ಮಂಗಳವಾರ, ಜೂನ್ 2, 2020
27 °C
ಡಿಜಿಟಲ್ ರೂಪದಲ್ಲಿ ಮಾಯಾ ಕಥಕ್‌ ಕಾನ್ಫರೆನ್ಸ್

ಕೊರೊನಾ ಪ್ರಭಾವ: ಜನಪದ ಕಲಾವಿದರ ನೆರವಿಗೆ ನೃತ್ಯ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಬಡ ಜನಪದ ಕಲಾವಿದರಿಗೆ ನೆರವಾಗಲು ಮಲ್ಲೇಶ್ವರದ ನಾಟ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಕಥಕ್‌ ಆ್ಯಂಡ್‌ ಕೋರಿಯಾಗ್ರಫಿ ಸಂಸ್ಥೆ (ಎನ್‌ಐಕೆಸಿ) ಮುಂದೆ ಬಂದಿದೆ. 

ಲಾಕ್‌ಡೌನ್‌ನಿಂದಾಗಿ ಎಲ್ಲ ಸಭೆ, ಸಮಾರಂಭ, ಸಾಂಸ್ಕೃತಿಕ ಚಟುವಟಿಕೆಗಳು ರದ್ದುಗೊಂಡ ಕಾರಣ  ಗ್ರಾಮೀಣ ಭಾಗಗಳ ಜನಪದ ಕಲಾವಿದರ ಬದುಕು ದುಸ್ತರವಾಗಿದೆ.

ಪ್ರದರ್ಶನ ಕಲೆಗಳ ಮೂಲಕ ಹೊಟ್ಟೆ ಹೊರೆಯುತ್ತಿದ್ದ ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ, ಕಂಸಾಳೆ, ಚೌಡಕಿ ಪದ, ಕರಡಿ ಕುಣಿತದ ಕಲಾವಿದರು ಸೇರಿದಂತೆ ಗ್ರಾಮೀಣ ಭಾಗದ ನೂರಾರು ಕಲಾವಿದರು ಮತ್ತು ಅವರನ್ನು ಅವಲಂಬಿಸಿರುವ ಕುಟುಂಬ ಸದಸ್ಯರು ಕಷ್ಟಕ್ಕೆ ಸಿಲುಕಿದ್ದಾರೆ.

ಇಂಥ ಕಲಾವಿದರ ಸ್ಥಿತಿಗತಿ ಕುರಿತು ಚರ್ಚಿಸಲು ಮತ್ತು ಅವರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ನಾಟ್ಯ ಇನ್‌ಸ್ಟಿಟ್ಯೂಟ್‌ ಮೇ 1 ಮತ್ತು 2ರಂದು ‘ಡಾ. ಮಾಯಾ ರಾವ್‌ ಕಥಕ್‌ ಮತ್ತು ಕೋರಿಯಾಗ್ರಫಿ ವಾರ್ಷಿಕ ನೃತ್ಯ ಸಮಾವೇಶ’ ಏರ್ಪಡಿಸಿದೆ.

ಖ್ಯಾತ ನೃತ್ಯಗುರು ದಿ. ಮಾಯಾ ರಾವ್‌ ಅವರ ಸ್ಮರಣಾರ್ಥ ಪ್ರತಿವರ್ಷ ನಾಟ್ಯ ಇನ್‌ಸ್ಟಿಟ್ಯೂಟ್‌ ವಾರ್ಷಿಕ ಡಾನ್ಸ್‌ ಸಮಾವೇಶ ಆಯೋಜಿಸುತ್ತಿದೆ. ಆದರೆ, ಕೊರೊನಾ ಕಾರಣದಿಂದಾಗಿ ಈ ಬಾರಿಯ ಸಮಾವೇಶ ‘ಡಿಜಿಟಲ್‌ ಅವತಾರ’ ತೆಳೆದಿದೆ.

ಎರಡು ದಿನವೂ ಸಂಜೆ 6ರಿಂದ ರಾತ್ರಿ 8 ಗಂಟೆವರೆಗೆ ಝೂಮ್ ಮತ್ತು ಫೇಸ್‌ಬುಕ್‌ ಲೈವ್‌ನಲ್ಲಿ  ಸಮಾವೇಶ ಬಿತ್ತರಗೊಳ್ಳಲಿದೆ. ‘ಕಲೆ ಮತ್ತು ಕಲಾವಿದರ ಬದುಕಿನ ಮೇಲೆ ಕೋವಿಡ್‌–19 ಪರಿಣಾಮ’  ವಿಷಯದ ಕುರಿತು ಚರ್ಚಾಗೋಷ್ಠಿ ಸೇರಿದಂತೆ ಸಂವಾದ, ಸಾಕ್ಷ್ಯಚಿತ್ರ ಮತ್ತು ಕಥಕ್‌ ನೃತ್ಯ ಪ್ರದರ್ಶನ ನಡೆಯಲಿದೆ.   

