ಮೊದಲೇ ಘಮಘಮ ಕಡುಬು, ಅದಕ್ಕೊಂದಿಷ್ಟು ತುಪ್ಪ ಸವರಿ ಬಾಯಿಗಿಟ್ಟರೆ, ಆಹಾ... ಆ ರುಚಿಗೆ ಸಾಟಿಯುಂಟೇ? ಇನ್ನು, ಶುರುವಾಗೇ ಬಿಟ್ಟಿದೆ ಹಬ್ಬದ ಗೌಜಿ, ಅದಕ್ಕೆ ಹಾಸ್ಯ ರಸಾಯನವೂ ಬೆರೆತರೆ... ಆ ಸಂಭ್ರಮಕ್ಕೆ ಎಣೆಯುಂಟೇ? ‘ಭೂಮಿಕಾ’ ಕೇಳಿದ ತುಂಟ ಪ್ರಶ್ನೆಗಳಿಗೆ ನಮ್ಮ ಹಾಸ್ಯ ಕಲಾವಿದರು ಕೊಟ್ಟಿರುವ ಜಾಣ ಉತ್ತರಗಳ ಜುಗಲ್ಬಂದಿ ಇದು:

ಹಾಸ್ಯದ ರಸದೌತಣ ಸವಿಯಲು ನಾವು ಏಪ್ರಿಲ್ವರೆಗೂ ಕಾಯಬೇಕು ಯಾಕೆ? ನಮ್ಮ ಹಾಸ್ಯ ಚತುರರು ಗಣೇಶ ಚತುರ್ಥಿಗೇ ಉಣಬಡಿಸಲು ಸಿದ್ಧರಿರುವಾಗ?

ಜೀವನದಲ್ಲಿ ಮುಂದೆ ಬರಲು ಯಾರ ಮಾತು ಕೇಳಬೇಕು? ಹೆಂಡತಿಯದೋ? ಅಮ್ಮನದೋ?

– ಗಣೇಶ್ ಕಾರಂತ್

ಅಮ್ಮ ಹೇಳುವ ಮಾತಿನಲ್ಲಿ ಯಾವತ್ತೂ ಎಕ್ಸ್ಪೀರಿಯನ್ಸ್ ಮಿಕ್ಸ್ ಆಗಿರುತ್ತೆ. ಅವಳು ಹೇಳೋದು– ‘ಹಣ ಸೇವ್ ಮಾಡು, ಮನೆ ಕಟ್ಟು, ಆರೋಗ್ಯ ಕಾಪಾಡ್ಕೋ, ಸಮಾಜದಲ್ಲಿ ಗೌರವ ಉಳಿಸ್ಕೋ... ಈ ಮಾತುಗಳನ್ನು ಕೇಳೋಕೆ ಮೊದಲಿಗೆ ಬೋರಿಂಗ್ ಅನ್ಸಬಹುದು, ಬಟ್ ಲಾಂಗ್ ರನ್ನಲ್ಲಿ ಲೈಫ್ ಸೆಟಲ್ ಆಗ್ತದೆ. ಅಮ್ಮನ ಸಲಹೆ ಜಿಪಿಎಸ್ ಇದ್ದಂತೆ– ನೇರವಾಗಿ ಡೆಸ್ಟಿನೇಷನ್ ತಲುಪಿಸ್ತದೆ.

ಹೆಂಡತಿಯ ಮಾತು– ಪ್ರೆಸೆಂಟ್ ಓರಿಯಂಟೆಡ್

ಹೆಂಡತಿಯ ಮಾತುಗಳಲ್ಲಿ ಲಾಜಿಕ್ ಕಡಿಮೆ, ಮ್ಯಾಜಿಕ್ ಜಾಸ್ತಿ. ಅವಳು ಹೇಳೋದು– ಹೊಸ ಡ್ರೆಸ್ ತಗೊಳ್ಳೋಣ, ಹೊಸ ಫೋನ್ ಅಪ್ಗ್ರೇಡ್ ಮಾಡೋಣ, ಮಾಲ್ಗೆ ಹೋಗೋಣ, ಪಿಜ್ಜಾ ಆರ್ಡರ್ ಮಾಡೋಣ...

