ಹೊಸ ವರ್ಷ ಬಂದಾಗ ಬದುಕು ಹಸನಾಗಿಸಿಕೊಳ್ಳಲು ಹೊಸ ಸೂತ್ರಗಳನ್ನು ಹಾಕಿಕೊಳ್ಳುವುದು ಹಲವರ ವಾಡಿಕೆ. ಆದರೆ ಸಾಧನೆಯ ಹಾದಿ ಎಂದಿಗೂ ಕಠಿಣವೇ ಆದರೂ, ಫಲ ಮಾತ್ರ ಸಿಹಿಯೇ ಆಗಿರುತ್ತದೆ. ಸಾಧನೆಯ ಹಾದಿಯಲ್ಲಿ ಸಾಗಲು ನಿಶ್ಚಿಯಸಿದವರಿಗೆ ಗೆಲುವಿನ ಸೋಪಾನ ತಮ್ಮದಾಗಿಸಿಕೊಳ್ಳಲು ಇಲ್ಲಿವೆ ಕೆಲವು ಸರಳ ಸೂತ್ರಗಳು.

ನಮ್ಮ ಸಾಮರ್ಥ್ಯವೇ ನಮ್ಮ ತಾಕತ್ತು

ಈ ವರ್ಷ ನಮ್ಮ ತಾಕತ್ತಿನ ಬಗ್ಗೆ ಯೋಚಿಸೋಣ. ಎಲ್ಲರಲ್ಲೂ ಒಂದಲ್ಲ ಒಂದು ಬಲಹೀನತೆ ಇದ್ದೇ ಇರುತ್ತದೆ. ಆ ಬಗೆಗಿನ ಕೀಳರಿಮೆಯ ಬದಲು, ಅದನ್ನು ಮೀರುವುದು ಹೇಗೆಂಬುದನ್ನು ಯೋಚಿಸುವುದು ಜಾಣತನ. ಆದರೆ ಅದಕ್ಕಿಂತ ಹೆಚ್ಚಾಗಿ ನಮ್ಮ ಸ್ಟ್ರೆಂಥ್ ಯಾವುದೆಂದು ಗುರುತಿಸಿ ಅದರತ್ತ ಗಮನ ಹರಿಸೋಣ. ಅದನ್ನು ಎಲ್ಲಿ, ಹೇಗೆ ಉಪಯೋಗಿಸಿಕೊಂಡು ಬೆಳೆಯಬೇಕೆಂಬುದಕ್ಕೆ ಇಂದೇ ಪ್ರಯತ್ನ ಆರಂಭಿಸೋಣ.

ಒಳ್ಳೆಯ ಕೆಲಸಕ್ಕೆ ಅದುವೇ ಶುಭಗಳಿಗೆ

ಇವತ್ತು ದಿನ ಚೆನ್ನಾಗಿಲ್ಲ, ಈಗ ಮುಹೂರ್ತ ಸರಿ ಇಲ್ಲ ಇಂಥವೆಲ್ಲ ನಾವು ಅಂದುಕೊಂಡ ಕೆಲಸವನ್ನು ಮುಂದೂಡಲು ಹೂಡುವ ನೆಪಗಳಷ್ಟೇ. ಅಥವಾ ಅಸಮರ್ಥರ ಲಕ್ಷಣ. ಯಾವುದೇ ಒಳ್ಳೆಯ ಯೋಚನೆ ಹೊಳೆದರೆ, ಒಳ್ಳೆ ಕೆಲಸ ಮಾಡಬೇಕೆನಿಸಿದರೆ ಅದೇ ‘ಸೂಕ್ತ ಸಮಯ, ಸುಮುಹೂರ್ತ’. ಈ ವರ್ಷ ನಾವು ಸಮಯಕ್ಕೆ ಕಾಯದೇ, ಸಮಯವೇ ನಮ್ಮನ್ನು ಕಾಯುವಂತೆ ಮಾಡೋಣ. ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸಲು ಎಲ್ಲ ಗ್ರಹಗತಿಗಳೂ ಈ ವರ್ಷ ಕೂಡಿ ಬಂದಿದೆ.
.New Year 2026: ಒಳಿತಾಗುವ ಭರವಸೆಯಲ್ಲಿ ಹೊಸ ವರ್ಷಕ್ಕೆ ಸ್ವಾಗತ .ವರ್ಷ ಭವಿಷ್ಯ 2026: ಈ ವರ್ಷ ಯಾವ ರಾಶಿಗೆ ಏನೇನು ಫಲ? ಇಲ್ಲಿದೆ ಮುನ್ನೋಟ.
ಸುಂದರ ಕಾಯ ನಮ್ಮದಾಗಲಿ ಮಾರಾಯ

