ಹೊಸನಗರ: ತಾಲ್ಲೂಕಿನ ಆಲಗೇರಿ ಮಂಡ್ರಿ ಗ್ರಾಮದಲ್ಲಿ ಅಂಗಡಿ ಮಳಿಗೆ ಶಾರ್ಟ್ ಸರ್ಕೀಟ್ನಿಂದ ಸಂಪೂರ್ಣ ಭಸ್ಮವಾದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.

ಆಲಗೇರಿ ಮಂಡ್ರಿಯ ಅಂಗಡಿ ಮಾಸ್ತರ್ ಎಂಬುವವರ ಮಳಿಗೆಯನ್ನು ಬಾಡಿಗೆಗೆ ಪಡೆದಿದ್ದ ಅಣ್ಣಪ್ಪ ಶೆಟ್ಟಿ ಎಂಬುವವರ ಅಂಗಡಿಯು ಶಾರ್ಟ್ ಸರ್ಕೀಟ್ನಿಂದಾಗಿ ಸುಟ್ಟು ಹೋಗಿದೆ. ಅಂಗಡಿಯ ಒಳಗಿದ್ದ (23 ವರ್ಷ) ಯುವತಿ ವೀಣಾ ಎಂಬುವವರು ತೀವ್ರವಾದ ಸುಟ್ಟಗಾಯವಾಗಿದ್ದು, ಸಾಗರ ಆಸ್ಪತ್ರೆಗೆ ಸಾಗಿಸಲಾಗಿದೆ. ಸುಮಾರು 1 ಲಕ್ಷಕ್ಕೂ ಹೆಚ್ಚು ಮೌಲ್ಯದ ದಾಸ್ತಾನು ಮಾಡಿದ್ದ ಸಾಮಾನು- ಸರಂಜಾಮುಗಳು ಸಂಪೂರ್ಣ ಭಸ್ಮವಾಗಿದೆ ಎನ್ನಲಾಗಿದೆ.

ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರ ನೆರವಿನಿಂದಾಗಿ ಬೆಂಕಿಯನ್ನು ಆರಿಸಿದ್ದು ಹೆಚ್ಚಿನ ಅನಾಹುತ ತಪ್ಪಿದೆ ಎನ್ನಲಾಗಿದೆ. ಹೊಸನಗರ ಪೊಲೀಸರು ಕೇಸು ದಾಖಲು ಮಾಡಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.