ಶನಿವಾರ, ಜೂನ್ 19, 2021
28 °C

ಕಸ ಸಂಗ್ರಹಣೆ ಸಮರ್ಪಕವಾಗಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತರಹಳ್ಳಿ, ನೇತಾಜಿ ರಸ್ತೆಯ 3ನೇ ಮುಖ್ಯರಸ್ತೆಯಲ್ಲಿ ಕಸ ಸಂಗ್ರಹಣೆ ಸಮರ್ಪಕವಾಗಿಲ್ಲ. ಪಾಲಿಕೆ ವಾಹನ ಬಂದರೂ ಎಲ್ಲಿಯೋ ಒಂದು ಕಡೆ ನಿಂತಿರುತ್ತದೆ. ಇದರಿಂದಾಗಿ ಇಲ್ಲಿಯ ಸುತ್ತಮುತ್ತಲಿನ ನಾಗರಿಕರಿಗೆ ತೊಂದರೆಯಾಗುತ್ತದೆ. ಮಹಿಳೆಯರು ಕಸ ತೆಗೆದುಕೊಂಡು ಹೋಗಿ ದೂರ ಎಸೆದು ಬರುವ ಪರಿಸ್ಥಿತಿಯಿದೆ.ಹೊಸ ಅಪಾರ್ಟ್‌ಮೆಂಟ್‌ಗಳ ಕಟ್ಟಡಗಳಿಂದಲೂ ದೂಳು ಬರುತ್ತಿದೆ. ಆದ್ದರಿಂದ ಸ್ವಚ್ಛತಾ ವಾಹಿನಿಯು ಪ್ರತಿ ರಸ್ತೆಯ ಪ್ರಾರಂಭದಿಂದ ಕೊನೆಯವರೆಗೂ ಬಂದು ಕಸ ಸಂಗ್ರಹಿಸಿ ಹೋಗುವಂತೆ ಪಾಲಿಕೆಯ ಅಧಿಕಾರಿಗಳು ಸಿಬ್ಬಂದಿಗೆ ಸರಿಯಾದ ಮಾರ್ಗದರ್ಶನ ನೀಡಬೇಕೆಂದು ಕೋರಲಾಗಿದೆ.

–ಜೆ.ಆರ್‌.ಎ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.