ಸುಂದರವಾಗಿ ಕಾಣುವುದು ಪಾಪವೂ ಅಲ್ಲ, ತಪ್ಪೂ ಇದರಲ್ಲಿಲ್ಲ. ಈ ವರ್ಷ ಉತ್ತಮ ಅಂಗಸೌಷ್ಟವ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಆದ್ಯತೆ ನೀಡೋಣ. ಜಿಮ್, ಯೋಗ, ವಾಕಿಂಗ್ಗಳಂಥವನ್ನು ನಾಳೆಗೆ ಮುಂದೂಡದೇ, ಇಂದೇ ಆರಂಭಿಸೋಣ. ಅದನ್ನು ಒಂದೇ ವಾರಕ್ಕೆ ಕೊನೆಗೊಳಿಸದೇ, ದಿನಚರಿಯ ಭಾಗ ಮಾಡಿಕೊಳ್ಳೋಣ. ಯಾರ್ಯಾರಿಗೂ, ಏನೇನಕ್ಕೋ ಸಮಯ ಕೊಡುತ್ತೇವೆ. ಆದರೆ ಈ ವರ್ಷ ಪ್ರತಿದಿನದ ಒಂದು ಗಂಟೆಯನ್ನು ನಾವು, ನಮ್ಮ ದೇಹ, ಮನಸಿಗಾಗಿ ಮೀಸಲಿಡೋಣ.

ತಿಂದುಂಡು ಸುಖವಾಗಿರೋಣ

ನಾವು ಇಷ್ಟೆಲ್ಲ ಗುದ್ದಾಡುವುದೇ ಹೊಟ್ಟೆ-ಬಟ್ಟೆಗಾಗಿ ತಾನೇ? ಅಂದ ಮೇಲೆ, ಅದರಲ್ಲಿ ಜಿಪುಣತನ ಏಕೆ? ಹಾಗಂತ ಸಿಕ್ಕಸಿಕ್ಕದ್ದನ್ನೆಲ್ಲ ತಿಂದು ಹೊಟ್ಟೆಯನ್ನು ಗುಡಾಣ ಮಾಡಿಕೊಳ್ಳಬೇಕೆಂದೇನಲ್ಲ. ಏನೇ ತಿನ್ನಲಿ, ಅದರ ಕ್ಯಾಲರಿ, ಪ್ರೊಟೀನ್, ಪೌಷ್ಟಿಕಾಂಶ ಅಂಶಗಳು ಇತ್ಯಾದಿಗಳಿಗೆ ಮಹತ್ವ ಕೊಡೋಣ. ಗೊತ್ತಿಲ್ಲದಿದ್ದರೆ ಅವನ್ನು ತಿಳಿದುಕೊಳ್ಳೋಣ. ಹಾಗೆಯೇ ದುಬಾರಿ ಬಟ್ಟೆಗಳನ್ನಲ್ಲದಿದ್ದರೂ, ನಮಗೊಪ್ಪುವ, ಕಂಫರ್ಟ್ ಎನಿಸುವ, ಸ್ವಚ್ಛ ಬಟ್ಟೆಗಳನ್ನು ತೊಟ್ಟು ಸುಂದರವಾಗಿ ಕಾಣೋಣ.
.New Year 2026: ಹೊಸ ವರುಷ ತರಲಿ ಹರುಷ....ಮಾಸ ಭವಿಷ್ಯ ಜನವರಿ 2026: ಉನ್ನತ ಪದವಿದರರಿಗೆ ಉತ್ತಮ ನೌಕರಿ ಯೋಗವಿದೆ.
ಇತರರಿಗಾಗಲ್ಲ, ನಮಗಾಗಿ ಒಳ್ಳೆಯವರಾಗೋಣ

ಎಲ್ಲರೂ ಒಳ್ಳೆಯವರೇ, ಆದರೆ, ವ್ಯಕ್ತಿ, ಘಟನೆ, ಸನ್ನಿವೇಶಗಳು ನಮ್ಮನ್ನು ಕೆಟ್ಟವರನ್ನಾಗಿಸಿಬಿಡುತ್ತವೆ. ಹೀಗಾಗಿ ಜೀವನದಲ್ಲಿನ ಬೆಳವಣಿಗಳಿಗಿಂತ ಅದನ್ನು ನಾವು ಹೇಗೆ ಸ್ವೀಕರಿಸುತ್ತೇವೆಂಬುದರ ಮೇಲೆ ನಮ್ಮ ಬೆಳವಣಿಗೆ ನಿಂತಿರುತ್ತದೆ. ಯಾವುದಕ್ಕೂ ತತ್ಕ್ಷಣದಲ್ಲಿ, ತೀವ್ರವಾಗಿ ಪ್ರತಿಕ್ರಿಯೆ ನೀಡದಿರಲು ನಿರ್ಧರಿಸಿ, ಅದಕ್ಕೆ ಬದ್ಧರಾಗಿರೋಣ. ನಮ್ಮ ಯಾವುದೇ ಮಾತು, ನಿರ್ಧಾರ, ನಡೆಗಳು ಮತ್ತೊಂದು ಸಮಸ್ಯೆ ಸೃಷ್ಟಿಸದಂತೆ ನೋಡಿಕೊಳ್ಳೋಣ.

ಅವಸರವೇಕೆ..? ಒಳ್ಳೆಯದಾಗಲು ಸಮಯ ಬೇಕು

‘ನಮಗೆ ಮಾತ್ರ ಒಳ್ಳೇ ದಿನ ಬರೋದೇ ಇಲ್ವೇನೋ’- ಎಲ್ಲರದ್ದೂ ಹೀಗೊಂದು ಗೊಣಗಾಟ ಇದ್ದದ್ದೇ. ಆದರೆ, ನೆನಪಿರಲಿ, ಪ್ರಾಮಾಣಿಕತೆ, ಪರಿಶ್ರಮ, ದಕ್ಷತೆಗೆ ಯಾವತ್ತಿಗೂ ಬೆಲೆ ಸಿಕ್ಕೇ ಸಿಗುತ್ತದೆ. ಇಂಥ ಮೌಲ್ಯಗಳನ್ನು ಪಾಲಿಸಿಕೊಂಡು ಸಾಧನೆ ಮಾಡಿದರೆ ಖಂಡಿತಾ ನಮ್ಮನ್ನು ಸಮಾಜ ಗುರುತಿಸಿ, ಗೌರವಿಸುತ್ತದೆ. ಯಾವಾಗಲೂ ಒಳ್ಳೆಯದಾಗುವುದು ನಿಧಾನ. ಆದರೆ, ಆಗೇ ಆಗುತ್ತೆ, ಅದಕ್ಕಾಗಿ ಕಾಯುವ ತಾಳ್ಮೆ ಬೇಕು. ಯಾವುದೇ ಕಾರಣಕ್ಕೂ ನಮ್ಮ ದಾರಿಯಿಂದ ವಿಮುಖರಾಗದಿರೋಣ.
.New Year 2026: ದೇಶದ ಜನರಿಗೆ ಮುರ್ಮು, ಮೋದಿ, ರಾಹುಲ್ ಸೇರಿದಂತೆ ಗಣ್ಯರ ಶುಭಾಶಯ.2026 ಮುನ್ನೋಟ: ಏಷ್ಯನ್ ಗೇಮ್ಸ್, ಫಿಫಾ ವಿಶ್ವಕಪ್, ಕಾಮನ್ವೆಲ್ತ್ ಗೇಮ್ಸ್.
ಬೇಕು ಎಂಬುದಕ್ಕಿಲ್ಲ ಮಿತಿ; ಇರುವುದಕ್ಕೆ ಇರಲಿ ತೃಪ್ತಿ

ರೂಪ, ಸಂಪತ್ತು, ಅಧಿಕಾರ ಇವುಗಳಿಗೆ ಕೊನೆಯೂ ಇಲ್ಲ. ತೃಪ್ತಿಯೂ ಇರದು. ಎಷ್ಟಿದ್ದರೂ ಇನ್ನೂ ಬೇಕು, ಇನ್ನೂ ಬೇಕು ಎನ್ನುತ್ತಲೇ ಇರುತ್ತೇವೆ. ಒಂದು ತಿಳಿದುಕೊಳ್ಳಿ. ಕೆಲವರಿಗೆ ಇವೆಲ್ಲ ನಮ್ಮ ಬಳಿ ಇದ್ದಷ್ಟು ಹಾಗಿರಲಿ, ದಿನದ ತುತ್ತಿಗೂ ಇಲ್ಲದ ಮಂದಿ ನಮ್ಮ ನಡುವೆಯೇ ಇದ್ದಾರೆ. ಅತೃಪ್ತಿ, ದುರಾಸೆಯೇ ನಮ್ಮ ಬಹುತೇಕ ಸಮಸ್ಯೆಗಳಿಗೆ ಮೂಲ ಕಾರಣ. ಈ ವರ್ಷ ಖುಷಿ ಸೇರಿದಂತೆ ನಮ್ಮಲಿದ್ದುದನ್ನು ಬೇರೆಯವರಿಗೂ ಹಂಚೋಣ. ಜ್ಞಾನದ ವಿಚಾರದಲ್ಲಿ ಮಾತ್ರವೇ ತೀರಾ ಅತೃಪ್ತರಾಗೋಣ.

