ಲೇಖಕಿಯವರ ಬಾಲ್ಯದ ನೆನಪುಗಳು, ಬೆಳವಣಿಗೆ, ಶಿಕ್ಷಣ, ವೃತ್ತಿ ಬದುಕು ಇತ್ಯಾದಿ ಅವರ ಆತ್ಮಕಥನ ಭಾಗದಲ್ಲಿವೆ. ಕ್ಯಾನ್ಸರ್ ಕುತ್ತಿನಿಂದ ಪಾರಾದ ಸನ್ನಿವೇಶವಂತೂ ಮನಸ್ಸು ತಟ್ಟುತ್ತದೆ. ಕವನಗಳನ್ನು ಬರೆಯುತ್ತಿದ್ದ ಲೇಖಕಿ ಮುಂದೆ ಪ್ರಚಲಿತ ವಿಷಯಗಳ ಬಗ್ಗೆ ಪ್ರಬಲವಾಗಿ ಧ್ವನಿಯೆತ್ತುವ, ಅನ್ಯಾಯದ ವಿರುದ್ಧ ಪ್ರತಿಭಟಿಸುವ, ಸಿಡಿದೇಳುವ ಗುಣವನ್ನು ಬೆಳೆಸಿಕೊಂಡ, ಅದನ್ನು ಪ್ರಜಾವಾಣಿ ಸಹಿತ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಅಭಿವ್ಯಕ್ತಿಸಿದ ಬಗೆಗೂ ವಿವರಗಳಿವೆ. ನಾಡಿನ ಗಣ್ಯರ, ಖ್ಯಾತನಾಮರ, ಮಠಾಧೀಶರ ನುಡಿಗಳೂ ಕೃತಿಯಲ್ಲಿವೆ.