ಇದು ಪ್ರವೀಣ್ ಕುಮಾರ್ ಜಿ. ಅವರ ಎರಡನೇ ಕಥಾಸಂಕಲನ. ಇದರಲ್ಲಿ ಒಟ್ಟು ಹತ್ತು ಕಥೆಗಳಿವೆ. ಅವರ ಮೊದಲ ಕಥಾಸಂಕಲನ ‘ಎಡೆ’ಯ ಮುಂದುವರಿದ ಭಾಗದಂತಿರುವ ಇಲ್ಲಿನ ಕಥೆಗಳಲ್ಲಿ ಬೆಂಗಳೂರಿನ, ಅದರಲ್ಲೂ ವಿಜಯನಗರ ಏರಿಯಾದ ಸುತ್ತಮುತ್ತಲಿನ ಚಿತ್ರಣವಿದೆ. ನೂರಾರು ಕನಸಿಟ್ಟುಕೊಂಡು ಇಲ್ಲಿಗೆ ಓದಲು ಬರುವ ಹುಡುಗರು, ಮನೆಗೆಲಸ ಮಾಡುವ ಮಹಿಳೆಯರು, ಅದೇ ವರ್ಗದ ಜನರ ಚಿತ್ರಣವು ಕತೆಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಪದೇ ಪದೇ ಅದೇ ಅದೇ, ಜಾರು ಬಂಡೆ ಕತೆಗಳಲ್ಲಿ ಹೊಸಶೈಲಿಯ ನಿರೂಪಣೆಯನ್ನು ಕಥೆಗಾರ ಪ್ರಯತ್ನಿಸಿದ್ದಾರೆ. ಸರಳ ಭಾಷೆ ಹಾಗೂ ನಿರೂಪಣೆಯಿಂದ ಉಳಿದ ಕಥೆಗಳೂ ಕೂಡ ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ.

ಬಯಲುಸೀಮೆ ಬಳ್ಳಾರಿಯ ಕನ್ನಡವನ್ನು ಇಲ್ಲಿನ ಕಥೆಗಳಲ್ಲಿ ಚೆನ್ನಾಗಿಯೇ ಉಪಯೋಗಿಕೊಂಡಿದ್ದಾರೆ. ಕೆಲವು ಕಥೆಗಳಲ್ಲಿ ಸಿನಿಮೀಯ ತಿರುವುಗಳನ್ನು ಕೂಡ ಕಾಣಬಹುದು.

ಬದಲಾಗುತ್ತಿರುವ ಬದುಕು ಮತ್ತು ಮಾನವೀಯ ಸಂಬಂಧಗಳ ಜಂಜಾಟವನ್ನು ಈ ಕಥಾ ಸಂಕಲನದ ಎಲ್ಲಾ ಕಥೆಗಳಲ್ಲೂ ಕಾಣಬಹುದು. ಆಧುನಿಕ ಕಾಲಘಟ್ಟದಲ್ಲಿ ತಲೆ ಎತ್ತುತ್ತಿರುವ ಹೊಸ ಸಮಸ್ಯೆಗಳ ಜೊತೆಗೆ ಮಾತೃಭಾಷಾ ಶಿಕ್ಷಣ, ಸಾಮಾಜಿಕ ಅವ್ಯವಸ್ಥೆಯ ಬಗ್ಗೆಯೂ ಇಲ್ಲಿನ ಕಥೆಗಳು ಮಾತನಾಡುತ್ತವೆ.

ಈ ಕಥಾಸಂಕಲನ ವಿಶೇಷವೆಂದರೆ, ಕನ್ನಡೇತರ ಪದಗಳನ್ನು ಆದಷ್ಟು ಕಡಿಮೆ ಬಳಕೆ ಮಾಡಿದ್ದಾರೆ. ಕೆಲವೆಡೆ ಕನ್ನಡದಲ್ಲಿ ಚಾಲ್ತಿಯಲ್ಲಿರುವ ಬೇರೆ ಭಾಷಿಕ ಪದಗಳಿಗೂ ಹೊಸ ಕನ್ನಡ ಪದವನ್ನು ಕಟ್ಟಿ ಕೊಡುವ ಪ್ರಯತ್ನವನ್ನು ಮಾಡಿದ್ದಾರೆ.

ಬಯಲುಲೇ: ಪ್ರವೀಣ್ ಕುಮಾರ್ ಜಿ.ಪ್ರ: ಒಲವು ಬರೆಹಸಂ: 9611360860ಪುಟ - 150ಬೆಲೆ - ₹ 150

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.