ಟೀಕಾಕಾರರಿಗೆ ಗೋಲಿ; ಗೋಲ್ನತ್ತ ಗುರಿ

ನಮ್ಮನ್ನು ನೋಡಿ, ಹೊಟ್ಟೆಕಿಚ್ಚು ಪಡೋದು, ಉರಿದುಕೊಳ್ಳೋದು, ನಮ್ಮನ್ನು ಟೀಕಿಸುವುದು, ವ್ಯಂಗ್ಯವಾಡುವುದು, ಕಾಲೆಳೆಯುವುದು ಇವೆಲ್ಲ ಜಗತ್ತಲ್ಲಿ ಇದ್ದೇ ಇರುತ್ತೆ. ಯಾರಾದರೂ ನಿಮ್ಮನ್ನು ಟೀಕಿಸುತ್ತಿದ್ದರೆ, ಕಾಲೆಳೆಯುತ್ತಿದ್ದಾರೆ ಎಂದರೆ ನೀವು ಎತ್ತರೆತ್ತರಕ್ಕೆ ಬೆಳೆಯುತ್ತಿದ್ದೀರಾ ಎಂದರ್ಥ. ಕೈಗೆ ಸಿಗದ ದ್ರಾಕ್ಷಿಯನ್ನು ಮಾತ್ರ ಹುಳಿ ಅನ್ನೋದು. ಟೀಕೆಗಳ, ಇರಿತ, ಕಾಲೆಳೆಯೋದು ಇವೆಲ್ಲವೂ ಅವುಗಳ ಪಾಡಿಗೆ ಬರುತ್ತಿರಲಿ. ನಾವು ಮಾತ್ರ ಇದಕ್ಕೆ ಗೋಲಿ ಹೊಡೆದು ನಮ್ಮ ಗೋಲ್ನತ್ತ ಸಾಗುತ್ತ ಇರೋಣ.
.ಹೊಸ ವರ್ಷ 2026: ಪೊಲೀಸ್ ಸರ್ಪಗಾವಲಿನಲ್ಲಿ ಸಂಭ್ರಮ.2026 | ಹೊಸ ವರ್ಷದ ಸದಾಶಯ: ಗಣ್ಯರ ನುಡಿಗಳು....
ನಾಯಿಯಂತೆ ಬಾಲ, ತಿಂದಂತೆ ಗುಣ

ಅಂದರೆ, ನಾವು ಹೇಗೆ ವರ್ತಿಸುತ್ತೇವೆ, ಹೇಗೆ ಮಾತಾಡುತ್ತೇವೆ; ಹಾಗೆಯೇ ಸುತ್ತಲಿನ ಸಮಾಜವೂ ನಮಗೆ ಪ್ರತಿಕ್ರಿಯಿಸುತ್ತದೆ. ಹಾಗಾಗಿ ನಾವು ತಿನ್ನುವ ಆಹಾರ, ಆಡುವ ಮಾತು, ತೋರುವ ವರ್ತನೆ, ಇಡುವ ಪ್ರತಿ ಹೆಜ್ಜೆಯೂ ವಿವೇಚನಾಶೀಲವಾಗಿರುವುದರ ಜತೆಗೆ ಸದ್ಭಾವನೆಯಿಂದ ಕೂಡಿರಲಿ. ಪ್ರತಿ ಸಲ ತಿನ್ನುವಾಗ, ಮಾತಾಡುವಾಗ ಅದರ ಅಗತ್ಯವಿದೆಯೇ? ಇದ್ದರೆ ಎಷ್ಟು ಮತ್ತು ಹೇಗೆ ಎಂಬುದನ್ನು ಯೋಚಿಸೋಣ. ಆಹಾರ ಮತ್ತು ಮಾತು ವಿಷವಾದರೆ ಅದರಿಂದ ನಮಗೇ ಹಾನಿ. ಸಿಕ್ಕಿದ್ದನ್ನೆಲ್ಲ ತಿನ್ನದಿರೋಣ, ಬಾಯಿಗೆ ಬಂದದ್ದನ್ನೆಲ್ಲ ಮಾತಾಡದಿರೋಣ.

