ಬ ಹು ನಿರೀಕ್ಷಿತ ಬದಲಾವಣೆ ಇದೀಗ ಬಂದಿದೆ! 2011ರ ಮೇ ತಿಂಗಳಲ್ಲಿ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಗಳ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಬದಲಾದ ರೂಪುರೇಷೆ ಬಂದಿದೆ!

ಕಳೆದ ಅಕ್ಟೋಬರ್ 18ರಂದು ಕೇಂದ್ರ ಸರ್ಕಾರದ ಸಿಬ್ಬಂದಿ, ಮತ್ತು ತರಬೇತಿ ಇಲಾಖೆಯು ಹೊರಡಿಸಿರುವ ಆದೇಶದನ್ವಯ (ಆದೇಶ ಸಂಖ್ಯೆ:13018/4/2008ಎಐಎಸ್-1) ಕೇಂದ್ರ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆ 2011ರ ನಿಗದಿಪಡಿಸಲಾಗಿರುವ ಪಠ್ಯಕ್ರಮದ ವಿವರ ಹೀಗಿದೆ:

ಪತ್ರಿಕೆ 1
ಸಾಮಾನ್ಯ ಜ್ಞಾನ - 200 ಅಂಕಗಳು - ಅವಧಿ ಎರಡುಗಂಟೆ
*ಪ್ರಸ್ತುತ ವಿದ್ಯಮಾನ - ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ಸಂಗತಿಗಳು
* ಭಾರತದ ಇತಿಹಾಸ ಮತ್ತು ಭಾರತೀಯ ಸ್ವಾತಂತ್ರ್ಯ ಸಂಗ್ರಾಮ
* ಭಾರತ ಮತ್ತು ಪ್ರಪಂಚದ ಭೂಗೋಳ - ಭೌಗೋಳಿಕ, ಸಾಮಾಜಿಕ, ಆರ್ಥಿಕ ಅಂಶಗಳು
* ಭಾರತದ ರಾಜಕೀಯ ವ್ಯವಸ್ಥೆ ಮತ್ತು ಆಡಳಿತ ವ್ಯವಸ್ಥೆ - ಸಂವಿಧಾನ, ರಾಜಕೀಯ ಪದ್ಧತಿ,ಪಂಚಾಯತ್ ರಾಜ್, ಸಾರ್ವಜನಿಕ ಯೋಜನೆಗಳು, ಹಕ್ಕುಗಳು, ಪ್ರಚಲಿತ ಸಂಗತಿಗಳು ಇತ್ಯಾದಿ.
*ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ - ಸುಸ್ಥಿರ ಅಭಿವೃದ್ಧಿ, ಬಡತನ ನಿರ್ಮೂಲನೆ, ಜನಸಂಖ್ಯೆ, ಸಾಮಾಜಿಕ ಕ್ಷೇತ್ರದ ವಿವಿಧ ಯೋಜನೆಗಳು, ಗ್ರಾಮೀಣ ಜನಜೀವನ ಸುಧಾರಣೆಯ ಎಲ್ಲ ಯೋಜನೆಗಳು, ಇತ್ಯಾದಿ.
* ಪರಿಸರ ಅಧ್ಯಯನ, ಜೀವಿ ಪರಿಸರ, ಜೈವಿಕ ವೈವಿಧ್ಯ, ಹವಾಮಾನ ವೈಪರೀತ್ಯ ಇತ್ಯಾದಿಗಳಿಗೆ ಸಂಬಂಧಿಸಿದ ಸಂಗತಿಗಳು, ಸಮಸ್ಯೆಗಳು ಇತ್ಯಾದಿ.
* ಸಾಮಾನ್ಯ ವಿಜ್ಞಾನ.

ಪತ್ರಿಕೆ 2
*ಸಿವಿಲ್ ಸರ್ವೀಸ್ ಆಪ್ಟಿಟ್ಯೂಡ್ - 200 ಅಂಕಗಳು - ಅವಧಿ ಎರಡು ಗಂಟೆ
* ಕಾಂಪ್ರಹೆನ್ಷನ್ (ನಿಗದಿಗೊಳಿಸಿದ ಮಾಹಿತಿಯನ್ನು
ಅರ್ಥೈಸಿಕೊಂಡು ಉತ್ತರಿಸುವುದು)
* ಸಂವಹನ ಕೌಶಲಗಳು ಮತ್ತು ವ್ಯಕ್ತಿಗತ ಕೌಶಲಗಳು (ಇಂಟರ್ಪರ್ಸನಲ್ ಸ್ಕಿಲ್ಸ್)
* ತಾರ್ಕಿಕ ಆಲೋಚನೆ ಮತ್ತು ತುಲನಾತ್ಮಕ ಸಾಮರ್ಥ್ಯ- ತೀರ್ಮಾನ ಕೈಗೊಳ್ಳುವಿಕೆ / ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ
* ಸಾಮಾನ್ಯ ಬೌದ್ಧಿಕ ಸಾಮರ್ಥ್ಯ
* ಸಂಖ್ಯಾ ಮೂಲಾಂಶಗಳು (ಸಂಖ್ಯೆಗಳು ಮತ್ತು ಅವುಗಳಿಗಿರುವ ಸಂಬಂಧ, ಏರಿಕೆ ಮತ್ತು ಇಳಿಕೆ ಕ್ರಮ ಇತ್ಯಾದಿ),
* 4ದತ್ತಾಂಶ ವಿಶ್ಲೇಷಣೆ (ಚಾರ್ಟ್, ಗ್ರಾಫ್, ಟೇಬಲ್, ದತ್ತಾಂಶ
ಇತ್ಯಾದಿ - ಹತ್ತನೇ ತರಗತಿಯ ಮಟ್ಟದ್ದು)

* ಇಂಗ್ಲಿಷ್ ಕಾಂಪ್ರೆಹನ್ಷನ್
ಇತ್ತೀಚೆಗೆ ಅಖಿಲ ಭಾರತಮಟ್ಟದಲ್ಲಿ ನಡೆಯುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳ (ಕಾಮನ್ ಅಡ್ಮಿಷನ್ ಟೆಸ್ಟ್ - ಕ್ಯಾಟ್) ಮಾದರಿಯಲ್ಲಿ ಈ ಎರಡನೇ ಪತ್ರಿಕೆ ರಚಿತವಾಗಿದೆ. ಇವುಗಳಿಗೆ ಸಿದ್ಧತೆ ಮಾಡಿಕೊಳ್ಳಲು ಎನ್.ಸಿ.ಇ.ಆರ್.ಟಿ. ಪ್ರಕಟಿಸಿರುವ ಕೇಂದ್ರೀಯ ವಿದ್ಯಾಲಯಗಳ 6 ರಿಂದ 12ನೇ ತರಗತಿವರೆಗಿನ ಪುಸ್ತಕಗಳನ್ನು, ಸರ್ಕಾರದ ಅಧಿಕೃತ ಜಾಲತಾಣಗಳನ್ನು, ಸರ್ಕಾರಿ ಗೆಝೆಟ್ ಮತ್ತು ಮ್ಯಾಗಝಿನ್ಗಳನ್ನು, ವಾರ್ಷಿಕ ಪುಸ್ತಕಗಳನ್ನು, ಐಚ್ಛಿಕ ವಿಷಯದ ಪುಸ್ತಕ ಮತ್ತು ನೋಟ್ಸ್ ಓದಬಹುದು.

ಪೂರ್ವಭಾವಿ ಪರೀಕ್ಷೆಯ ಈ ಎರಡು ಪತ್ರಿಕೆಗಳನ್ನು ಬಿಟ್ಟರೆ ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆಯ (ಸಂದರ್ಶನ) ಪ್ಯಾಟರ್ನ್ ಈಗ ಇರುವಂತೆಯೇ ಮುಂದುವರಿಯಲಿದೆ. ಮುಂದೆ ಅಗತ್ಯ ಬದಲಾವಣೆಗಳನ್ನು ಸೂಚಿಸುವ ಸಾಧ್ಯತೆಗಳೂ ಇವೆ.
ವೆಬ್ಸೈಟ್ ವಿಳಾಸ : www.upscportal.com

2011 ರ ಜೂನ್ 12ರಂದು ಪೂರ್ವಭಾವಿ ಪರೀಕ್ಷೆ

ಕೇಂದ್ರ ಲೋಕಸೇವಾ ಆಯೋಗ ನಡೆಸುವ ಗೆಝೆಟೆಡ್ ಪ್ರೊಬೆಷನರ್ಗಳ ನೇಮಕಾತಿ ಪೂರ್ವಭಾವಿ (ಪ್ರಿಲಿಮಿನರಿ) ಪರೀಕ್ಷೆಯ 2011ರ ವೇಳಾಪಟ್ಟಿ ಇದೀಗ ಪ್ರಕಟವಾಗಿದೆ. ಈ ಬಾರಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು ಸಂಬಂಧಪಟ್ಟ ಪ್ರಕಟಣೆಯು ಲೋಕಸೇವಾ ಆಯೋಗದ ವೆಬ್ಸೈಟ್, ಎಂಪ್ಲಾಯ್ಮೆಂಟ್ ನ್ಯೂಸ್ ಪತ್ರಿಕೆಗಳಲ್ಲಿ ಮತ್ತು ಪ್ರಮುಖ ಸುದ್ದಿ ಪತ್ರಿಕೆಗಳಲ್ಲಿ 2011 ರ ಫೆಬ್ರವರಿ 19 ರಂದು ಪ್ರಕಟವಾಗಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ 2011 ರ ಮಾರ್ಚ್ 21 ಆಗಿದ್ದು ಪೂರ್ವಭಾವಿ ಪರೀಕ್ಷೆ ನಡೆಯುವ ದಿನ 2011 ರ ಜೂನ್ 12 ಆಗಿರುತ್ತದೆ. ಹಾಗೆಯೇ ಮುಖ್ಯ ಪರೀಕ್ಷೆಗಳು 2011 ರ ಅಕ್ಟೋಬರ್ 29 ರಿಂದ ಆರಂಭಗೊಳ್ಳುತ್ತವೆ ಎಂದು ಲೋಕಸೇವಾ ಆಯೋಗದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.