ಶಾರ್ಟ್ ಟರ್ಮ್ನಲ್ಲಿ ತುಂಬಾ ಎಕ್ಸೈಟ್ಮೆಂಟ್ ಕೊಡುತ್ತೆ, ಬಟ್ ಎಂಡ್ ರಿಸಲ್ಟ್– ಎಂಪ್ಟಿ ಪಾಕೆಟ್ & ಫುಲ್ ಇಎಂಐ! ಹೆಂಡತಿಯ ಸಲಹೆ Google Ads ಇದ್ದ ಹಾಗೆ– ಕ್ಲಿಕ್ ಮಾಡಿದ್ರೆ ಎಲ್ಲಿ ಬೇಕಾದ್ರೂ ತಿರುಗಿಸ್ತದೆ.

ಫೈನಲ್ ವರ್ಡಿಕ್ಟ್

ಹೆಂಡತಿಯ ಮಾತು ಕೇಳಿದ್ರೆ ಇಎಂಐ ಸೆಟಲ್ ಆಗಲ್ಲ ಅಮ್ಮನ ಮಾತು ಕೇಳಿದ್ರೆ ಜೀವನ ಸೆಟಲ್ ಆಗ್ತದೆ

– ಪ್ರೀತಿ ಸಂಗಮ್

ಸಪ್ತಪದಿ ತುಳಿಯುವಾಗ ಗಂಡ ಮುಂದೆ ಇರುವುದು ಪುರೋಹಿತರ ಮಾತು ಕೇಳಿ ಅನ್ನುವುದು ನಿಮ್ಮ ವಾದವೇ? ಹಾಗಿದ್ದರೆ, ಪತಿ ಮುಂದೆ ಬರಲು ಕಾರಣಕರ್ತೆಯಾಗುವವಳು ಪಾ(ಪ್ರಾ)ಣಿಗ್ರಹಣ ಮಾಡಿದ ಹೆಂಡತಿಯೇ ವಿನಾ ಪುರೋಹಿತರಲ್ಲ ಎನ್ನುವುದು ನನ್ನ ಉತ್ತರ. ಇಲ್ಲಿಂದಲೇ ಶುರುವಾಗುತ್ತೆ ನೋಡಿ, ಹೆಂಡತಿಯಿಂದ ಗಂಡ ತನ್ನ ಜೀವನದಲ್ಲಿ ಮುಂದೆ ಬರುವುದರ ಶಂಕುಸ್ಥಾಪನೆ ಸಮಾರಂಭ.

‘ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂಬಂತೆ ಸರಳವಾಗಿ ಬದುಕುವುದನ್ನು ಅಮ್ಮ ತನ್ನ ಮಕ್ಕಳಿಗೆ ಹೇಳಿಕೊಡುತ್ತಾಳೆ. ಆಮೇಲೆ ಅದರಂತೇ ನಡೆಯುವ ಬ್ರಹ್ಮಚಾರಿಗಳೆಲ್ಲ ಗೇಣು ಬಟ್ಟೆ (ಬರ್ಮುಡಾ) ತೊಟ್ಟು ಮುಲಾಜಿಲ್ಲದೇ ರಸ್ತೆಬದಿಯ ಕಳಪೆ ಆಹಾರವನ್ನು ಆಗಾಗ ಹೊಟ್ಟೆಗೆ ಹಾಕಿಕೊಳ್ಳುತ್ತಾ ಜೀವನ ಸಾಗಿಸುತ್ತಿರುತ್ತಾರೆ. ಮುಂದೊಂದು ದಿನ ಆ ಬಡಪಾಯಿ ವರಮಹಾಶಯನಿಗೆ ವಧುವಿನ ಜೊತೆಗೆ ಬ್ರಹ್ಮಗಂಟು ಬಿದ್ದು, ಆ ಹೆಂಡತಿ ‘ಎಲ್ಲಾರು ಮಾಡುವುದು ಕೋಟಿ ಕೋಟಿ ದುಡ್ಡಿಗಾಗಿ, ಕೇಜಿಗಟ್ಟಲೆ ಚಿನ್ನಕ್ಕಾಗಿ, ಸೈಟ್ಗಾಗಿ, ಬಂಗಲೆಗಾಗಿ, ರಾಶಿ ರಾಶಿ ಗೇಣು ಬಟ್ಟೆಗಳಿಗಾಗಿ (ಬರ್ಮುಡಾ ಫಾರ್ ಗಂಡ ಆ್ಯಂಡ್ ಗುಂಡಿ), ಇದೆಲ್ಲಾ ಮಾಡಿ ಸಮಯವಿದ್ದರೆ ಹೊಟ್ಟೆಗಾಗಿ’ ಎಂದು ಗಂಡನ ಕಿವಿ ಹಿಂಡಿದಾಗಲೇ ಅವನು ಹೆಂಡತಿಯ ಮಾತನ್ನು ಕೇಳತೊಡಗುವುದು. ತನ್ನ ಆಲಸ್ಯತನವನ್ನು ಹೊಡೆದೋಡಿಸಿ, ಇಷ್ಟಪಟ್ಟಲ್ಲದಿದ್ದರೂ ಹಗಲು ರಾತ್ರಿ ಕಷ್ಟಪಟ್ಟು ದುಡಿಯಲಾರಂಭಿಸಿ, ಜೀವನದಲ್ಲಿ ಮುಂದೆ ಬರುವುದು ಎನ್ನುವ ಮಾತು ಸುಳ್ಳಲ್ಲ.

ಹೆತ್ತ ಅಮ್ಮನಿಗೆ ಹೆಗ್ಗಣವೂ ಮುದ್ದಲ್ಲವೇ! ಹಾಗಾಗಿ, ಮಗನ ಎಲ್ಲಾ ಅಶಿಸ್ತುಗಳಿಗೆ ಅಸ್ತು ಎನ್ನುವ ಅಮ್ಮ, ಗಂಡನ ಎಲ್ಲಾ ಅಶಿಸ್ತುಗಳಿಗೆ ಶಾಸ್ತಿ ಮಾಡುವ ಹೆಂಡತಿಯ ನಡುವೆ ಅವನು ಅಮ್ಮನ ಬದಲು ಹೆಂಡತಿಯ ಮಾತು ಕೇಳಿದರೆ ಉತ್ತಮ ಪುರುಷನಾಗುತ್ತಾನೆ, ಇಲ್ಲವಾದಲ್ಲಿ ಮಧ್ಯಮ ಪುರುಷನಾಗಿಯೇ ಉಳಿದುಬಿಡುತ್ತಾನೆ. ಆಗ, ಅಲ್ಲಿಯೂ ಸಲ್ಲದೆ ಇಲ್ಲಿಯೂ ಸಲ್ಲದೆ ಅವನ ಜೀವನಕ್ಕೆ ಮದ್ಯವೇ ಗತಿಯಾಗುತ್ತದೆ.

ಅಮ್ಮನ ಮಾತು ಕೇಳದಿದ್ದರೆ ಅವಳು ಮಗನಿಗೆ ಡಿವೋರ್ಸನ್ನೇನೂ ಕೊಡುವುದಿಲ್ಲ. ಆದರೆ ಅದೇ ಮಗ ತನ್ನ ಹೆಂಡತಿಯ ಮಾತು ಕೇಳದಿದ್ದರೆ, ಡಿವೋರ್ಸ್ ಎಂಬ ಮಾತು ಕೇಳಬೇಕಾಗುತ್ತದೆ. ಅದರಲ್ಲೂ ಒಂದು ಮಗು ಆದ ಮೇಲೆ ಡಿವೋರ್ಸ್ ಕೇಳಿದರೆ, ಆ ಮಗುವನ್ನು ಗಂಡ– ಹೆಂಡತಿ ನಡುವೆ ಸಮಪಾಲು ಮಾಡಲಾಗದೇ ನ್ಯಾಯಾಧೀಶರು ಗೊಂದಲಕ್ಕೆ ಬೀಳುತ್ತಾರೆ. ‘ಇನ್ನೊಂದು ವರ್ಷ ಬಿಟ್ಟು ಇನ್ನೊಂದು ಮಗುವಿನ ಜೊತೆ ಕೋರ್ಟ್ಗೆ ಬನ್ನಿ, ಆಗ ಸರಿಯಾಗಿ ಪಾಲು ಮಾಡಬಹುದು’ ಎಂದು ಹೇಳಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಆದರೆ ಮರುವರ್ಷ ಅವಳಿ– ಜವಳಿ ಮಕ್ಕಳಾಗಿಬಿಟ್ಟರೆ ನ್ಯಾಯಾಧೀಶರಿಗೆ ಮತ್ತೆ ಅದೇ ತಲೆಬಿಸಿ ಅಲ್ಲವೇ? ಇಷ್ಟೆಲ್ಲಾ ರಾದ್ಧಾಂತ ಬೇಕೇ?

ಹಾಗಾಗಿ, ಸಂಸಾರದಲ್ಲಿ ಸಾರ ಇರಬೇಕೆಂದರೆ ಗಂಡನಾದವನು ಹೆಂಡತಿಯ ಮಾತುಗಳನ್ನು ಕೇಳಲೇಬೇಕು. ಯಾವುದೇ ತಪ್ಪು ಮಾಡದೆ, ಹೊಂದಾಣಿಕೆ ಎಂಬ ತೆಪ್ಪದ ಮೇಲೆ ತೆಪ್ಪಗೆ ಕುಳಿತು, ಹೆಂಡತಿಯ ಮಾತುಗಳೆಂಬ ಹುಟ್ಟಿನ ಸಹಾಯದಿಂದ, ಜೀವನವೆಂಬ ಸಾಗರದಲ್ಲಿ ಮುಂದೆ ತೇಲಬೇಕು. ಆಗ ಜೀವನದಲ್ಲಿ ಅವನು ಮುಂದೆ ಬರುವುದು ಶತಃಸಿದ್ಧ.

ಹೆಚ್ಚು ಫ್ಯಾಷನ್ಪ್ರಿಯರು– ಗಂಡಸರೋ? ಹೆಂಗಸರೋ?

– ಗಣೇಶ್ ಕಾರಂತ್

ಗಂಡಸರು– ಸಿಂಪಲ್ ಈಸ್ ಬೆಸ್ಟ್

ಒಬ್ಬ ಗಂಡಸು ಶಾಪಿಂಗ್ಗೆ ಹೋದ್ರೆ, 10 ಮಿನಿಟ್ ಸಾಕು. ಒಂದು ಜೀನ್ಸ್ ಎರಡು ಶರ್ಟ್– ಮಿಷನ್ ಕಂಪ್ಲೀಟ್.

ಅವರಿಗೆ ಫ್ಯಾಷನ್ ಅಂದರೆ ‘comb ಹಾಕೋದು’ ಅಷ್ಟೇ. ಹೇರ್ಫಾಲ್ ಆಗಿ ಹೇರ್ಸ್ಟೈಲ್ ಮಾಡೋಕೆ ಆಗದಿದ್ರೆ ಕ್ಯಾಪ್ ಹಾಕ್ಕೊಳ್ತಾರೆ. ನ್ಯೂ ಡಿಸೈನ್ ಬಗ್ಗೆ ನಾಲೆಜ್? ಝೀರೊ

ಹೆಂಗಸರು– ಫ್ಯಾಷನ್ ಈಸ್ ಪ್ಯಾಷನ್

ಹೆಂಗಸರ ಶಾಪಿಂಗ್ ಲಿಸ್ಟ್ನಲ್ಲಿ ಡ್ರೆಸ್ ಮಾತ್ರ ಅಲ್ಲ– ಜೊತೆಗೆ ಮ್ಯಾಚಿಂಗ್ ಇಯರಿಂಗ್ಸ್, ಬ್ಯಾಂಗಲ್ಸ್, ಹ್ಯಾಂಡ್ಬ್ಯಾಗ್ಸ್, ಸ್ಯಾಂಡಲ್ಸ್, ನೇಲ್ಪಾಲಿಷ್, ಲಿಪ್ಸ್ಟಿಕ್ ಶೇಡ್ಸ್, ಹೇರ್ಸ್ಟೈಲ್... ಅಬ್ಬಬ್ಬಾ! ಸೆಲ್ಫಿ ತೆಗೆದುಕೊಳ್ಳೋ ಲೈಟಿಂಗ್ ಮತ್ತೆ ಫಿಲ್ಟರ್ ಕೂಡ ಸರಿ ಹೊಂದಬೇಕು!

ಟ್ರೆಂಡ್ ಚೇಂಜ್ ಆಗ್ತಾ ಬಂದರೆ, ಇನ್ಸ್ಟಾಗ್ರಾಂ ರೀಲ್ಸ್ ಸ್ಕ್ರಾಲಿಂಗ್ ಮಾಡಿದ್ರೆ ಸಾಕು– 100 ಹೊಸ ಐಡಿಯಾಸ್ ಆಲ್ರೆಡಿ ಸೇವ್ ಆಗಿರುತ್ತವೆ!

ಕಲರ್ ವಿಷಯಕ್ಕೆ ಬಂದರೆ ಗಂಡಸರಿಗೆ ಕಲರ್ ಬ್ಲೈಂಡ್ನೆಸ್ ಇದೆ ಅನ್ನೋ ರೇಂಜ್ಗೆ ಹೆಂಗಸರು ಆಡ್ತಾರೆ. ಗಂಡಸರಿಗೆ ಬರೀ ಬ್ಲೂ ಕಲರ್ ಗೊತ್ತಿದ್ರೆ ಹೆಂಗಸರು ‘ನೇವಿ ಬ್ಲೂ, ರಾಯಲ್ ಬ್ಲೂ, ಸ್ಕೈ ಬ್ಲೂ, ಪಿಕಾಕ್ ಬ್ಲೂ... ಅಂತೆಲ್ಲಾ ಕಲರ್ ಡಿಫರೆನ್ಸ್ ಹೇಳಿ ತಲೆ ತಿಂದ್ಹಾಕಿಬಿಡ್ತಾರೆ.

ಫೈನಲ್ ವರ್ಡಿಕ್ಟ್

ಫ್ಯಾಷನ್ಪ್ರಿಯತೆ ಬಗ್ಗೆ ಮಾತನಾಡೋದಕ್ಕೆ ಬಂದರೆ

ಗಂಡಸರು– 2 ಆಪ್ಷನ್: ಶರ್ಟ್ ಅಥವಾ ಟಿ-ಶರ್ಟ್.
ಹೆಂಗಸರು– 2000 ಆಪ್ಷನ್: ಎವೆರಿ ಮೂಡ್ಗೆ ಒಂದು ಡ್ರೆಸ್ ಕೋಡ್!

ಹೀಗಾಗಿ ನಿರ್ಣಯ ಕ್ಲಿಯರ್; ಹೆಂಗಸರೇ ಫ್ಯಾಷನ್ ಲವರ್ಸ್. ಗಂಡಸರು? ಫ್ಯಾಷನ್ ವಿಷಯದಲ್ಲಿ ‘ಸೈಲೆಂಟ್ ಅಬ್ಸರ್ವರ್ಸ್’ ಮಾತ್ರ.

– ಪ್ರೀತಿ ಸಂಗಮ್

ಫ್ಯಾಷನ್ ವಿಷಯದಲ್ಲಿ ಮಹಿಳೆಯರಿಗೆ ಇರುವಷ್ಟು ಆಯ್ಕೆಗಳು ಪುರುಷರಿಗೆ ಇಲ್ಲದಿದ್ದರೂ ಇದ್ದಷ್ಟು ಸೌಲಭ್ಯಗಳಲ್ಲೇ ಮಹಿಳೆಯರಿಗೆ ಸಡ್ಡು ಹೊಡೆಯುವಂತೆ ಇರುತ್ತದೆ ಪುರುಷರ ಫ್ಯಾಷನ್.

ಕೆಲವು ಪುರುಷರ ಕೇಶ ವಿನ್ಯಾಸ ನೋಡಿದರೆ, ಇತಿಹಾಸ ಮರುಕಳಿಸಿರುವುದು ಸ್ಪಷ್ಟವಾಗುತ್ತದೆ. ತ್ರೇತಾಯುಗದ ರಾಮ, ದ್ವಾಪರಯುಗದ ಕೃಷ್ಣನಂತೆ ಭುಜದವರೆಗೂ ಕೂದಲು ಇಳಿಬಿಟ್ಟು, ‘ನನ್ನ ಜೀವನ, ನನ್ನ ಕೂದಲು, ನನ್ನ ನಿರ್ಧಾರ, ನನ್ನ ಕಾರ್ತಿಕಾ’ (ಕಾರ್ತಿಕಾ ಶ್ಯಾಂಪೂ ಜಾಹೀರಾತು) ಎನ್ನುವಂತೆ ಗಾಳಿಯಲ್ಲಿ ಕೂದಲನ್ನು ಹಾರಾಡಿಸ್ಕೊಂಡು ನಡೆಯುವಾಗ, ಅವರ ತಲೆಯಲ್ಲಿರುವ ಹೊಟ್ಟು ಅದೆಷ್ಟು ಜನರ ಮೇಲೆ ಹಾರಿರುತ್ತೋ. ಇವರಲ್ಲೇ ಕೆಲವರು ಆ ಕೂದಲನ್ನು ಬಾಚಿ, ರಬ್ಬರ್ಬ್ಯಾಂಡ್ ಹಾಕಿ ಕಟ್ಟಿದ ಪೋನಿಟೇಲ್ ಅನ್ನು ನೋಡಿದ ಪೋನಿ ಸಹ ನಾಚಿ ನೀರಾಗದಿದ್ದರೆ ಕೇಳಿ.

ಇನ್ನು ಚಾಣಕ್ಯ ವಿಥೌಟ್ ಚಂಡಿಕೆ ಹೇರ್ಸ್ಟೈಲ್ ಮಾಡಿಸಿಕೊಂಡವರಂತೂ ನಿಜಕ್ಕೂ ಬೇಗ ಸಿರಿವಂತರಾಗುತ್ತಾರೆ. ಏಕೆಂದರೆ ಕೂದಲಿಗೆ ಬೇಕಾದ ನೀರು, ಎಣ್ಣೆ, ಶ್ಯಾಂಪೂ, ಕಂಡೀಷನರ್, ತಿಂಗಳಿಗೊಮ್ಮೆ ಹೇರ್ಕಟ್ ಮಾಡಿಸುವ ಯಾವ ಉಸಾಬರಿಯೂ ಇಲ್ಲದೆ ಅವರ ಜೇಬಿಗೆ ಕತ್ತರಿ ಬೀಳುವುದು ತಪ್ಪುತ್ತದೆ. ಹಾಗಾಗಿ, ಸರ್ಕಾರ ಇಂತಹವರಿಂದ ಜಾಸ್ತಿ ಟ್ಯಾಕ್ಸ್ ವಸೂಲಿ ಮಾಡಲೇಬೇಕು.

ಇನ್ನು ಕೆಲವರು ನಾರ್ಮಲ್ ಹೇರ್ಕಟ್ ನಡುವೆಯೇ ಒಂದು ಚಿಕ್ಕ ಭಾಗದಲ್ಲಿ ನೇರ ರೇಖೆ, ಓರೆ ರೇಖೆ, ಅಂಕುಡೊಂಕು ರೇಖೆ, ಕೋನ, ತ್ರಿಕೋನ ಎಲ್ಲವನ್ನೂ ಬಿಡಿಸಿಕೊಂಡು, ರೇಖಾಗಣಿತದ ಮೇಲಿನ ತಮ್ಮ ವ್ಯಾಮೋಹವನ್ನು ಪ್ರದರ್ಶಿಸುತ್ತಾರೆ. ಇವರನ್ನು ನೋಡಿದರೆ, ರೇಖಾಗಣಿತದ ಪಿತಾಮಹ ಯೂಕ್ಲಿಡ್ನ ಕುಟುಂಬದವರನ್ನು ನೋಡಿದ ಹಾಗೆನಿಸಿ ಅವರಿಗೆ ಕೈ ಮುಗಿಯಬೇಕೆನಿಸುತ್ತದೆ! ಕೆಲವರ ಕೂದಲಂತೂ ಕರೆಂಟ್ ಶಾಕ್ ಹೊಡೆಸಿಕೊಂಡಂತೆ ಆಕಾಶಕ್ಕೆ ಮುಖ ಮಾಡಿ ನಿಂತಿರುತ್ತದೆ. ಕೂದಲಿಗೆ ಜೆಲ್ ಹಾಕಿ ಹಾಗೆ ನಿಲ್ಲಿಸುವುದು ಒಂದು ಫ್ಯಾಷನ್ ಅಂತೆ. ಅಂಥವರ ಕೂದಲನ್ನು ಮುಟ್ಟಿ ನೋಡಿ, ನಿಮಗೂ ಶಾಕ್ ಹೊಡೆಯಬಹುದು.

ಪುರುಷರು ನಿಜಕ್ಕೂ ವಿನ್ಯಾಸಪ್ರಿಯರು ಅನ್ನಿಸುತ್ತೆ. ಅವರ ಗಡ್ಡವೂ ಹಲವಾರು ವಿನ್ಯಾಸಗಳಿಂದ ಕಂಗೊಳಿಸುತ್ತದೆ. ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡಾದರೆ, ಚಿತ್ರ ವಿಚಿತ್ರ ಮೀಸೆ ಹೊತ್ತವರಿಗೆ ಡಬಲ್ ಡಿಮ್ಯಾಂಡು.

ಹಾರ್ಸ್ಶೂ ಮ್ಯಾಗ್ನೆಟ್ ನೋಡಿದ್ದೀರಾ? ಇದು ಇಂಗ್ಲಿಷ್ನ ಉಲ್ಟಾ ಯು ಶೇಪ್ನಲ್ಲಿ ಇರುತ್ತದೆ. ಇದನ್ನು ಪುರುಷರ ಮೂಗಿನ ಕೆಳಗೂ ಕಾಣಬಹುದು. ಹೌದು, ಇದಕ್ಕೆ ಹಾರ್ಸ್ಶೂ ಮುಸ್ಟಾಶ್ ಎಂದೇ ಕರೆಯುತ್ತಾರೆ. ಇಂತಹ ಮೀಸೆ ಇರುವವರು ಕಬ್ಬಿಣಾಂಶವಿರುವ ಆಹಾರವನ್ನು ಹುಷಾರಾಗಿ ತಿನ್ನಬೇಕು. ಇಲ್ಲದಿದ್ದರೆ ಈ ಹಾರ್ಸ್ಶೂ ಮುಸ್ಟಾಶ್, ಆಹಾರವನ್ನು ಬಾಯಿಗೆ ಬಿಡದೆ ಗಬಕ್ಕನೆ ತಾನೇ ಎಳೆದುಕೊಂಡುಬಿಡಬಹುದು! ಅದರಂತೆ ಮೋಟರ್ ಸೈಕಲ್ನ ಹ್ಯಾಂಡಲ್ ಬಾರ್ ಅನ್ನೂ ಮೀಸೆಯ ವಿನ್ಯಾಸದಲ್ಲಿ ಕಾಣಬಹುದು. ಹಾಗಂತ ಅದಕ್ಕೆ ಏನಾದರೂ ತೂಗು ಹಾಕಬೇಡಿ ಮತ್ತೆ.

ಇನ್ನು ಹುಡುಗರ ಉಡುಪಿನ ವಿಷಯಕ್ಕೆ ಬಂದರೆ ಪಾಪ, ಅವರು ಏನೇ ಫ್ಯಾಷನ್ ಮಾಡಿದರೂ ಅದೇ ಪ್ಯಾಂಟ್, ಅದೇ ಶರ್ಟ್, ಅದೇ ಬರ್ಮುಡಾ. ವಾಶ್ರೂಮ್ಗೂ ಸೈ, ಮಾರ್ಕೆಟ್ಗೂ ಸೈ, ಟೆಂಪಲ್ಗೂ ಸೈ, ಮಕ್ಕಳ ಶಾಲೆಗೂ ಸೈ, ಆಫೀಸ್ಗೆ ಕೂಡ ಸೈ ಎನ್ನುತ್ತ ಸರ್ವಕಾಲಕ್ಕೂ ಸರ್ವಸ್ಥಳಕ್ಕೂ ಬರ್ಮುಡಾಗೆ ಜೈ ಎನ್ನುವುದು ಈಗ ಪುರುಷರಲ್ಲಿ ಒಂದು ಫ್ಯಾಷನ್ ಆಗಿಬಿಟ್ಟಿದೆ. ಆದರೇನಂತೆ, ಇದ್ದುದರಲ್ಲಿಯೇ ಮ್ಯಾಜಿಕ್ ಮಾಡುವ ಲಾಜಿಕ್ ಅವರಿಗೆ ಗೊತ್ತಿದೆ. ಹಾಗಾಗಿಯೇ ‘ಓಲ್ಡ್ ಈಸ್ ಗೋಲ್ಡ್’ ಎನ್ನುವಂತೆ ರೆಟ್ರೋ ಲುಕ್ ಮತ್ತೆ ಬಂದಿದೆ. ರೆಟ್ರೋಗೆ ಮೆಟ್ರೋ ಟಚ್ ಕೊಟ್ಟು, ಹೊಸ ವಿನ್ಯಾಸದ ದಿರಿಸುಗಳಾದ ಪ್ಯಾಂಟ್ಗೆ ಗಂಟೆ ಕಟ್ಟಿದ ಬೆಲ್ ಬಾಟಮ್ ಪ್ಯಾಂಟ್, ಪೋಲ್ಕಾ ಡಾಟೆಡ್ ಶರ್ಟ್, ಪ್ಯಾಂಟ್ ಕೆಳಗೆ ಜಾರಿ ಬೀಳದಂತೆ ನೋಡಿಕೊಳ್ಳುವ ಸಸ್ಪೆಂಡರ್, ‘ಪಾತರಗಿತ್ತಿ ಪಕ್ಕ ನೋಡಿರೇನ ಅಕ್ಕಾ’ ಎಂದು ಕೇಳುವ ಬೋ ಟೈ ಎಲ್ಲ ಮರುಹಾಜರಿ ಹಾಕಿವೆ.

ಮೊದಲೇ ಒರಟು ಒರಟಾಗಿ ಕಾಣುವವರು ಮತ್ತಷ್ಟು ಒರಟಾಗಿ ಕಾಣಲು ‘ರಗಡ್ ಲುಕ್’ ಎಂಬ ಸ್ಟೈಲ್ ಬೇರೆ ಬಂದಿದೆ. ಇದರಲ್ಲಿ ಟ್ರೇನ್, ಬಸ್ ಸೀಟಿಗೆ ಹಾಕುವಂತಹ, ಅದೆಷ್ಟೋ ಕೆ.ಜಿ ತೂಕವುಳ್ಳ ದಪ್ಪ ಲೆದರ್ ಜಾಕೆಟ್, ಅದಕ್ಕೆ ತಕ್ಕಂತೆ ಪ್ಯಾಂಟ್, ಶರ್ಟುಗಳ ಡಿಸೈನ್!

ಮೈಮೇಲೆ ಟ್ಯಾಟೂ, ಹುಬ್ಬಿಗೆ, ಕಿವಿಗೆ ರಿಂಗ್... ಅಬ್ಬಬ್ಬಾ! ಪುರುಷರ ಫ್ಯಾಷನ್ ಒಂದೇ ಎರಡೇ! ಫ್ಯಾಷನ್ನಲ್ಲಿ ಮಹಿಳೆಯರಿಗೆ ಪೈಪೋಟಿ ನೀಡುವುದರಲ್ಲಿ ಪುರುಷರು ಒಂದು ಹೆಜ್ಜೆ ಮುಂದೆಯೇ ಇದ್ದಾರೆ ಎನ್ನುವುದನ್ನು ಸಾಬೀತುಪಡಿಸಲು ಇನ್ನೆಷ್ಟು ಪುರಾವೆ ಬೇಕು ನಿಮಗೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.