ನಂಬಿ ಕೆಟ್ಟವರಿಲ್ಲ ಎಂದಿದ್ದಾರೆ ದಾಸರು

ನಮ್ಮಿಡೀ ಜೀವನ ನಿಂತಿರುವುದೇ ನಂಬಿಕೆಯ ಮೇಲೆ. ನಮ್ಮ ಮೇಲೆ ನಮಗೇ ನಂಬಿಕೆಯಿಲ್ಲದಿದ್ದರೆ ಜೀವದಲ್ಲಿ ಯಾವುದನ್ನೂ, ಯಾರನ್ನೂ ನಾವು ನಂಬುವುದಿಲ್ಲ. ಅಂಥ ಅಮೂಲ್ಯ ನಂಬಿಕೆಯ ಬುನಾದಿಯ ಮೇಲೆಯೇ ಬದುಕನ್ನು ಕಟ್ಟಿಕೊಳ್ಳಬೇಕು. ನಂಬಿಕಸ್ಥ, ಪ್ರಾಮಾಣಿಕ ಎಂಬೆರಡಕ್ಕಿಂತ ದೊಡ್ಡ ಗೌರವ ಇನ್ನೊಂದಿಲ್ಲ. ನಾವೂ ಇತರರು ನಂಬುವಂತಿರೋಣ. ಇತರರನ್ನು ಸಂಶಯಿಸುವುದನ್ನೂ ನಿಲ್ಲಿಸೋಣ. ನಮ್ಮ ನಂಬಿಕೆ ಕಳೆದುಕೊಂಡರೆ ಅದು ಅವರ ಹಣೆಬರಹ.

ಹಳಸಿದ ಸಂಬಂಧ ಮರಳಿ ಬೆಸೆಯಲಿ ಈ ವರ್ಷ

ಗೆಳೆತನ, ಬಂಧುತ್ವ, ಪ್ರೀತಿ-ಪ್ರೇಮಗಳು ಪ್ರಾಣಿಗಳಲ್ಲೂ ಆದ್ಯತೆ ಪಡೆದಿರುತ್ತವೆ. ದ್ವೇಷ, ಅಸೂಯೆ, ಹಠ ಸಾಧನೆಗಳು ಮನುಷ್ಯರಲ್ಲಿ ಮಾತ್ರವೇ ಜೀವಂತವಿರೋದು. ನಾವು ಪ್ರಾಣಿಗಳಿಗಿಂತ ಕಡೆಯಾದರೆ ಹೇಗೆ? ಅದು ಯಾವುದೇ ಸಂಬಂಧವಿರಬಹುದು, ಯಾವುದೇ ಕಾರಣವಿರಬಹುದು ಹಳಸಿ ಹೋಗಿದ್ದರೆ ಈ ವರ್ಷ ಅದನ್ನು ಮತ್ತೆ ಬೆಸೆದುಕೊಳ್ಳಲು ಯತ್ನಿಸೋಣ. ನಾವೇ ಮುಂದಾಗಿ ಬಯಸದೇ ಯಾವ ಸಂಬಂಧ ಬೆಸೆಯುವುದಿಲ್ಲ.

ಪ್ರೀತಿ ಗೆಲ್ಲುವ ರೀತಿ

ಒಂದು ಹಿಡಿ ಪ್ರೀತಿ ದಕ್ಕಿಸಿಕೊಳ್ಳುವುದು ಸುಲಭದ ಮಾತಲ್ಲ. ಅದಕ್ಕಾಗಿ ಜೀವನದಲ್ಲಿ ಯಾರೆಲ್ಲ, ಏನೆಲ್ಲ ಸರ್ಕಸ್ ಮಾಡ್ತಾರೆ ಗೊತ್ತಾ? ನಾವು ಮೊದಲು ನಮ್ಮನ್ನು ನಾವು ಪ್ರೀತಿಸಿಕೊಳ್ಳೊಣ. ಜೀವನ ಪ್ರೀತಿಯ ಮೊದಲ ಪಾಠವಿದು. ಹಾಗಾದಾಗ ಮಾತ್ರ, ನಮ್ಮ ಸುತ್ತಲಿನವರನ್ನು ನಮ್ಮ ಕೆಲಸವನ್ನು, ನಮ್ಮ ಆದರ್ಶಗಳನ್ನು... ಹೀಗೆ ಪ್ರತಿಯೊಂದನ್ನೂ ಪ್ರೀತಿಸಲು ಆರಂಭಿಸುತ್ತೇವೆ. ಪ್ರೀತಿಯಿಂದ ಗೆಲ್ಲಲಾಗದ್ದು ಈ ಜಗತ್ತಿನಲ್ಲೇ ಇಲ್ಲ. ಪ್ರೀತಿಸುವುದನ್ನು ಕಲಿತಾಗ ಬದುಕು ಬಲು ಸುಂದರ. ಪ್ರೀತಿಯಿಂದ ಬದುಕೋಣ.