ಹತ್ತು ಕಲಾವಿದರಿಗೆ ನೆರವಿನ ಹಸ್ತ
ದಾನಿಗಳಿಂದ ಆರು ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸುವ ಗುರಿ ಇದ್ದು, ಈಗಾಗಲೇ ಡಿಜಿಟಲ್‌ ಫಂಡ್‌ ರೈಸಿಂಗ್‌ ಪ್ಲಾಟ್‌ಫಾರ್ಮ್‌ನಲ್ಲಿ ಹಣ ಸಂಗ್ರಹಿಸುತ್ತಿದ್ದೇವೆ. ತೀರಾ ಕಷ್ಟದಲ್ಲಿರುವ ಹತ್ತು ಜನಪದ ಕಲಾವಿದರ ಕುಟುಂಬಗಳನ್ನು ಜನಪದ ಕಲಾ ತಜ್ಞೆ ಸ್ನೇಹಾ ಕಪ್ಪಣ್ಣ ಅವರ ನೆರವಿನಿಂದ ಗುರುತಿಸಿದ್ದೇವೆ. ಬಂದ ಹಣವನ್ನು ಮುಂದಿನ ಐದು ತಿಂಗಳು ಈ ಹತ್ತು ಕುಟುಂಬಗಳಿಗೆ ನೆರವು ನೀಡಲು ವಿನಿಯೋಗಿಸಲಾಗುವುದು. ಒಂದು ವೇಳೆ ಹೆಚ್ಚಿನ ದೇಣಿಗೆ ಸಂಗ್ರಹವಾದರೆ ಕಷ್ಟದಲ್ಲಿರುವ ಮತ್ತಷ್ಟು ಕಲಾವಿದರನ್ನು ಗುರುತಿಸಿ ನೆರವು ನೀಡಲಾಗುವುದು ಎಂದು  ನಾಟ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಕಥಕ್‌ ಆ್ಯಂಡ್‌ ಕೋರಿಯಾಗ್ರಫಿ ಸಂಸ್ಥೆಯ ರಮ್ಯಾ ನಾಗರಾಜ್‌ ‘ಮೆಟ್ರೊ’ಗೆ ತಿಳಿಸಿದರು.

ಕೋವಿಡ್‌ ಪ್ರಭಾವ: ಡಿಜಿಟಲ್‌ ಕಾರ್ಯಕ್ರಮ
‘ಕೋವಿಡ್‌–19 ನಂತರದ ದಿನಗಳಲ್ಲಿ ಪ್ರದರ್ಶನ ಕಲೆಗಳು ಮತ್ತು ಕಲಾವಿದರ ಸ್ಥಿತಿಗತಿ’ ಕುರಿತು ಚರ್ಚೆ, ಸಂವಾದದೊಂದಿಗೆ ಸಮಾವೇಶಕ್ಕೆ ಚಾಲನೆ ದೊರೆಯಲಿದೆ. ಲಿನೆ ಫರ್ನಾಂಡಿಸ್‌, ಮಹೇಶ್‌ ದತ್ತಾನಿ,ಶಿವಾನಿ ವಜೀರ್‌, ಮಧು ನಟರಾಜ್‌ ಸೇರಿದಂತೆ ನಾಡಿನ ಅನೇಕ ಕಲಾವಿದರು ಇದರಲ್ಲಿ ಭಾಗವಹಿಸಲಿದ್ದಾರೆ.

ಜನಪದ ಕಲೆಗಳ ತಜ್ಞೆ ಸ್ನೇಹಾ ಕಪ್ಪಣ್ಣ ನಿರ್ದೇಶನದ ‘ಕರುನಾಡಿನದ ಅಪರೂಪದ ಜನಪದ ಮತ್ತು ಪ್ರದರ್ಶನ ಕಲೆಗಳು’ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ.

ಕಥಕ್ ಗುರು ಮಾಯಾ ರಾವ್‌ ಅವರ ನೃತ್ಯ ಬದುಕಿನ ಪಯಣದ ಕುರಿತು ‘ಮಾಯಾ ಟು ಮ್ಯಾಟರ್‌’ ಸಾಕ್ಷ್ಯಚಿತ್ರ ಪ್ರದರ್ಶನದೊಂದಿಗೆ ಎರಡನೇ ದಿನದ ಕಾರ್ಯಕ್ರಮಗಳು ಆರಂಭವಾಗಲಿವೆ.  

‘ಬದಲಾಗುತ್ತಿರುವ ನೃತ್ಯದ ದೃಷ್ಟಿಕೋನ’ ಕುರಿತ ಚರ್ಚಾಗೋಷ್ಠಿಯಲ್ಲಿ ತಜ್ಞರಾದ ರಾಜೀವ್‌ ಮೆನನ್‌, ಶಿವರಾಜ್‌ ನಟರಾಜನ್‌, ಶ್ರೀದೇವಿ ದೇಶಪಾಂಡೆ ಪುರಿ ಮತ್ತು ಡಾ. ಅನಿತಾ ರತ್ನಂ ಭಾಗವಹಿಸಲಿದ್ದಾರೆ.

ದೈಹಿಕ ನ್ಯೂನತೆಯುಳ್ಳ ಕಲಾವಿದರು ಗಾಲಿ ಖುರ್ಚಿಗಳ ಮೇಲೆ ಪ್ರದರ್ಶಿಸುವ ನೃತ್ಯದ ಕುರಿತ ‘ಡಾನ್ಸಿಂಗ್‌ ವ್ಹೀಲ್ಸ್‌’ ಸಾಕ್ಷ್ಯಚಿತ್ರದೊಂದಿಗೆ ಸಮಾವೇಶಕ್ಕೆ ತೆರೆ ಬೀಳಲಿದೆ. ಖ್ಯಾತ ನೃತ್ಯಪಟು ಸೈಯದ್‌ ಸಲಾಲುದ್ದಿನ್‌ ಪಾಶಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಎರಡು ದಿನವೂ ವಿವಿಧ ಕಲಾವಿದರಿಂದ ಕಥಕ್‌ ನೃತ್ಯ ಪ್ರದರ್ಶನ ಇರುತ್ತದೆ. 

ಡಿಜಿಟಲ್‌ ಕಾರ್ಯಕ್ರಮ
ನಾಟ್ಯ ಸಂಸ್ಥೆಯ ಉಪಾಧ್ಯಕ್ಷೆ ಡಾ. ಅನಿತಾ ರತ್ನಂ ಭಾಷಣ ಮತ್ತು ಅಹಮದಾಬಾದ್‌ನ ಅದಿತಿ ಮಂಗಲದಾಸ್‌ ನೃತ್ಯದೊಂದಿಗೆ ಸಮಾವೇಶಕ್ಕೆ ಚಾಲನೆ ದೊರೆಯಲಿದೆ.

‘ಕೋವಿಡ್‌–19 ನಂತರದ ದಿನಗಳಲ್ಲಿ ಪ್ರದರ್ಶನ ಕಲೆಗಳು ಮತ್ತು ಕಲಾವಿದರ ಸ್ಥಿತಿಗತಿ’ ಕುರಿತು ಚರ್ಚೆ, ಸಂವಾದದದಲ್ಲಿ ಲಿನೆ ಫರ್ನಾಂಡಿಸ್‌, ಮಹೇಶ್‌ ದತ್ತಾನಿ,ಶಿವಾನಿ ವಜೀರ್‌, ಮಧು ನಟರಾಜ್‌  ಭಾಗವಹಿಸಲಿದ್ದಾರೆ. ಜನಪದ ಕಲೆಗಳ ತಜ್ಞೆ ಸ್ನೇಹಾ ಕಪ್ಪಣ್ಣ ನಿರ್ದೇಶನದ ‘ಕರುನಾಡಿನದ ಅಪರೂಪದ ಜನಪದ ಮತ್ತು ಪ್ರದರ್ಶನ ಕಲೆಗಳು’ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ.

ಕಥಕ್ ಗುರು ಮಾಯಾ ರಾವ್‌ ಅವರ ನೃತ್ಯ ಬದುಕಿನ ಪಯಣದ ಕುರಿತು ‘ಮಾಯಾ ಟು ಮ್ಯಾಟರ್‌’ ಸಾಕ್ಷ್ಯಚಿತ್ರ ಪ್ರದರ್ಶನದೊಂದಿಗೆ ಎರಡನೇ ದಿನದ ಕಾರ್ಯಕ್ರಮಗಳು ಆರಂಭವಾಗಲಿವೆ.  

‘ಬದಲಾಗುತ್ತಿರುವ ನೃತ್ಯದ ದೃಷ್ಟಿಕೋನ’ ಕುರಿತ ಚರ್ಚಾಗೋಷ್ಠಿಯಲ್ಲಿ ತಜ್ಞರಾದ ರಾಜೀವ್‌ ಮೆನನ್‌, ಶಿವರಾಜ್‌ ನಟರಾಜನ್‌, ಶ್ರೀದೇವಿ ದೇಶಪಾಂಡೆ ಪುರಿ ಮತ್ತು ಡಾ. ಅನಿತಾ ರತ್ನಂ ಭಾಗವಹಿಸಲಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು