ಅಕಾಲ
ಲೇ: ಪ್ರೇಮಕುಮಾರ್ ಹರಿಯಬ್ಬೆ
ಪ್ರ: ಕವಿತಾ ಪ್ರಕಾಶನ
ಸಂ: 9880105526

ಗ್ರಾಮಭಾರತ ಇಂದು ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು, ಅಲ್ಲಿನ ವಿಕೃತಿಗಳೊಂದಿಗೆ ಸಮಾಜದ ಮುಖಕ್ಕೆ ರಾಚುವಂತೆ ಹಿಡಿದು ತೋರಿಸುವ ಕಥೆಗಳ ಗುಚ್ಛ ‘ಅಕಾಲ’. ಪತ್ರಕರ್ತರಾಗಿ ಪ್ರೇಮಕುಮಾರ್ ಹರಿಯಬ್ಬೆಯವರು ಗ್ರಾಮೀಣ ಭಾಗದಲ್ಲಿ ಕಂಡುಂಡ ಅನುಭವಗಳಿಗೆ ಕಲ್ಪನೆಯ ಮೆರುಗು ತುಂಬಿರುವ ಅವರೊಳಗಿನ ಕಥೆಗಾರ ಮಾಡಿದ ರಸಪಾಕ ಇದಾಗಿದೆ. ಹರಿಯಬ್ಬೆಯವರ ಮೊದಲ ಸಂಕಲನ ಪ್ರಕಟವಾಗಿ ನಾಲ್ಕು ದಶಕಗಳ ಬಳಿಕ ಬಂದಿರುವ ಸಂಕಲನ ಇದಾಗಿದ್ದು, ಕಥೆ ಹೇಳಲು ಅವರು ತೋರುವ ಸಾವಧಾನದ ನಡೆಗೆ ದ್ಯೋತಕವಾಗಿದೆ. ಗ್ರಾಮೀಣ ಭಾಗದ ಸಂಕಟಗಳು ಅವರೊಳಗಿನ ಕಥೆಗಾರನನ್ನು ಬಹುವಾಗಿ ಬಾಧಿಸಿದಂತಿದೆ. ಇಲ್ಲಿನ ಕಥೆಗಳಲ್ಲಿ ಹೆಣಗಳು ಮತ್ತೆ ಮತ್ತೆ ಬರುತ್ತವೆ. ಅದು ‘ದೇವರ ಕೆರೆ’ ಕಥೆ ಆಗಿರಬಹುದು, ‘ಗಾಂಧಿ ಮೇಷ್ಟ್ರು’ ಕಥೆ ಆಗಿರಬಹುದು, ‘ಬಾಬಣ್ಣನೆಂಬ ಅಮಾಯಕ’ ಕಥೆ ಆಗಿರಬಹುದು, ಅಷ್ಟೇ ಏಕೆ, ಸಂಕಲನದ ಶೀರ್ಷಿಕೆಯಾದ ‘ಅಕಾಲ’ ಕಥೆಯೇ ಆಗಿರಬಹುದು, ಹೆಣದ ಸಮ್ಮುಖದಲ್ಲಿಯೇ ಸಾಮಾಜಿಕ ಸಂದರ್ಭದ ವಿಶ್ಲೇಷಣೆ ನಡೆಯುತ್ತದೆ. ಸ್ವಾತಂತ್ರ್ಯಾನಂತರದ ಕಾಲಘಟ್ಟದ ಭಾರತದ ವ್ಯಥೆಯ ಪ್ರತಿಬಿಂಬದಂತೆ ಇಲ್ಲಿನ ಕಥೆಗಳು ಗೋಚರಿಸುತ್ತವೆ. ಗ್ರಾಮಭಾರತದ ಅಸಹಾಯಕ ಬದುಕು ಮನಸ್ಸಿನಲ್ಲಿ ಗಾಢವಾಗಿ ಉಳಿಯುವಷ್ಟು ಅಲ್ಲಿನ ಸಂಕಟಗಳು ಈ ಕಥೆಗಳಲ್ಲಿ ಹರಳುಗಟ್ಟಿವೆ. ತನ್ನ ಸುತ್ತ ಸಮಾಜ ಸೃಷ್ಟಿಸಿಕೊಂಡ ಅಧ್ವಾನಗಳನ್ನು ಎತ್ತಿ ತೋರಿಸಿ, ತಿವಿಯುವುದರಿಂದ ‘ಅಕಾಲ’ದ ಈ ಕಥೆಗಳನ್ನು ಸಕಾಲದ ಕಥೆಗಳು ಎನ್ನಬಹುದೇನೋ. v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.