ಕೃಷಿ ಮತ್ತು ಕಲೆ ಇಲ್ಲದಿದ್ದರೆ ಮನುಷ್ಯನ ಅಸ್ತಿತ್ವ ಸಪ್ಪೆ. ಹೊಟ್ಟೆ ತುಂಬಬೇಕಾದರೆ ಕೃಷಿ ಬೇಕೇಬೇಕು. ಮನಸ್ಸು ಸಂತೃಪ್ತವಾಗಬೇಕಾದರೆ ಕಲೆ ಬೇಕು. ಹೊಟ್ಟೆ ಮತ್ತು ಮನಸ್ಸು ತುಂಬಿದರೆ ಜೀವನ ಸಾರ್ಥಕವಾಗುತ್ತದೆ. ಕೃಷಿ ಸಂಸ್ಕೃತಿಯ ಭಾಗವಾಗಿ ಇಲ್ಲಿ ಗೋವುಗಳನ್ನು ಸಾಕುತ್ತೇವೆ. ಕಲೆಯನ್ನೂ ಪೋಷಿಸುತ್ತೇವೆ. ಕಲಾವಿದರಿಗೆ ವೇದಿಕೆ ಮತ್ತು ಕಲೆಗೆ ಪ್ರೇರಣೆಯಾಗಲು ಸಾಧ್ಯವಾದದ್ದರಲ್ಲಿ ಖುಷಿ ಇದೆ.
– ವಿಷ್ಣುಪ್ರಸಾದ್ ಹೆಬ್ಬಾರ್ ಗೋಕುಲಂ ಗೋಶಾಲೆಯ ಸ್ಥಾಪಕ
ಗೋಕುಲಂ ಗೋಶಾಲೆಯ ಕಾರ್ಯಕ್ರಮ ಸಂಘಟಕರು ಮಾಡುತ್ತಿರುವ ಸಂಗೀತ ಸೇವೆ ಅನುಕರಣೀಯ. ಜನರಿಗೆ ರಂಜನೆಯ ಜೊತೆಯಲ್ಲಿ ವಿಭಿನ್ನ ಅನುಭವ ಸಿಗುವ ಸ್ಥಳ ಅದು. ಅದು ಕಲಾವಿದರಿಗೆ ಅಂತರಾತ್ಮದತ್ತ ಇಣುಕಿ ನೋಡಲು ನೆರವಾಗುವ ಕಾರ್ಯಕ್ರಮ. ಅಂಥ ಜಾಗದಲ್ಲಿ ಪ್ರದರ್ಶನ ನೀಡುವುದು ಭಾಗ್ಯವೇ ಸರಿ.
ಚಾರುಲತಾ ರಾಮಾನುಜಂ ಕಲಾವಿದೆ
ಗೋಕುಲಂ ಗೋಶಾಲೆಯಲ್ಲಿ ಕಾರ್ಯಕ್ರಮ ನೀಡುವುದು ಹೆಮ್ಮೆಯ ವಿಷಯ. ಸಂಘಟಕನಾಗಿರುವ ನನಗೆ ಗೋಕುಲಂ ಗೋಶಾಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸುವ ವಿಧಾನ ಅಚ್ಚರಿ ಹುಟ್ಟಿಸಿದೆ. ಕಲಾವಿದರನ್ನು ಕರೆದು ಸಂಗೀತ ಸೇವೆಗೆ ಅವಕಾಶ ಒದಗಿಸುವುದರ ನಡುವೆ ಕಲಾಸಕ್ತರಿಗೆ ವೈವಿಧ್ಯಮಯ ಸಂಗೀತದ ಆಸ್ವಾದನೆಗೆ ವೇದಿಕೆ ಒದಗಿಸುತ್ತಿರುವುದು ವಿಶೇಷ.