕಾಡುತಿಹುದು?

ವರವನೇನು ಬೇಡುತಿಹುದು?

ಪ್ರೀತಿಯ ರಸಸುಖವನೆ?

ಹೂವತಿಥಿ

ಕೊಟಡಿಯ ಮುಂದೆಯೆ ಕೇಳಿತು ಝೇಂಕೃತಿ;

ಕಿವಿಗಿಂಪೆರೆದೆದೆ ತೆರೆವಾ ಜೇನ್ ಕೃತಿ!

ಜೇನಿಂಟುತ್ತಿವೆ ಹೂವತಿಥಿ? (ಕದರಡಕೆ)

ಕುವೆಂಪು ಅವರು ಮೈಸೂರಿನ ‘ಉದಯರವಿ’ ಮನೆಯ ಹೂತೋಟದಲ್ಲಿ ಕುಳಿತು ದುಂಬಿಗಳ ಝೇಂಕಾರವನ್ನು ಕೇಳುತ್ತ, ಅವು ಸೂರ್ಯಕಾಂತಿ ಹೂವಿನ ಮಕರಂದವನ್ನು ಹೀರುತ್ತಿರುವುದನ್ನು ಕಂಡು ಹಿಗ್ಗಿದ್ದಾರೆ. ಆ ಜೇನ್ದುಂಬಿಯನ್ನು ‘ಹೂವತಿಥಿ’ ಎಂಬ ಅನ್ವರ್ಥನಾಮಪದ ಸೃಷ್ಟಿಸಿ ಬಣ್ಣಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT