ಮಂಗಳವಾರ, ನವೆಂಬರ್ 24, 2020
26 °C

ನಾನು ಓದಿದ ಪುಸ್ತಕ: ಶಿವಾಜಿ ಶೌರ್ಯದ ನೆನಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾನು ಓದಿದ ಪುಸ್ತಕ ‘ಶಿವಾಜಿ ಯಾರು?’. ಇದನ್ನು ಮರಾಠಿಯಿಂದ ಕನ್ನಡಕ್ಕೆ ಲೇಖಕ ಚಂದ್ರಕಾಂತ ಪೋಕಳೆ ಅನುವಾದಿಸಿದ್ದಾರೆ. ‌

ಛತ್ರಪತಿ ಶಿವಾಜಿ ಪರಂಪರೆಯಿಂದ ಬಂದ ಅರಸೊತ್ತಿಗೆ ವಾರಸುದಾರ ಹಕ್ಕಿನಿಂದಾಗಿ ರಾಜನಾಗಿರಲಿಲ್ಲ. ಮಾವಳಿಗರೆಂಬ ದನಗಾಹಿಗಳನ್ನು ಸಂಘಟನೆ ಮಾಡಿ ಹೊಸ ಸಾಮ್ರಾಜ್ಯ ಕಟ್ಟಿದ ಮೇರುಪುರುಷ. ಗದಗಿನ ಲಕ್ಕೋಜಿ ಜಾಧವರ ಮಗಳು ಜೀಜಾಭಾಯಿ ಶಿವಾಜಿಯ ತಾಯಿ. ತಾಯಿಯಿಂದ ಶೌರ್ಯ, ಧೈರ್ಯ, ಸಾಹಸ ಗುಣಗಳನ್ನು ಬಾಲ್ಯದಲ್ಲಿಯೆ ಕಲಿತರು. ಪುಣೆ ಜಹಗೀರು ಪ್ರಾಂತ್ಯ ನೋಡಿಕೊಳ್ಳುತ್ತಿದ್ದ ಶಿವಾಜಿಯ ತಂದೆ ಶಹಜಿ ಭೌನ್ಸಲೆ ಮತ್ತು ಗುರು ದಾದಾಜಿ ಕೊಂಡದೇವ ಅವರ ಉದಾತ್ತ ಗುಣಧರ್ಮಗಳು ಬಾಲಕ ಶಿವಾಜಿಯಲ್ಲಿ ಬೆಳೆದವು.

ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಿದರು. ಬೆಂಗಳೂರಿನಲ್ಲಿ ಬಾಲ್ಯ ಕಳೆದ ಶಿವಾಜಿಯ ನೆನಪು ಈ ಪುಸ್ತಕದಲ್ಲಿ ವರ್ಣಿತವಾಗಿದೆ.

ಕಲ್ಪನಾ ಎಂ.ಆರ್‌., ಮತ್ತಿಕೆರೆ, ಮಾಗಡಿ ತಾಲ್ಲೂಕು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು