ಅಂತರ್ಜಾಲದಲ್ಲಿ ಎ.ಆರ್.ಕೃಷ್ಣಶಾಸ್ತ್ರಿ ಕೃತಿಗಳು

7

ಅಂತರ್ಜಾಲದಲ್ಲಿ ಎ.ಆರ್.ಕೃಷ್ಣಶಾಸ್ತ್ರಿ ಕೃತಿಗಳು

Published:
Updated:
Prajavani

ಕನ್ನಡ ಸೇನಾನಿ ಪ್ರೊ.ಎ.ಆರ್. ಕೃಷ್ಣಶಾಸ್ತ್ರಿ ರಚಿಸಿರುವ ಕೆಲ ಆಯ್ದ ಕೃತಿಗಳನ್ನು ಗಣಕೀಕರಣಗೊಳಿಸಿ ಅಂತರ್ಜಾಲ ತಾಣಕ್ಕೆ ಸೇರಿಸುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಗುವುದು.

ಕನ್ನಡ ಸಾಹಿತ್ಯ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ ಈ ಕಾರ್ಯಕ್ಕೆ ಚಾಲನೆ ದೊರೆಯಲಿದ್ದು, ಪ್ರಪಂಚದಾದ್ಯಂತ ಕನ್ನಡಿಗರು ಉಚಿತವಾಗಿ ಓದಬಹುದಾಗಿದೆ. 

ಕೃಷ್ಣಶಾಸ್ತ್ರಿ ಅವರ ಕೃತಿಗಳಾದ ವಚನಭಾರತ, ಕಥಾಮೃತ, ನಿರ್ಮಲಭಾರತಿ, ಬಂಕಿಮಚಂದ್ರ: ಭಾಷಣಗಳು  ಮತ್ತು ಲೇಖನಗಳು, ಶ್ರೀಪತಿಯ ಕಥೆಗಳು, ಸಂಸ್ಕೃತ ನಾಟಕ, ಸರ್ವಜ್ಞ ಕವಿ, ಭಾಸಕವಿ, ಗದಾಯುದ್ಧ ನಾಟಕ ಮತ್ತು ಅದರ ನಾಯಕ, ನಾಗ ಮಹಾಶಯ, ಈಶ್ವರ ಕವಿ ವಿರಚಿತಂ ಕವಿ ಜಿಹ್ವಾ ಬಂಧನಂ ಮತ್ತು ಪ್ರೊ.ಟಿ.ಎಸ್. ವೆಂಕಣ್ಣಯ್ಯ ಅವರೊಂದಿಗೆ ಸಹ ಸಂಪಾದಕತ್ವ  ಮಾಡಿದ ಹರಿಶ್ಚಂದ್ರ ಕಾವ್ಯಸಂಗ್ರಹದಿಂದ ಆಯ್ದ ಮುನ್ನುಡಿ ಗಣಕೀಕರಣಗೊಳ್ಳಲಿವೆ.

ಗಣಕೀಕರಣ ಮಾಡಿದ ಕೃತಿಗಳನ್ನು ಓದಲು (ಫೆ. 12ರ ನಂತರ): ark.sirinudi.org ನೋಡಬಹುದು. ದೂರವಾಣಿ: 080–2671 6700

ಎ.ಆರ್. ಕೃಷ್ಣಶಾಸ್ತ್ರಿ ಆಯ್ದ ಕೃತಿಗಳ ಗಣಕೀಕರಣ: ಕೃಷ್ಣಶಾಸ್ತ್ರಿ ಅವರ ಭಾವಚಿತ್ರ ಅನಾವರಣ–ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರಿ, ಎ.ಆರ್.ಕೃ. ಕುರಿತು ಕೈಪಿಡಿ ಬಿಡುಗಡೆ– ಶತಾವಧಾನಿ ಆರ್. ಗಣೇಶ್, ಕೃತಿಗಳ ಗಣಕೀಕರಣ ಕುರಿತು ಮಾತುಗಳು–ಡಾ.ಸಿ.ಎಸ್. ಯೋಗಾನಂದ. ಅಂತರ್ಜಾಲಕ್ಕೆ ಕೃತಿಗಳ ಸೇರ್ಪಡೆಗೆ ಚಾಲನೆ, ಅಧ್ಯಕ್ಷತೆ–ಪ್ರೊ.ಜಿ. ವೆಂಕಟಸುಬ್ಬಯ್ಯ. ಆಯೋಜನೆ–ಎ.ಆರ್. ಕೃ. ಕುಟುಂಬ. ಸ್ಥಳ– ಪೈವಿಸ್ತಾ, 2/1, 17ನೇ ಕ್ರಾಸ್, ಬನಶಂಕರಿ ಎರಡನೇ ಹಂತ, ಕೆನರಾ ಬ್ಯಾಂಕ್ ಎದುರು. ಬೆಳಿಗ್ಗೆ 10

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !