ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರೆಸ್ ಮತ್ತು ಭಾರತ ಯಾತ್ರಾ ಕೇಂದ್ರ: ಶುಕ್ರವಾರ ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ ಅವರಿಂದ ಬಿ.ಎಲ್. ಶಂಕರ್ ಮತ್ತು ಪ್ರೊ. ವೆಲೇರಿಯನ್ ರೋಡ್ರಿಗಸ್ ರಚಿಸಿರುವ ‘ದಿ ಇಂಡಿಯನ್ ಪಾರ್ಲಿಮೆಂಟ್- ಎ ಡೆಮಾಕ್ರಸಿ ಅಟ್ ವರ್ಕ್’ ಪುಸ್ತಕ ಲೋಕಾರ್ಪಣೆ, ಅತಿಥಿ: ನಿವೃತ್ತ ಸರ್ವೋಚ್ಚ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ. ಅಧ್ಯಕ್ಷತೆ: ಡಾ. ಯು.ಆರ್. ಅನಂತಮೂರ್ತಿ.

ಭಾರತೀಯ ಸಂಸತ್ ಕುರಿತು ರಚಿಸಿರುವ 350 ಪುಟಗಳಿಗೂ ಮಿಕ್ಕಿದ ಸಂಶೋಧನಾತ್ಮಕ ಗ್ರಂಥ ಇದು. ಕುಸಿಯುತ್ತಿರುವ ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಅಧ್ಯಕ್ಷೀಯ ಮಾದರಿಯ ಆಡಳಿತ ವ್ಯವಸ್ಥೆಯ ಕುರಿತ ವಾದವನ್ನು ಇಲ್ಲಿ ಚರ್ಚಿಸಲಾಗಿದೆ. ಜನಪ್ರತಿನಿಧಿಗಳು ರಾಷ್ಟ್ರೀಯ ವಿಚಾರಗಳಿಗಿಂತ ತಮ್ಮ ಕ್ಷೇತ್ರ, ಪ್ರಾಂತ್ಯದ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯ ನೀಡುತ್ತಿದ್ದಾರೆ ಎಂಬ ಅಭಿಪ್ರಾಯವನ್ನೂ ಒರೆಗೆ ಹಚ್ಚಲಾಗಿದೆ.

ಸದನದೊಳಗೆ ಕುಸಿಯುತ್ತಿರುವ ಚರ್ಚೆಯ ಗುಣಮಟ್ಟ, ನೈತಿಕ ಮೌಲ್ಯಗಳ ಅಧಃಪತನ, ಜಾತಿ, ಶಿಕ್ಷಣ, ವೃತ್ತಿ, ವರ್ಗ, ಜನಾಂಗೀಯ ಹಿನ್ನೆಲೆಗಳ ಅಲೆಯಲ್ಲಿ ಬದಲಾಗುತ್ತಿರುವ ಭಾರತೀಯ ಸಂಸತ್ತಿನ ರೂಪದ ಕುರಿತು ವಿಶ್ಲೇಷಿಸಲಾಗಿದೆ.ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಸಂಜೆ 6.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.