ನಾನು ಕೀಳಲ್ಲ; ಎನಗಿಂತ ಕಿರಿಯರಿಲ್ಲ

ಕೀಳರಿಮೆ ಎಂಬುದು ಯಾರೋ ನಮ್ಮನ್ನು ಕೀಳಾಗಿ ಕಂಡದ್ದರಿಂದ ಬರುವುದಲ್ಲ. ನಮ್ಮೊಳಗೇ ಮೊಳೆಯುವಂಥದ್ದು. ಏಕೆಂದರೆ ನಮ್ಮ ಮಿತಿಗಳು ನಮಗಿಂತ ಬೇರೆಯವರಿಗೆ ಗೊತ್ತಿರಲು ಸಾಧ್ಯವೇ ಇಲ್ಲ. ಹೀಗಾಗಿ, ಯಾರು ಏನೆಂದುಕೊಂಡರೆ ನಮಗೇನು? ಅದು ರೂಪ, ಯವ್ವನ, ಬುದ್ಧಿವಂತಿಕೆ, ಅಂತಸ್ತು… ಯಾವುದೇ ವಿಚಾರದಲ್ಲಿ ಇರಬಹುದು ಅದರ ಬಗ್ಗೆ ಅಹಂಕಾರವೂ ಸಲ್ಲ. ಕೀಳಿರಿಮೆಯೂ ಬೇಕಿಲ್ಲ. ಬದುಕಿನಲ್ಲಿ ಈ ಎಲ್ಲ ನೋವುಗಳೀಗೂ ಈ ಎರಡು ಗುಣದಿಂದಲೇ ಎದುರಾಗುವುದು. ಹೊಸ ವರ್ಷದಲ್ಲಿ ಈ ಎರಡನ್ನೂ ಮೀರಿದ ಆತ್ಮ ವಿಶ್ವಾಸ-ಸ್ವಾಭಿಮಾನ ಬೆಳೆಸಿಕೊಳ್ಳೋಣ.

ನಮ್ಮ ಸಾಧನೆಗೆ ಇರಲಿ ನಮ್ಮದೇ ಪ್ರೇರಣೆ

ಯಾರೋ ಓಡಿದರೆ ನಾವು ಗುರಿ ತಲುಪುವುದಿಲ್ಲ. ಏಕೆಂದರೆ ಯಾರೂ ನಮ್ಮನ್ನು ಹೆಗಲ ಮೇಲೆ ಹೊತ್ತುಕೊಂಡು ಓಡಲು ಸಿದ್ಧರಿರುವುದಿಲ್ಲ ಅಥವಾ ಜೀವನದುದ್ದಕ್ಕೂ ಯಾರೂ ನಮ್ಮನ್ನು ಕೈ ಹಿಡಿದು ನಡೆಸುವವರು, ಹಿಡಿದೆತ್ತುವವರು ಇರುವುದಿಲ್ಲ. ನಮಗೆ ನಾವೇ ದೈರ್ಯ ತುಂಬಿಕೊಳ್ಳಬೇಕು, ಪ್ರೇರೇಪಿಸಿಕೊಳ್ಳಬೇಕು. ಕಸುವು ತುಂಬಿಕೊಂಡು ಹಿಡಿದ ಕೆಲಸವನ್ನು ಮಾಡಿ ಮುಗಿಸೊಣ. ಅಂದುಕೊಂಡ ಗುರಿಯನ್ನು ತಲುಪಿಯೇ ತೀರೋಣ. ಅದು ಏನಾದರಾಗಲಿ, ಆತ್ಮವಿಶ್ವಾಸ ಮಾತ್ರ ಈ ವರ್ಷ ಕುಂದದಿರಲಿ. ನಮ್ಮ ಗಾಡಿಗೆ ನಮ್ಮದೇ ಪೆಟ್ರೋಲ್, ಒಂದಾಗಿರಲಿ ಹಾರ್ಟ್ ಮತ್ತು ಸೋಲ್.

ಸುಲಭವಾಗಿಬಿಟ್ಟರೆ ಏನು ಮಜಾ ಇದೆ?

ಎಲ್ಲರೂ ಹುಡುಕುವುದು ಶಾರ್ಟ್ಕಟ್ಗಳನ್ನೇ. ಸುಲಭದಲ್ಲಿ, ಬೇಗ ತಲುಪುವುದೇ ಎಲ್ಲರ ಬಯಕೆ. ನಾವೂ ಅದನ್ನೇ ಹಿಂಬಾಲಿಸುವುದರಲ್ಲಿ ಏನಿದೆ ಥ್ರಿಲ್ ? ಬದುಕಲ್ಲಿ ಭಿನ್ನವಾಗಿ ನಿಲ್ಲಬೇಕೆಂದರೆ ಬದಕನ್ನೇ ಸವಾಲಾಗಿ ಸ್ವೀಕರಿಸಬೇಕು. ಕಷ್ಟಗಳಿಗೆ ಎದೆಯೊಡ್ಡಿ ಅವುಗಳನ್ನು ಕರಗಿಸುವದರಲ್ಲೇ ಇದೆ ನಮ್ಮ ತಾಕತ್ತು. ಯಶಸ್ಸಿಗೆ ಶಾರ್ಟ್ಕಟ್ ಇರೋದೇ ಇಲ್ಲ. ಅದೃಷ್ಟಕ್ಕೆ ದಕ್ಕಿದ್ದು ಉಳಿಯೋದಿಲ್ಲ. ಹಾಗಾಗಿ ದುರ್ಗಮ ಹಾದಿಯಲ್ಲಿ ಸಾಗಿ, ಸಾಧಿಸೋಣ. ಏರಿಳಿತಗಳನ್ನು ಎಂಜಾಯ್ ಮಾಡೋದು ಕಲಿಯೋಣ.

ತಪ್ಪಾಗಲಿ, ಪಶ್ಚಾತಾಪವೂ ಇರಲಿ

ತಪ್ಪೇ ಮಾಡದಿದ್ದರೆ, ಜೀವನದ ಮುಸ್ಸಂಜೆಯಲ್ಲಿ ಕೈಲಾಗದೇ ಕುಳಿತಾಗ ನೆನಪಿಸಿಕೊಂಡು ನಗಲು ಏನೂ ಇರುವುದೇ ಇಲ್ಲ. ಹಾಗಾಗಿ ಆಗಾಗ ತಪ್ಪು ಮಾಡುತ್ತಲೇ ಇರಬೇಕು. ಒಂದೇ ಕರೆಕ್ಷನ್ ಏನೆಂದರೆ ಮಾಡಿದ ತಪ್ಪನ್ನೇ ರಿಪೀಟ್ ಮಾಡೋದು ಮೂರ್ಖತನ ಮಾತ್ರವಲ್ಲ. ಅವಕಾಶಗೇಡಿತನವೂ ಹೌದು. ಹೊಸ ತಪ್ಪುಗಳನ್ನು ಮಾಡೋಣ ಮತ್ತು ಅಂಥ ತಪ್ಪುಗಳಿಂದ ಪಾಠ ಕಲಿಯೋಣ. ಒಂದು ನೆನಪಿಡಿ. ಪಾಠ ಕಲಿಯಲೆಂದೇ ತಪ್ಪು ಮಾಡಬೇಕಿಲ್ಲ, ಎಲ್ಲ ಪಾಠವನ್ನೂ ನಮ್ಮ ತಪ್ಪುಗಳಿಂದಲೇ ಕಲಿಯಲೂಬೇಕಿಲ್ಲ.

ನಗುನಗುತಾ ನಲಿ, ಏನೇ ಆಗಲಿ

ನಮ್ಮನ್ನು ನಾವೊಮ್ಮೆ ಕನ್ನಡಿಯಲ್ಲಿ ನೋಡಿಕೊಂಡರೆ ನಮಗೇ ಹೆಮ್ಮೆ ಆಗಬೇಕು. ಸದಾ ಅಳುಮುಂಜಿ ಮೋರೆ ಹಾಕಿಕೊಂಡೋ, ಮುಖ ಗಂಟಿಕ್ಕಿಕೊಂಡೋ, ಗುರ್... ಎನ್ನುತ್ತಲೋ ಇದ್ದರೆ ಯಾರು ತಾನೇ ನಮ್ಮನ್ನು ಮಾತಾಡಿಸಿಯಾರು? ಯಾರೇಕೆ ನಮ್ಮ ಕಷ್ಟ ಸುಖ ಕೇಳುತ್ತಾರೆ? ಸಣ್ಣದೊಂದು ಕಿರುನಗೆ ಸದಾ ಮುಖದಲ್ಲಿದ್ದರೆ ಆ ಮುಖದ ಸೌಂದರ್ಯ ಇಮ್ಮಡಿಸುತ್ತದೆ. ನಗುನಗುತ್ತಾ ಮಾಡುವ ಕೆಲಸ ಸುಲಭವೂ ಆಗುತ್ತದೆ. ಎಂಥದ್ದೇ ಸಮಸ್ಯೆ ಇರಲಿ, ತಲೆ ಹೋಗುವಂಥದ್ದು ಏನೂ ಇರುವುದಿಲ್ಲ. ಎಲ್ಲವನ್ನೂ ನಗುನಗುತ್ತ ಎದುರಿಸೊಣ.

ನಮಗೆ ನಾವೇ, ತಲೆಗೆ ನಮ್ಮ ತೋಳೇ

ಯಾರೂ ನಮ್ಮ ತಲೆಗೆ ತೊಡೆಕೊಟ್ಟು ಕುಳಿತುಕೊಳ್ಳುವುದಿಲ್ಲ. ಹಾಗೆ ನಮ್ಮನ್ನು ಮಲಗಿಸಿಕೊಳ್ಳಲು, ತಟ್ಟಿ ಸಾಂತ್ವನ ಹೇಳಲು ಎಲ್ಲರೂ ನಮ್ಮಮ್ಮ ಅಗಿರಲ್ಲ. ವೃಥಾ ಇನ್ನೊಬ್ಬರು ನಮ್ಮನ್ನು ಸಂತೈಸಲಿ, ನಮ್ಮನ್ನು ಓಲೈಸಲಿ ಎಂದು ಕಾಯುತ್ತಾ ನಮ್ಮನ್ನು ನಾವು ಕಳೆದುಕೊಂಡುಬಿಟ್ಟಿರುತ್ತೇವೆ. ಇಲ್ಲವೇ ಬೇರೆಯವರೊಂದಿಗೆ ನಮ್ಮನ್ನು ಹೋಲಿಸಿಕೊಂಡು ಕೊರಗುತ್ತಿರುತ್ತೇವೆ. ಬೇರೆಯವರೆದುರು ಅತ್ತು ಸಣ್ಣವರಾಗದಿರೋಣ, ಬೇರೆಯವರಿಗೆ ಹೋಲಿಸಿಕೊಂಡು ಕೊರಗದಿರೋಣ.

ಮೂಗು ಕೆಂಪಾದರೆ ಬಿಪಿ ಬರುತ್ತೆ!

ಎಲ್ಲದಕ್ಕೂ ಕೂಗಾಡಬೇಕು, ಎಲ್ಲವನ್ನೂ ಏರುಧ್ವನಿಯಲ್ಲೇ ಸಾಧಿಸಬೇಕು ಅಂತೇನೂ ರೂಲ್ಸಿಲ್ಲ, ಅದು ಸಾಧ್ಯವೂ ಇಲ್ಲ. ಹೀಗಾಗಿ ಕೊಪದಿಂದ ಗಳಿಸುತ್ತೇನೆಂಬುದು ‘ಹೈ ಬಿಪಿ’ಯನ್ನು ಮಾತ್ರ. ಕೋಪದಿಂದ ಈ ಜಗತ್ತನ್ನು ಗೆದ್ದದ್ದಕ್ಕಿಂತ ಸಮಾಧಾನದಿಂದ ಗಳಿಸಿದ ಮಂದಿ ಸಾಕಷ್ಟಿದ್ದಾರೆ. ಕೂಗಾಟ, ಎಗರಾಟ, ಕೋಪ ತಾಪಗಳನ್ನೆಲ್ಲ ಬದಿಗಿಟ್ಟು ಈ ವರ್ಷ ಸಮಾಧಾನದಿಂದ ಮುನ್ನಡಿ ಇಡೋಣ. ಮೌನವಾಗಿದ್ದೇ ಸಾಧಿಸಿ ತೋರಿಸೊಣ.

ಹೊಸ ವರ್ಷಕ್ಕೆ ಬದುಕೂ ಹೊರಳಲಿ

ಸದಾ ಹೊಸತನಕ್ಕೆ ತುಡಿಯುವವವನಿಗೆ ಮಾತ್ರ ಜೀವನ ಥ್ರಿಲ್ ಎನಿಸುತ್ತದೆ. ಹೊಸ ಹೊಸ ರಿಸ್ಕ್ ತೆಗೆದುಕೊಳ್ಳುವ ಛಾತಿ ಇದ್ದವರಿಂದ ಮಾತ್ರ ಉನ್ನತ ಸಾಧನೆ ಸಾಧ್ಯ. ಇಲ್ಲದಿದ್ದರೆ ಬದುಕು ಬೋರೋ ಬೋರು. ಬಾವಿಯೊಳಗಿನ ಕಪ್ಪೆಯಂತೆ ಬದುಕಿಬಿಟ್ಟರೆ ಏನಿದೆ ಮಜಾ? ಯಾರೋ ಮಾಡಿಟ್ಟ ಹಾದಿಯಲ್ಲಿ ನಡೆದರೆ ಏನು ಮಹಾ ಸಾಧನೆ. ಹೊಸತೇನನ್ನಾದರೂ ಈ ವರ್ಷ ಮಾಡೋಣ. ಅಷ್ಟಕ್ಕೂ ಒಂದೊಮ್ಮೆ ಸೋತರೆ, ಜಿವನಕ್ಕೊಂದು ಹೊಸ ಅನುಭವ ಸಿಗುತ್ತೆ. ಗೆದ್ದೇ ಬಿಟ್ಟೆವು ಎಂದುಕೊಳ್ಳಿ ಮತ್ತೊಂದು ಸಾಹಸಕ್ಕೆ ಪ್ರೇರಣೆಯಾಗುತ್ತದೆ. ಹೊಸ ವರ್ಷದಲ್ಲಿ ಹೊಸ ಹೊಸ ಸಾಹಸ ಮೆರೆಯೊಣ. ಹೊಸದಾಗಿ ಬದುಕೋಣ.

ಆಲ್ ದಿ ವೆರಿ ಬೆಸ್ಟ್...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.